Advertisement
ಮಂಕು ಕವಿದು ಸದಾ ನಿಷ್ಕ್ರಿಯರಾಗಿರುವ ಮಕ್ಕಳು ಎಷ್ಟೋ ಮನೆಯಲ್ಲಿ ಮಂಕು ಕವಿದಂತೆ ಇರುವ ಮಕ್ಕಳು ಕಾಣಸಿಗುತ್ತಾರೆ. ಇವರ ಜಾತಕಗಳಲ್ಲಿ ನಿಸ್ಸಂದೇಹವಾಗಿ ಬುಧ ಮತ್ತು ಚಂದ್ರ ವಿಷಮ ಸಂಯೋಜನೆಗಳು ಹರಳು ಗಟ್ಟಿರುತ್ತದೆ. ಬುದ್ಧಿಮಾಂದ್ಯ ಎಂದರೆ ಹುಚ್ಚು ಹಿಡಿದ ಮಕ್ಕಳು ಎಂದು ಪರಿಗಣಿಸಬಾರದು. ಆದರೆ ಅವರ ಬಾಲ್ಯದಲ್ಲಿ ಸಹಜವಾಗಿ ಇರಬೇಕಾದ ಲವಲವಿಕೆ, ಚೂಟಿತನ, ಹುರುಪು ಉತ್ಸಾಹಗಳು ಕಾಣಸಿಗುವುದಿಲ್ಲ. ಎಲ್ಲೋ ನೋಡುತ್ತಿರುವ ಮಕ್ಕಳು, ಬೆದರಿದಂತೆ ಸಪ್ಪೆ ಮೋರೆ ಹಾಕಿರುವ ಮಕ್ಕಳು, ಎದ್ದು ಲಗುಬಗೆಯಿಂದ ಹಿರಿಯರ ಸಹಾಯವಿಲ್ಲದೆ ಚಿನಕುರುಳಿಯಂತೆ ಓಡಾಡುವ ಮಕ್ಕಳಾಗಿ ಇವರು ಇರುವುದಿಲ್ಲ. ಬೌದ್ಧಿಕ ಕ್ಷಮತೆ ಇರದೆಯೇ ಚಂದ್ರ ಮಂಡಲವನ್ನು ಸಂವೇದನೆಗಳಿಗೆ ದೂಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಿಶ್ಚಲರಾಗಿರುತ್ತಾರೆ. ಎಷ್ಟು ಜಡತ್ವ ಬಂದು ಬಿಡಬಹುದೆಂದರೆ ಅನ್ಯರ ಮಾತು ಬಾಯಿ, ತುಟಿ ಚಲನೆಗಳನ್ನು ಗಮನಿಸದೆ ಈ ಮಕ್ಕಳು ಯುಕ್ತ ವಯಸ್ಸಿನಲ್ಲಿ ಮಾತನಾಡಲು ಹಿಂದೇಟು ಹಾಕಬಹುದು. ಹೇಳಿದ್ದು ಅರ್ಥವಾದರೂ ತಮಗನಿಸಿದ್ದನ್ನು ವ್ಯಕ್ತ ಪಡಿಸಲು ಸಾಧ್ಯವಾಗದೆ ಹೋಗುವ ಅಸಹನೀಯ ಸ್ಥಿತಿಗೆ ತಲುಪುತ್ತಾರೆ. ತೇಜಸ್ಸೇ ಇರದ ಕಣ್ಣುಗಳಲ್ಲಿ ಪೇಲವವಾಗಿ ಕಾಣಿಸಿಕೊಳ್ಳುತ್ತಾರೆ. ಅರಿವಿಗೆ ಬರದೆ ಬಾಯಲ್ಲಿ ಜೊಲ್ಲು ಸುರಿಯುವ ಸಾಧ್ಯತೆ ಕೂಡಾ ಇರುತ್ತದೆ.
