ನೆನಪು ಎಂಬುದು ಅಮೂಲ್ಯವಾದಂತದು. ಆ ನೆನಪುಗಳನ್ನು ಬೇರೆ ಬೇರೆ ರೀತಿಯಲ್ಲಿ ಉಳಿಸುವ ಪ್ರಯತ್ನ ಮಾಡುತ್ತೇವೆ. ನೆನಪುಗಳು ಬರಿ ನೆನಪಾಗಿಯೆ ಉಳಿದು ಬಿಡುತ್ತದೆ. ನಾವು ಕಳೆದ ಆ ಕ್ಷಣಗಳು ಬೇಕೆಂದರು ಮರಳಿ ಬಾರದು.
ಬಾಲ್ಯದ ದಿನಗಳಲ್ಲಿ ಬಹಳಷ್ಟು ಅನುಭವಗಳು ನಮ್ಮ ಜೀವನದಲ್ಲಿ ನಡೆದಿರುತ್ತದೆ. ಆ ಸುಂದರ ಕ್ಷಣಗಳನ್ನು ಒಂದೊಂದು ರೀತಿಯಲ್ಲಿ ನೆನಪು ಉಳಿಯುವಂತೆ ಮಾಡುತ್ತದೆ.
ಇನ್ನು ನಮ್ಮ ಸುಂದರ ಅನುಭಗಳ ನೆನಪಿಗಾಗಿ ಹೆಚ್ಚಾಗಿ ಗೀಚುವ ವಸ್ತು ಅಂದರೆ ಬೆಂಚು. ಬೆಂಚು ಕಂಡರೆ ಸಾಕು ನಮ್ಮ ಮನಗಳಲ್ಲಿ ಇಲ್ಲ ಸಲ್ಲದ ಕವಿತೆಗಳು, ನಮ್ಮಹೆಸರುಗಳು, ಒಂದಿಷ್ಟು ಬರಹಗಳನ್ನ ಗೀಚುವ ಬಯಕೆ ಉಂಟಾಗುತ್ತದೆ.
ನಾನು ಒಂದು ಬೆಂಚನ್ನು ಗಮನಿಸಿದಾಗ ಆ ಬೆಂಚು ತನ್ನ ಅಂತರಾಳದ ನೋವು ಹೊರಹಾಕುವಂತೆ ನನಗೆ ಭಾಸವಾಯಿತು. ನಾನು ಎಷ್ಟು ಅಂದವಾಗಿದದೆ. ತನ್ನ ಹತ್ತಿರ ಬಂದ ಮನಗಳು… ಅವರ ಮನದ ಭಾವನೆಗಳನ್ನು ಬರಹವಾಗಿ ನನ್ನ ಮೇಲೆ ಗೀಚುವಾಗ ನನ್ನ ಮನಸೆಂಬುದು ಚಿದ್ರ ಚಿದ್ರ ವಾಗಿಬಿಡುತ್ತಿದೆ. ಅದರಂತೆ ನನ್ನ ಅಂದವು ಮರೆಮಾಚುತ್ತದೆ ಎಂದು ನುಡಿದಂತೆ ಭಾಸವಾಯಿತು.
ಸುಂದರವಾಗಿ ಕಾಣುವ ಸಲುವಾಗಿ ಹರಸಾಹಾಸ ಪಡುತ್ತೇವೆ. ಸ್ವಲ್ಪ ಏನಾದರೂ ನಮ್ಮ ಅಂದವಾದ ಮುಖಕ್ಕೆ ಹಾನಿಯಾದ್ರೆ ಚಿಂತಿಸುತ್ತೇವೆ ಹಾಗೇನೆ ಬೆಂಚಿಗೆ ಜೀವ ಇಲ್ಲಂದ್ರೆ ಏನಾಯಿತು ಅದು ಸುಂದರವಾಗಿ ಕಾಣುದರಲ್ಲಿ ತಪ್ಪೇನಿದೆ.
ನಾವು ಯಾಕೆ ನಮ್ಮ ಮನದಾಳದ ಬರಹಗಳನ್ನು ಅದರ ಮೇಲೆ ಗೀಚಬೇಕು ನಾವು ಅದನ್ನು ಸ್ವತ್ಛವಾಗಿ ಇಟ್ಟುಕೊಂಡ್ರೆ ನಾವು ಇರುವ ತರಗತಿಗಳು ಸುಂದರವಾಗಿ ಕಾಣುತ್ತದೆ.
ನಮ್ಮನೆನಪುಗಳಿಗಾಗಿ ಅನುಭವಗಳನ್ನು, ಸುಂದರ ಕ್ಷಣಗಳನ್ನು, ನಮ್ಮ ಮನದ ಮಾತುಗಳನ್ನು ಬರೆಯೋದು ತಪ್ಪಲ್ಲ ಆದರೆ ಯಾವ ವಸ್ತುವಿಗೂ ತೊಂದರೆಯಾಗದಂತೆ ಯೋಚಿಸಿ ತಮ್ಮ ನೆನಪುಗಳನ್ನು ಬರೆಯುವುದು ಉತ್ತಮ. ನಮ್ಮ ಸುಂದರ ಕ್ಷಣಗಳ ಶಾಶ್ವತವಾಗಿ ಉಳಿಸುವ ಭರದಲ್ಲಿ ಸುಂದರವಾದ ಆ ಬೆಂಚುಗಳ ಸೌಂದರ್ಯ ಮರೆಮಾಚುವ ಕೆಲಸ ನಮ್ಮದಾಗಬಾರದು.
ಹಾಗಾಗಿ, ಬೆಂಚುಗಳಿಗೂ ಸ್ವತ್ಛತೆ ಸಿಗುವಂತಾಗಲಿ… ನೋಡುಗರ ಕಣ್ಣಿಗೆ ಆನಂದದ ಭಾವ ಮೂಡುವಂತಾಗಲಿ…
-ಸಾನ್ನಿಧ್ಯ ಪೂಜಾರಿ
ಸುರ್ಯ, ಬೆಳ್ತಂಗಡಿ