Advertisement

ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳ ಕೇಳಿ ಪ್ರಶ್ನೆ ಕಕ್ಕಿಬಿಕ್ಕಿಗೊಂಡ ಅಧಿಕಾರಿಗಳು

04:14 PM Feb 28, 2022 | Team Udayavani |

ಕುರುಗೋಡು: ವಿದ್ಯಾರ್ಥಿಗಳ ಸಮಸ್ಯೆಗಳ ಸರಮಾಲೆ, ಪ್ರತಿ ವಿದ್ಯಾರ್ಥಿಗಳ ಮಾತಿನಿಂದ ಬರುವ ಪ್ರಶ್ನೆಗಳನ್ನು ಕೇಳಿ ವೇದಿಕೆಯಲ್ಲಿ ಇದ್ದ ಅಧಿಕಾರಿಗಳು, ಜನಪ್ರತಿನಿದಿಗಳು ಕಕ್ಕಿಬಿಕ್ಕಿಗೊಂಡ ಪ್ರಸಂಗ ಜರುಗಿದೆ.

Advertisement

ಹೌದು ಇದು ಪಟ್ಟಣ ಸಮೀಪದ ಸಿದ್ದಮ್ಮನಹಳ್ಳಿ ಸರಕಾರಿ ಪ್ರೌಢ ಶಾಲೆಯಲ್ಲಿ ಗ್ರಾಪಂ ಇಲಾಖೆ ಯಿಂದ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮಸಭೆ ಯಲ್ಲಿ 4 ಶಾಲೆಯ ವಿದ್ಯಾರ್ಥಿಗಳ ಸಮಸ್ಯೆ ಯಲ್ಲಿ ಕಂಡು ಬಂದ ವಾತಾವರಣ.

ಸಭೆಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಮಾರುತಿ ಅನುದಾನಿತ ವಿದ್ಯಾ ಕೇಂದ್ರ ಶಾಲೆ ಒಟ್ಟು 4 ಶಾಲೆಯ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಕ್ಕಳ ಗ್ರಾಮ ಸಭೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ಸಮಸ್ಯೆಗಳನ್ನು ವ್ಯಕ್ತಪಡಿಸಿಕೊಂಡರು.

ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭವಾಗಿ ವರ್ಷಗಳೆ ಕಳೆದರೂ ಇನ್ನೂ ಶೂ, ಬಟ್ಟೆ, ಪಠ್ಯ ಪುಸ್ತಕ, ಸೈಕಲ್ ವಿತರಣೆ ಮಾಡಿಲ್ಲ ಇದರಿಂದ ಮಕ್ಕಳ ಕಲಿಕೆಗೆ ತುಂಬಾ ತೊಂದರೆ ಆಗುತ್ತದೆ ಆದ್ದರಿಂದ ಆದಷ್ಟು ಬೇಗಾ ಶಿಕ್ಷಣ ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕು ಎಂದು ಶಾಲೆಯ ವಿದ್ಯಾರ್ಥಿಗಳು ಸಭೆಯಲ್ಲಿ ಒತ್ತಾಯ ಮಾಡಿದರು.

ಇನ್ನೂ ಅನೇಕ ಸಿದ್ದಮ್ಮನಹಳ್ಳಿ ಸರಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಸೌಚಾಲಯ, ಇಲ್ಲದೆ ವಿದ್ಯಾರ್ಥಿಗಳು ಪರಿ ತಪಿಸುತ್ತಿದ್ದಾರೆ.   ಜೊತೆಗೆ ಪ್ರೌಢ ಶಾಲೆಯಲ್ಲಿ ಬಹಳ ವರ್ಷಗಳಿಂದ ಕನ್ನಡ, ಇಂಗ್ಲಿಷ್ ಶಿಕ್ಷಕರ ಕೊರತೆ ಬಹಳ ಕಾಡುತ್ತಿದೆ, ಆದ್ದರಿಂದ ಗ್ರಾಪಂ ಇಲಾಖೆ ಅಧಿಕಾರಿಗಳು ಶಿಕ್ಷಣ ಇಲಾಖೆಗೆ ಪತ್ರ ಬರೆದು ಕಳಿಸಿ ಶಿಕ್ಷಕರ ಸಮಸ್ಯೆಯನ್ನು ನಿಗಿಸಬೇಕು ಎಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಭೆಯಲ್ಲಿ ಕೋರಿದರು.

