Advertisement

ಭಾರತದಲ್ಲಿ ಮಕ್ಕಳ ಲಸಿಕೆ ಸ್ಥಿತಿಗತಿ

02:15 AM Jun 13, 2021 | Team Udayavani |

ಕೊರೊನಾ 3ನೇ ಅಲೆಯನ್ನು ಪ್ರಾರಂಭದಲ್ಲೇ ತಡೆಯಲು ದೇಶ ಸಿದ್ಧವಾಗುತ್ತಿದೆ. ಲಸಿಕಾ ಕಂಪೆನಿಗಳು 2-18 ವರ್ಷದೊಳಗಿನ ಮಕ್ಕಳ ರಕ್ಷಣೆಗೆ ಸಮರೋಪಾದಿಯ ತಯಾರಿ ಆರಂಭಿ ಸಿವೆ. ಕೆಲವು ಲಸಿಕಾ ಕಂಪೆನಿಗಳಿಗೆ ಮಕ್ಕಳ ಮೇಲೆ ಲಸಿ ಕೆಯ ಪ್ರಯೋಗ ನಡೆಸಲು ಒಪ್ಪಿಗೆ ಸಿಕ್ಕಿದೆ.
ಇನ್ನು ಕೆಲವು ಕಂಪೆನಿಗಳು ತುದಿಗಾಲಲ್ಲಿ ನಿಂತಿ ವೆ.

Advertisement

ಕೊವ್ಯಾಕ್ಸಿನ್‌
2-18 ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಸಲು ಭಾರತ್‌ ಬಯೋಟೆಕ್‌ಗೆ ಡ್ರಗ್ಸ್‌ ಕಂಟ್ರೋಲರ್‌ ಜನ ರಲ್‌ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದೆ. ಈಗಾಗಲೇ ಪಟ್ನಾ ಏಮ್ಸ್‌ ನಲ್ಲಿ ಪ್ರಯೋಗ ಆರಂಭಿಸಲಾಗಿದೆ.

ಝೈಡಸ್‌ ಕ್ಯಾಡಿಲಾ
ಅಹ್ಮದಾಬಾದ್‌ ಮೂಲದ ಲಸಿಕೆ ತಯಾರಿಕಾ ಕಂಪೆನಿ ಇದಾಗಿದ್ದು, 12-18 ವರ್ಷ ವಯಸ್ಸಿನವರ ಮೇಲೆ ತನ್ನ ಲಸಿಕೆಯ ಪ್ರಯೋಗ ಆರಂಭಿಸಿದೆ. ಇನ್ನೆರಡು ವಾರಗಳಲ್ಲಿ ಲಸಿಕೆಗೆ ಲೈಸೆನ್ಸ್‌ ನೀಡುವಂತೆ ಸರಕಾರಕ್ಕೆ ಕಂಪೆನಿಯು ಮನವಿ ಸಲ್ಲಿಸಲಿದೆ.

ಫೈಜರ್‌
ಅಮೆರಿಕ, ಯುಕೆ, ಐರೋಪ್ಯ ಒಕ್ಕೂಟದಲ್ಲಿ ಫೈಜರ್‌ ಲಸಿಕೆಯನ್ನು ಮಕ್ಕಳಿಗೆ ವಿತರಿಸಲಾಗುತ್ತಿದೆ. ಇದು ವಯಸ್ಕರಷ್ಟೇ ಅಲ್ಲದೇ, ಮಕ್ಕಳನ್ನೂ ರಕ್ಷಿಸಲಿದೆ. ಬೇರೆ ದೇಶಗಳಲ್ಲಿ ಇದರ ಬಳಕೆಗೆ ತುರ್ತು ಅನುಮೋದನೆ ದೊರೆತಿರುವ ಕಾರಣ, ಭಾರತದಲ್ಲೂ ಅದಕ್ಕೆ ಒಪ್ಪಿಗೆ ಸಿಗಲಿದೆ. ಅಲ್ಲದೆ ಇಲ್ಲಿ ಪ್ರಯೋಗ ನಡೆಸಬೇಕೆಂಬ ಷರತ್ತಿನಿಂದ ವಿನಾಯಿತಿಯೂ ಸಿಗಲಿದೆ.

ಸ್ಪುಟ್ನಿಕ್‌ ವಿ
ಸ್ಪುಟ್ನಿಕ್‌ ವಿ ಅನ್ನು ಮಕ್ಕಳ ವಯೋಮಿತಿ, ತೂಕ ಸೇರಿ ವಿವಿಧ ಅಂಶದ ಆಧಾರದ ಮೇಲೆ ಪ್ರಯೋಗ ನಡೆಸಲು ರಷ್ಯಾದ ಆರೋಗ್ಯ ಸಚಿವಾಲಯ ಅನುಮತಿ ನೀಡಿದ್ದು, ಮುಂದಿನ ಕೆಲವು ವಾರಗಳಲ್ಲಿ ಪ್ರಯೋಗ ಪ್ರಾರಂಭವಾಗಲಿದೆ. ವಯಸ್ಕರಿಗೆ ನೀಡಲಾಗುವ ಸ್ಪುಟ್ನಿಕ್‌ ವಿ ಲಸಿಕೆಗೆ ಭಾರತದಲ್ಲಿ ಈಗಾಗಲೇ ಒಪ್ಪಿಗೆ ದೊರೆತಿದೆ. ಸದ್ಯದಲ್ಲೇ ಮಕ್ಕಳ ಲಸಿಕೆಗೂ ಅನುಮತಿ ದೊರೆಯುವ ಸಾಧ್ಯತೆಯಿದೆ.

Advertisement

ಮಾಡೆರ್ನಾ
ನಮ್ಮ ಲಸಿಕೆಯು ಸುರಕ್ಷಿತವಾಗಿದ್ದು, 12 ವರ್ಷದ ಮಕ್ಕಳನ್ನೂ ಲಸಿಕೆಯು ಸಂರಕ್ಷಿಸಲಿದೆ ಎಂದು ಮಾಡೆರ್ನಾ ಕಂಪೆನಿ ಹೇಳಿದೆ. ಅಮೆರಿಕದಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕರೆ 12-17 ವರ್ಷದ ಮಕ್ಕಳನ್ನು ರಕ್ಷಿಸುವ 2ನೇ ಉತ್ತಮ ಲಸಿಕೆ ಇದಾಗಲಿದೆ. ಇದನ್ನು ಭಾರತಕ್ಕೆ ತರುವ ಮಾತುಕತೆಗಳು ಇನ್ನೂ ಆರಂಭವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next