ಭೋಪಾಲ್: ಮದುವೆ ಮನೆಯ ಕುಟುಂಬದವರನ್ನು ಕರೆದುಕೊಂಡು ಹೋಗುತ್ತಿದ್ದ ಟ್ರಕ್ ನದಿಗೆ ಉರುಳಿ ಬಿದ್ದು ಐದು ಮಂದಿ ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ (ಜೂ.27 ರಂದು) ನಡೆದಿದೆ.
ಘಟನೆಯಲ್ಲಿ 65 ವರ್ಷದ ಮಹಿಳೆ, 18 ವರ್ಷದ ಪುರುಷ ಮತ್ತು ಎರಡರಿಂದ ಮೂರು ವರ್ಷದೊಳಗಿನ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಮೃತರು ಗ್ವಾಲಿಯರ್‌ನ ಬಿಲ್ಹೇಟಿ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ.
ಇದನ್ನೂ ಓದಿ: ಬಿಜೆಪಿ ಶಿಸ್ತಿನ ಪಕ್ಷ; ಕಾಂಗ್ರೆಸ್ ನ ಅಶಿಸ್ತು ನಮ್ಮ ಪಕ್ಕಕ್ಕೂ ಕಾಲಿಟ್ಟಿದೆ: ಈಶ್ವರಪ್ಪ
ಟ್ರಕ್ ಮದುವೆಗಾಗಿ ವಧುವಿನ ಕುಟುಂಬವರನ್ನು ಕರೆದುಕೊಂಡು ಟಿಕಮ್‌ಘರ್‌ನಿಂದ ಜಾತಾರಾ ಹೋಗುತ್ತಿದ್ದ ವೇಳೆ ಬುಹಾರಾ ಗ್ರಾಮದ ಬಳಿ ನದಿ ದಂಡೆಯ ಬಳಿ ಟ್ರಕ್ ನ ಚಕ್ರ ನದಿಯೆಡೆಗೆ ಜಾರಿದೆ. ಪರಿಣಾಮ ಒಮ್ಮೆಗೆ ಟ್ರಕ್ ನದಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. 24 ಮಂದಿ ಗಾಯಗೊಂಡಿದ್ದಾರೆ. ಇನ್ನು ಕೆಲವರು ನಾಪತ್ತೆಯಾಗಿದ್ದಾರೆ ಅವರ ಹುಡುಕಾಟ ಮುಂದುವರೆದಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಹೇಳಿದ್ದಾರೆ.