Advertisement

Govt Primary School ಮುಖ್ಯಶಿಕ್ಷಕನಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ದೂರು ದಾಖಲು

06:57 PM Dec 19, 2023 | Team Udayavani |

ಹುಣಸೂರು: ಶಾಲೆಯ ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಮುಖ್ಯಶಿಕ್ಷಕನನ್ನು ಸ್ಥಳಕ್ಕೆ ಕರೆಸಬೇಕು. ಆತನ ವಿರುದ್ದ ಕಠಿಣ ಕ್ರಮವಾಗಬೇಕೆಂದು ಆಗ್ರಹಿಸಿ ತಾಲೂಕಿನ ಹೊಸವಾರಂಚಿಯ ಗ್ರಾಮಸ್ಥರು, ಪೋಷಕರು ಆಗ್ರಹಿಸಿದ ಘಟನೆ ನಡೆಸಿದೆ.

Advertisement

ಹೊಸವಾರಂಚಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ 58ವರ್ಷದ ಎಸ್.ಕೃಷ್ಣಮೂರ್ತಿಯೇ ಆರೋಪಿಯಾಗಿದ್ದು. ಈತನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ತಲೆ ಮರೆಸಿಕೊಂಡಿದ್ದಾನೆ.

ಘಟನೆಯಿಂದ ಆಕ್ರೋಶಭರಿತರಾದ ಪೋಷಕರು ಹಾಗೂ ಗ್ರಾಮಸ್ಥರು ಮಂಗಳವಾರ ಶಾಲೆ ಬಳಿ ಜಮಾಯಿಸಿ ಮುಖ್ಯಶಿಕ್ಷಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಈತ ಹಲವಾರು ದಿನಗಳಿಂದ ಶಾಲೆಯ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಅಲ್ಲದೆ ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ. ಕಳೆದ ಶನಿವಾರ ಶಾಲೆಗೆ ಗೈರುಹಾಜರಾಗಿದ್ದನ್ನು ಕಂಡ ಮಕ್ಕಳು ಸಹ ಶಿಕ್ಷಕರ ಮುಂದೆ ತಮ್ಮಗೋಳನ್ನು ಹೇಳಿಕೊಂಡಿದ್ದಾರೆ.

ಪೋಷಕರಿಗೂ ಮಾಹಿತಿ ನೀಡಿದ್ದಾರೆ. ಈ ವಿಷಯವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮುಟ್ಟಿಸಿದ್ದಾರೆ.

ವಿಷಯ ತಿಳಿದ ಬಿಇಓ ರೇವಣ್ಣ ಮತ್ತಿತರ ಅಧಿಕಾರಿಗಳ ತಂಡ ಮಂಗಳವಾರದಂದು ಶಾಲೆಗೆ ಭೇಟಿ ನೀಡಿತ್ತು. ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಮಕ್ಕಳು ಮುಖ್ಯ ಶಿಕ್ಷಕ ಕೃಷ್ಣಮೂರ್ತಿಯಿಂದ ಆಗುತ್ತಿದ್ದ ಕಿರುಕುಳವನ್ನು ಅಧಿಕಾರಿಗಳೊಂದಿಗೆ ತಿಳಿಸಿದ್ದಾರೆ.

Advertisement

ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿರುವ ಮುಖ್ಯ ಶಿಕ್ಷಕನನ್ನು ಕೆಲಸದಿಂದಲೇ ವಜಾ ಮಾಡಬೇಕೆಂದು ಪೋಷಕರು, ಗ್ರಾಮದ ಮುಖಂಡರು ಆಗ್ರಹಿಸಿದರು.

ಈ ಬಗ್ಗೆ ಬಿಇಓ ರೇವಣ್ಣರಿಗೆ ದೂರು ನೀಡಿದ ಗ್ರಾಮದ ಯಜಮಾನರಾದ ಮಹೇಶ್, ಶಿವಕುಮಾರ್, ಎಸ್.ಡಿ.ಎಂ.ಸಿ.ಅಧ್ಯಕ್ಷೆ ರಜನಿ, ಮುಖಂಡರಾದ ಮಹೇಶ್, ಎಚ್.ಕೆ.ರಮೇಶ್, ಚಂದ್ರೇಗೌಡ ಒತ್ತಾಯಿಸಿದರು.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಆರೋಪಿ ವಿರುದ್ದ ಕ್ರಮವಹಿಸುವಂತೆ ಡಿಡಿಪಿಐಯವರಿಗೆ ವರದಿ ನೀಡಿದ್ದೇನೆ. ಅಲ್ಲದೇ ಗ್ರಾಮಾಂತರ ಪೊಲೀಸ್ ಠಾಣೆಗೂ ಸಹ ಕ್ರಮಕ್ಕೆ ದೂರು ನೀಡಲಾಗಿದೆ ಎಂದು ಬಿಇಓ ರೇವಣ್ಣ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next