Advertisement

ಅಲ್ಲದೆ ಪ್ರೌಢ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ರಸ್ತೆ ಇಲ್ಲದ ಕಾರಣ ಓಡಾಡುವ ವಿದ್ಯಾರ್ಥಿಗಳು ಭಯ ಬಿತಿಯಿಂದ ಓಡಾಡುತ್ತಿದ್ದಾರೆ. ಸುಮಾರು ಹೋಗುತ್ತಾ ಬರುತ್ತಾ 4  ಕಿ. ಮೀ ದೂರ ಕಾಲ್ನಡಿಗೆ ಮೂಲಕ ತೆರಳಿ ವಿದ್ಯಾಭ್ಯಾಸ ಪಡೆಯಬೇಕಿದೆ ಇದರಿಂದ ಸರಿಯಾದ ಶಿಕ್ಷಣ ಪಡೆದು ಕೊಳ್ಳುವುದಕ್ಕೂ ತೊಂದ್ರೆ ಆಗುತ್ತಿದೆ ಆದ್ದರಿಂದ ಈ ಸಮಸ್ಯೆಯನ್ನು ಕೂಡಲೇ ಇತ್ಯರ್ಥ ಪಡಿಸುವಂತೆ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.

ಕೆಲ ಸರಕಾರಿ ಶಾಲೆಯಲ್ಲಿ ಕಂಪ್ಯೂಟರ್ ಕ್ಲಾಸ್ ಗಳು ಇಲ್ಲದ ಕಾರಣ ವಿದ್ಯಾರ್ಥಿಗಳಲ್ಲಿ ಜ್ಞಾನಪಕ ಶಕ್ತಿ ಕಡಿಮೆ ಆಗುತ್ತಿದೆ ಆದ್ದರಿಂದ ಗ್ರಾಪಂ ಅಧಿಕಾರಿಗಳು ಶಾಲೆಗೆ ಕಂಪ್ಯೂಟರ್ ಗಳನ್ನು ನೀಡಬೇಕು ಎಂದು ವಿದ್ಯಾರ್ಥಿಗಳು ತಿಳಿಸಿದರು.

ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಭೋಜನಲಾಯ ಕೊಠಡಿ ವ್ಯವಸ್ಥೆ ಇಲ್ಲದೆ ಕಾರಣ ರೂಮ್ ಗಳ ಕಾರೀಡೋರ್ ನಲ್ಲಿ ಕುಳಿತು ಕೊಂಡು ಊಟ ಮಾಡಬೇಕಾಗಿದೆ ಇದರಿಂದ ವಿದ್ಯಾರ್ಥಿಗಳ ಮೈ ಮೇಲೆ ಅನ್ನ ಸಾಂಬಾರ್ ಚೆಲ್ಲಿ ಕೊಳ್ಳುವ ದುಸ್ಥಿತಿ ನಿರ್ಮಾಣ ವಾಗುತ್ತಿದೆ ಆದ್ದರಿಂದ ಭೋಜನಲಾ ಯ ಕೊಠಡಿ ನಿರ್ಮಾಣ ಮಾಡಿಕೊಡಬೇಕು ಎಂದು ಶಿಕ್ಷಕರು ಅಧಿಕಾರಿಗಳಲ್ಲಿ ವಿನಂತಿಸಿದರು.

ಇದಲ್ಲದೆ ಶಾಲೆಯ ಸುತ್ತ ಮುತ್ತ ತಡೆ ಗೋಡೆ ವ್ಯವಸ್ಥೆ ಇಲ್ಲದೆ ಕಾರಣ ಗಿಡಗಂಟೆಗಳು, ಚರಂಡಿ ಗಳು ಇದ್ದು ಇದರ ಜೊತೆಗೆ ಧನ ಕರಗಳು ಓಡಾಡುತ್ತಿದ್ದು ದುರ್ವಸನೆ ಬಿರುತ್ತಿದೆ ಇದರಿಂದ ಕ್ಲಾಸ್ ಗಳು ಕೇಳುವುದಕ್ಕೂ, ಮದ್ಯಾಹ್ನ ಊಟ ಮಾಡುವುದಕ್ಕೂ ತೀವ್ರ ತೊಂದ್ರೆ ಆಗುತ್ತಿದೆ ಆದ್ದರಿಂದ ಶಾಲೆಯ ಸುತ್ತ ಮುತ್ತ ತಡೆ ಗೋಡೆ ನಿರ್ಮಿಸಿ ಕೊಡುವಂತೆ ತಿಳಿಸಿದರು.

ಸರಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಬರಬೇಕು ಎಂದರು ಹಳ್ಳದ ಸೇತುವೆ ಚಿಕ್ಕದಿರುವುದರಿಂದ ನೀರಿನಲ್ಲಿ ಸಂಚರಿಸಿಕೊಂಡು ಬರಬೇಕು ಇದರಿಂದ ನೀರಿನಲ್ಲಿ ವಿಷಜಂತು ಹುಳುಗಳು ಕಂಡು ಬರುತಿದ್ದು ಇದರಿಂದ ಮಕ್ಕಳು ಆತಂಕಕ್ಕೆ ಒಳಗಾಗಿದ್ದಾರೆ ಸೇತುವೆ ದುರಸ್ತಿ ಕಾರ್ಯ ಮಾಡಬೇಕು ಎಂದು ವಿದ್ಯಾರ್ಥಿಗಳು ಕೇಳಿ ಕೊಂಡರು.

ಸರಕಾರಿ ಶಾಲೆಗಳಲ್ಲಿ ಸರಿಯಾದ ಬೋರ್ಡ್ ವ್ಯವಸ್ಥೆ ಇಲ್ಲ, ಕಿಡಕಿ ವ್ಯವಸ್ಥೆ ಇಲ್ಲ, ಬಿಲ್ಡಿಂಗ್ ವ್ಯವಸ್ಥೆ ಇಲ್ಲ, ಕಟ್ಟಡಗಳು ಎಲ್ಲಂದರಲ್ಲಿ ಶೀತಲವ್ಯಸ್ಥೆಗೆ ತಲುಪಿವೆ ಈ ಎಲ್ಲ ಸಮಸ್ಯೆಗಳನ್ನು ಆದಷ್ಟು ಕೂಡಲೇ ಪರಿಹರಿಸಬೇಕು ಎಂದು ಅಧಿಕಾರಿಗಳ ಮುಂದೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

ಸಿದ್ದಮ್ಮನಹಳ್ಳಿ ಶಾಲೆಯಲ್ಲಿ ಇತರ ಸಮಸ್ಯೆಗಳು ಇರುವುದರಿಂದ ವಿದ್ಯಾರ್ಥಿಗಳು ಬೇರೆ ಕಡೆ ಕುರುಗೋಡು, ಕುಡುತೀನಿ, ಬಳ್ಳಾರಿ ಇತರೆ ಕಡೆಗಳಲ್ಲಿ  ನೋಂದಣಿ ಮಾಡಿಸಿ ಕ್ಲಾಸ್ ಗಳಿಗೆ ಹೋಗುತ್ತಿದ್ದಾರೆ, ಇನ್ನೂ ಸಿದ್ದಮ್ಮನಹಳ್ಳಿ ಗೆ ಪಟ್ಟಣಗಳಿಂದ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೆ ಕಾರಣ ಶಿಕ್ಷಕರು ಈ ಗ್ರಾಮಕ್ಕೆ ಬರುವುದಕ್ಕೆ ಬಹಳ ಹಿಂದೇಟು ಹಾಕುತಿದ್ದಾರೆ ಇತರ ಕೆಲಸಗಳು ಶಿಕ್ಷಕರು ಮಾಡಬಾರದು ಮತ್ತು ಶಾಲೆಗಳಲ್ಲಿ ಇರುವ ಶಿಕ್ಷಕರು ಬೇರೆಕಡೆ ವರ್ಗಾವಣೆ ಆಗಬಾರದು ಎಂದು ವಿನಂತಿಸಿದರು.

ಮಾರುತಿ ವಿದ್ಯಾ ಅನುದಾನಿತ ಕೇಂದ್ರದ ಮಕ್ಕಳು ಸರಕಾರಿ ಶಾಲೆಗೆ  ಸಿಗುವ ಸೌಲಭ್ಯಗಳು ನಮ್ಮ ಶಾಲೆಗೆ ನೀಡಿ ಅವರಂತೆ ನಾವು ಕೂಡ ಮಕ್ಕಳೇ,ಆ ಶಾಲೆ ಯಂತೆ ನಮ್ಮ ಶಾಲೆ ಕೂಡ ಒಂದು ಎಂದು ದುಃಖ ತೋಡಿಕೊಂಡರು.

ಕೊನೆಯದಾಗಿ ಗ್ರಾಪಂ ಪಿಡಿಒ ಮಾತನಾಡಿ, ನಿಮ್ಮ ಸಮಸ್ಯೆಗಳನ್ನು ಅರಿತು ಪಟ್ಟಿ ಮಾಡಿ ಮೇಲಾಧಿಕಾರಿಗಳಿಗೆ ಕಳಿಸಿ ಆದಷ್ಟು ಬೇಗ ಈಡೇರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸಿಸಿ ಸಿಮೆಂಟ್ ಕಾರ್ಖಾನೆ ಸಿಬ್ಬಂದಿ, ಗ್ರಾಮದ ಮುಖಂಡರು ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next