ಬಹುತೇಕವಾಗಿ ಬೌದ್ಧಿಕ ಬೆಳವಣಿಗೆಗೆ ಬುಧ ಕಾರಣನಾಗಿರುತ್ತಾನೆ. ಸೂರ್ಯನ ಸಮೀಪದಲ್ಲಿಯೇ ಇವನ ಸಂಚಲನ ನಡೆಯುತ್ತಿರುತ್ತದೆ. ಹೀಗಾಗಿ ನಮ್ಮ ಆಷೇìಯ ವ್ಯಾಖ್ಯಾನಗಳು ಬುಧನನ್ನು ಸೂರ್ಯ ಪ್ರಿಯಕರೋ ವಿದ್ವಾನ್ ಎಂದು ಕರೆದಿವೆ. ಸೂರ್ಯನ ಬಳಿ ಭಾರತೀಯ ಪರಂಪರೆ ಬುದ್ಧಿಯನ್ನು ಪ್ರಚೋದಿಸಿ ಎಂದು ಪ್ರಾರ್ಥಿಸುತ್ತದೆ. ಉತ್ಪಾತ ರೂಪಿ ಜಗತಾ ಚಂದ್ರಪುತ್ರೋ ಮಹಾದ್ಯುತಿ ಎಂದು ಕೂಡಾ ನಮ್ಮ ಪ್ರಾರ್ಥನೆಗಳು, ಬುಧನ ಸಲುವಾಗಿಯೇ ವಿಶೇಷವಾಗಿ ಉಲ್ಲೇಖೀಸುತ್ತದೆ. ಬುಧನ ಹೊಳಪು ರೂಪದಲ್ಲಿ ಅಪ್ರತಿಮ ಎಂಬ ವಿಶ್ಲೇಷಣೆಯನ್ನು ಭಾರತೀಯ ಶಾಸ್ತ್ರ ಸ್ತೋತ್ರ ಮೀಮಾಂಸೆಗಳಲ್ಲಿ ನಡೆಸುವಂತೆ ಮಾಡಿದೆ. ಬುಧ ಮತ್ತು ಸೂರ್ಯರು ಒಂದೇ ಮನೆಯಲ್ಲಿ ಒಗ್ಗೂಡಿದ್ದರೆ ಬುಧಾದಿತ್ಯ ಯೋಗ ಎಂದು ಕರೆಯುತ್ತಾರೆ. ಜಾತಕ ಶಾಸ್ತ್ರತಜ್ಞರು ಭಾರತೀಯ ಜೋತಿಷ್ಯದಲ್ಲಿ ಈ ವಿಚಾರಗಳು ಇವೆ. ಬುಧನು ಕನಿಷ್ಟ 9 ಡಿಗ್ರಿಗಳಷ್ಟಾದರೂ ಅಂತರವನ್ನು ಕಾಯ್ದುಕೊಳ್ಳದೆ ಇದ್ದರೆ ಸೂರ್ಯನ ಪ್ರಭೆಯ ಎದುರು ಮಂಕಾಗಿ ಬಿಡುತ್ತಾನೆ. ಇದನ್ನು ಅಸ್ತಂಗತ ದೋಷ ಎಂಬುದಾಗಿ ಜೋತಿಷ್ಯ ಶಾಸ್ತ್ರ ಹೇಳುತ್ತದೆ. ಬುಧಾದಿತ್ಯ ಯೋಗಯೋಗದ ಬಗ್ಗೆ ಮುಂದೊಂದು ಬಾರಿ ಇದೇ ಅಂಕಣದಲ್ಲಿ ಚರ್ಚಿಸೋಣ. ಹಸ್ತಂಗತ ದೋಷದ ಒಳಿತು ಕೆಡಕುಗಳ ಬಗ್ಗೆ ಸೂಕ್ತವಾದ ವಿವರಗಳ ಬಗ್ಗೆ ಯೂ ಇನ್ನೊಂದು ಬಾರಿ ಚರ್ಚಿಸೋಣ.
ಸದ್ಯ ಪ್ರಮುಖವಾಗಿ ಹೇಳಬೇಕಾದ್ದು ವಿದ್ವತ್ತನ್ನು ಕೊಡಬೇಕಾದ ಬುಧ, ವಿಷಮ ಸಂಯೋಜನೆಗಳ ಸಂದರ್ಭದಲ್ಲಿ ಮಂಕುತನ ಕವಿಸುತ್ತಾನೆ. ಧೀಃ ಶಕ್ತಿಗೆ ಚಾತುರ್ಯಕ್ಕೆ ಬೇಕಾದ ಸಂವೇದನೆಗಳು ಸೊರಗುತ್ತವೆ. ಚಂದ್ರನೂ ದುರ್ಬಲನಾಗಿದ್ದರೆ ಬುಧನ ಉಪಟಳದಲ್ಲಿ ಇನ್ನಿಷ್ಟು ಗಾಢವಾದ ಮೊನಚು ಉದ್ಭವಿಸುತ್ತದೆ. ಇದರಿಂದ ಬಾಲಾರಿಷ್ಟದ ಬಿಕ್ಕಟ್ಟುಗಳು ಉಲ್ಬಣವಾಗುತ್ತದೆ. ಚಂದ್ರನಿಗೆ ಮನಸ್ಸನ್ನು ನಿಗ್ರಹಿಸುವ ದೃಢತೆ ಒದಗದು.
