Advertisement

ಜುಲೈಯಲ್ಲಿ ದಾಖಲೆಯ 113ಕ್ಕೂ ಅಧಿಕ ಕರೆ ಸ್ವೀಕರಿಸಿದ ಚೈಲ್ಡ್‌ಲೈನ್‌

01:25 AM Jul 30, 2021 | Team Udayavani |

ಮಂಗಳೂರು: ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಯ ಡಿಯಲ್ಲಿ ದಿನದ 24 ಗಂಟೆಗಳ ಮಕ್ಕಳಿಗೆ ತುರ್ತು ಸೇವೆಯನ್ನು ನೀಡುತ್ತಿರುವ  ಚೈಲ್ಡ್‌ ಲೈನ್‌-1098 ದ.ಕ.ಜಿಲ್ಲಾ ಕಚೇರಿಗೆ 80ರಷ್ಟು ಬರುತ್ತಿದ್ದ ಪ್ರಕರಣ ಗಳು ಜುಲೈ ತಿಂಗಳಲ್ಲಿ  ಈ ತನಕ 113ಕ್ಕೆ  ಏರಿವೆ. ಜು. 31 ರ ವೇಳೆಗೆ ಈ ಸಂಖ್ಯೆ ಇನ್ನೂ ಏರಿಕೆ ಆಗಲಿದೆ.

Advertisement

ಈ ಹಿಂದೆ 2019ರಲ್ಲಿ ಅತ್ಯಧಿಕ ಎಂದರೆ 102 ಕರೆಗಳು ಬಂದಿದ್ದು, ಇದೀಗ 2 ವರ್ಷಗಳ ಅಂತರದ ಬಳಿಕ ಇದೇ ಜುಲೈಯಲ್ಲಿ ಅತ್ಯಧಿಕ ಕರೆಗಳು (113) ಬಂದಿವೆ.

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕು ಗಳಲ್ಲಿನ ಮಕ್ಕಳಿಂದ ಅನೇಕ ರೀತಿಯ ಕರೆಗಳು ಬರುತ್ತಿದ್ದು ಲಾಕ್‌ಡೌನ್‌ ಸಂದರ್ಭದಲ್ಲಿ ನಡೆದಿರುವ ದೌರ್ಜನ್ಯಗಳು ಹಾಗೂ ಇತರ  ಪ್ರಕರಣಗಳು ಅನ್‌ಲಾಕ್‌ ಆಗಿರುವ ಸಂದರ್ಭದಲ್ಲಿ ಹೊರಬರುತ್ತಿವೆ.

ಮಕ್ಕಳ ತುರ್ತು ರಕ್ಷಣೆ ಹಾಗೂ ಪೋಷಣೆ  ಮಾತ್ರವಲ್ಲದೆ ಮಕ್ಕಳ ಎಲ್ಲ ಸಮಸ್ಯೆಗಳಿಗೆ ತುರ್ತು ಪ್ರತಿಸ್ಪಂದನೆ ಯನ್ನು ಚೈಲ್ಡ್‌ಲೈನ್‌ ನೀಡುತ್ತಿದ್ದು ಗ್ರಾಮಾಂತರ ಹಾಗೂ ಒಳನಾಡಿನ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಹೆಚ್ಚಿನ ರೀತಿಯ ಸಮಸ್ಯೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಚೈಲ್ಡ್‌ಲೈನ್‌ ಪ್ರಕಟನೆ ತಿಳಿಸಿದೆ.

ಆಹಾರಕ್ಕಾಗಿ ಹೆಚ್ಚು ಕರೆ:

Advertisement

ರೇಶನ್‌ ಕಿಟ್‌ ಅಪೇಕ್ಷಿಸಿ 43 ಕರೆಗಳು ಬಂದಿದ್ದು, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಬಹುತೇಕ ಎಲ್ಲರಿಗೂ ಕಿಟ್‌ ಪೂರೈಕೆಗೆ ವ್ಯವಸ್ಥೆ  ಮಾಡಲಾಗಿದೆ. ಮಕ್ಕಳ ಭಿಕ್ಷಾಟನೆ ಕುರಿತಂತೆ 15 ಪ್ರಕರಣಗಳು ವರದಿಯಾಗಿವೆ. ವಸತಿ ವ್ಯವಸ್ಥೆ  ಕೋರಿ 9 ಕರೆ, ಮಾನಸಿಕ ಕಿರುಕುಳದ 6 ಕರೆಗಳು ಸ್ವೀಕೃತವಾಗಿವೆ. ಆನಲೈನ್‌ ತರಗತಿಗಳು ನಡೆಯುತ್ತಿರುವ ಕಾರಣ ಮೊಬೈಲ್‌ ಫೋನ್‌ ಸಂಬಂಧಿತ ದೂರು ಮತ್ತು ನೆಟ್‌ವರ್ಕ್‌ ಸಮಸ್ಯೆಯ ಕರೆಗಳೂ ಬಂದಿವೆ.

ಮನವಿ: ಗ್ರಾಮಾಂತರ ಪ್ರದೇಶಗ ಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ನೆಟ್‌ ವರ್ಕ್‌ ಸಮಸ್ಯೆಯಿದ್ದು ಕೆಲವೊಂದು ಬಾರಿ 1098ಕ್ಕೆ ಕರೆಗಳು ಹೋಗದೆ ಇದ್ದಲ್ಲಿ ಸಾರ್ವಜನಿಕರು ಸ್ಥಳೀಯ ಅಂಗನವಾಡಿ/ ಆಶಾ ಕಾರ್ಯಕರ್ತೆ ಯರ ಗಮನಕ್ಕೆ ತರುವಂತೆ ಚೈಲ್ಡ್‌ ಲೈನ್‌ ವಕ್ತಾರರು ತಿಳಿಸಿದ್ದಾರೆ.

ಕರೆಗಳ ವಿವರ:

ವೈದ್ಯಕೀಯ ನೆರವು 1

ವಸತಿ ವ್ಯವಸ್ಥೆ  9

ಪ್ರಾಯೋಜಕತ್ವ 4

ಸರಕಾರಿ ಯೋಜನೆಗಳ ಕುರಿತು  1

ಸಿಕ್ಕಿರುವ ಮಗು 2

ಕಾಣೆಯಾಗಿರುವ ಮಗು 2

ರೇಶ‌ನ್‌ ಕಿಟ್‌     43

ದೈಹಿಕ ಹಿಂಸೆ   6

ಲೈಂಗಿಕ ದೌರ್ಜನ್ಯ       1

ಮಾನಸಿಕ ಹಿಂಸೆ          6

ಭಿಕ್ಷಾಟನೆ 15

ಆಪ್ತ ಸಮಾಲೋಚನೆ  2

ಕುಟುಂಬ ಕಲಹ          4

ಮಾಹಿತಿಗಾಗಿ ಕರೆ         1

ಇತರ   4

ಸಾಗಾಟಕ್ಕೆ ಪ್ರಯತ್ನ     2

ಬಾಲ್ಯವಿವಾಹ 1

ಇತರ (ಸಂಬಂಧಿಸದೇ ಇರುವ)  1

ಬಾಲಕಾರ್ಮಿಕ 2

ಶಿಕ್ಷಣಕ್ಕೆ ಸಂಬಂಧಿಸಿದಂತೆ        5

ಕಾನೂನಿನ ಸಂಘರ್ಷಕ್ಕೆ ಒಳಗಾದ ಮಗು          1

Advertisement

Udayavani is now on Telegram. Click here to join our channel and stay updated with the latest news.

Next