Related Articles
ಚಂದ್ರ ನೋಡಲು ಗಾತ್ರದಲ್ಲಿ ಪುಟ್ಟ ಬಟಾಣಿ ಕಾಳು ಆದರೂ ಆತನ ಭೂಮಿಯ ಅತಿ ಹತ್ತಿರವೇ ಇರುವ ಸಾಮಿಪ್ಯದಿಂದ ಭೂಮಿಯ ಮೇಲೆ ಅಗಾಧ ಪರಿಣಾಮ ಬೀರುತ್ತಾನೆ. ಇದು ಬರೀ ಮನುಷ್ಯನ ಮೇಲಲ್ಲ ಭೂಮಿಯ ಸರ್ವ ಜೀವಿಗಳ ಮೇಲೂ ಆತನ ಪ್ರಭಾವವಿದೆ. ಸೂರ್ಯನಿಂದ ಪಡೆದ ಬೆಳಕನ್ನು ಹೊರಹೊಮ್ಮಿಸುವ ವಿಧಾನದಲ್ಲಿ ಅವನು ಯೋಚನಾಶಕ್ತಿಯು ಪ್ರವಹಿಸುವ ಮೆದುಳಿನ ಮೇಲೆ ನಿಯಂತ್ರಣ ಪಡೆಯಲು ಕಾರಣನಾಗುತ್ತಾನೆ. ಹೀಗಾಗಿಯೇ ಅವನ ಶೀತಲ ಬೆಳ್ಳಿಯ ಬೆಳಕಿನ ಸೌರಭಕ್ಕಾಗಿ ನಮ್ಮ ಶಾಸ್ತ್ರ ಅವನನ್ನು ರೋಹಿಣೀಶ ಎಂದು ಕರೆದಿದೆ. ರೋಹಿಣಿ ನಕ್ಷತ್ರ ಅವನ ಅಧಿಪತ್ಯಕ್ಕೆ ಬರುವ ಪ್ರಧಾನವಾಗಿ ಸ್ತ್ರೀ ಗುಣಧರ್ಮಗಳನ್ನು ಹೊಂದಿದೆ ಎಂಬುದು ನಮ್ಮ ನಂಬಿಕೆ. ಈ ನಕ್ಷತ್ರದ ವಿಸ್ತಾರದ ಪ್ರಭಾವ ಏನು ಎನ್ನುವುದನ್ನು ನಾವು ಗಮನಿಸಬೇಕು. ರೋಹಿಣಿ ನಕ್ಷತ್ರದಲ್ಲಿ ಚಂದ್ರ ಉಚ್ಚನಾಗಿ, ಪರಮಾಧಿಕ ಬಲ ಪಡೆದಿರುತ್ತಾನೆ. ಹೀಗಾಗಿ ಚಂದ್ರ ರೋಹಿಣಿಯ ಅಧೀನ. ಈತ ಸುಧಾಮೂರ್ತಿ, ಸುಧಾಗಾತ್ರ, ಸುಧಾಶನನೂ ಹೌದು. ಅಂದರೆ ಸೊಗಸಾದ ಸುಧೆಗೆ ಸಮಾನವಾದ ಸುಹಾಸಕರತೆ ಸಂಪನ್ನತೆ ಇತ್ಯಾದಿಗಳನ್ನು ಚಂದ್ರ ಪ್ರಚಂಡ ಬಲಯುತನಾದಾಗ ಒದಗಿಸುತ್ತಾನೆ. ಆದರೆ ಚಂದ್ರ ದುಷ್ಟನಾಗುವುದು ದುರ್ಬಲನಾದಾಗ.
Advertisement
ಶನೈಶ್ಚರ, ರಾಹು, ಕೇತು, ಕುಜ, ಸೂರ್ಯರ ಸಂಪರ್ಕ ಬಂದಾಗ ಕ್ರಮವಾಗಿ ವಿಳಂಬವಾಗುವ ಕೆಲಸಗಳ ಸಂದರ್ಭದಲ್ಲಿ ಮೈಪರಚಿಕೊಳ್ಳುವ ದುರ್ಬಲತೆ ಮನೊ ವೇದಿಕೆಯಲ್ಲಿ ಉನ್ಮಾದ ಅಸಹನೆ ಧನನಷ್ಟ ಬುದ್ಧಿ ಕಲ್ಪಗಳಿಗೆ ಕಾರಣನಾಗುತ್ತಾನೆ. ಬಾಲಾರಿಷ್ಟದ ಸಂದರ್ಭದಲ್ಲಿ ಬುಧನೂ, ಚಂದ್ರನೂ, ತಾಳಮೇಳ ಕಳೆದುಕೊಂಡು ಕ್ರಿಯಾಶೀಲತೆಯಿಂದ ಮುಖರಾಗುತ್ತಾರೆ. ಕ್ರಿಯಾಶೂನ್ಯತೆ ಕಾಂತಿಮಯ ತೇಜೋಮಯ ವ್ಯಕ್ತಿತ್ವಗಳನ್ನು ಒದಗಿಸದಿರುವ ದುರ್ಭರತೆಗಳಿಗೆ ಕಾರಣರಾಗುತ್ತಾರೆ. ಯಾವ ಧನಬಲವಿರಲಿ ತಿಂದುಂಡು ಸುಖೀಸುವ ಅವಕಾಶವಿದ್ದರು ದೇಹದಲ್ಲಿ ಚಟುವಟಿಕೆಗಳಿಲ್ಲದೆ ಮಕ್ಕಳಿಗೆ ಬಾಲಾರಿಷ್ಟ ಕಾಡುತ್ತದೆ. ಬಾಲ್ಯದ ಅರಿಷ್ಟ ಎಂದರೆ ತೊಡಕು, ಅಭಾವ ಅಲೆದಾಟ, ದೈನೇಸಿ ಸ್ಥಿತಿ ಎಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಈ ಅರ್ಥಗಳನ್ನು ಮೀರಿ ಇದು ಕೊರತೆಗಳನ್ನು ವಿಸ್ತರಿಸುತ್ತದೆ. ಮಾತುಗಳನ್ನು ತೊದಲಿಸಬಹುದು. ನಡೆದಾಡಲು ವಿಳಂಬ ಮಾಡಬಹುದು. ಆಡಲು ವಿಳಂಬಗೊಳಿಸಬಹುದು. ಶಿಕ್ಷಣಕ್ಕೆ ಎಂದು ಶಾಲೆಗೆ ಸೇರಿಸಿದರೂ ಅನ್ಯ ಮಕ್ಕಳಂತೆ ಬೇಗ ಕಲಿಯಲು ಸಾಧ್ಯವಾಗದೆ ಇರಬಹುದು. ಮೆದುಳಿಗೂ ಬೆನ್ನುಹುರಿಯ ನರ ತಂತು ಜಾಲಗಳಿಗೂ ಹೊಂದಾಣಿಕೆ ಇರದೆ, ನಿಜಕ್ಕೂದಾರುಣ ಸ್ಥಿತಿಗತಿ ಎದುರಾಗಬುದು.
ಈ ಸ್ಥಿತಿಯಿಂದ ಹೊರಬರಲು ಸಾಧ್ಯವೇ? ಸಾಧ್ಯವಾಗುವಂತೆ ಕ್ರಮೇಣ ಅನ್ಯ ಗ್ರಹಗಳ ಪ್ರಭಾವದಿಂದಾಗಿ ಉತ್ತಮ ಸ್ಥಿತಿಯ ಸಂಪನ್ನ ಆವರಣಗಳೂ ತಮ್ಮ ಸುಹಾಸಕರತೆಯನ್ನು ಬೀರಬಲ್ಲವು. ಜಾತಕದ ಉಳಿದ ವಿಚಾರಗಳು ಎಷ್ಟು ಗಟ್ಟಿಯಾಗಿವೆ ಎಂಬುದರ ಮೇಲೆ ಇವು ತಿಳಿಯಬೇಕು. ರಾಹು, ಕೇತು, ಕುಜ, ಶನೈಶ್ಚರ ಸೂರ್ಯರಂಥ ಅಶುಭ ಗ್ರಹಗಳು ದುರ್ದೈವವಶಾತ್ ಹಲವು ಸಲ ನಿರಂತರ ವೈಕಲ್ಯಕ್ಕೆ ಕಾರಣವಾಗುತ್ತಾರೆ. ದುರ್ಗಾ, ಗಣಪತಿ ದತ್ತಾತ್ರೇಯ ಮಾರುತಿ ಅಥವಾ ರಾಮರûಾಸ್ತೋತ್ರ ಆರಾಧನೆ ಶಕ್ತಿ ಪೂಜಾ ಕೈಂಕರ್ಯ ಪರಿಕ್ರಮಗಳು ಒಂದು ವಿಧವಾದ ಪವಾಡಗಳನ್ನು ನಿರ್ಮಿಸುವ ಸಂಜೀನಿಯಾಗಿದೆ. ಆಧುನಿಕ ಚಿಕಿತ್ಸೆಗಳು ಆರೋಗ್ಯ ಸಂವರ್ಧನ ವಿಧಾನಗಳು ಸೋತಲ್ಲಿ, ಈ ಆಷೇìಯ ಶಕ್ತಿಗಳು ಪ್ರಯೋಜನಕ್ಕೆ ಒದಗಿದ ಉದಾಹರಣೆಗಳಿವೆ. ಅನಂತಶಾಸ್ತ್ರಿ