Advertisement
ಸುಶಿಕ್ಷಿತರ ಜಿಲ್ಲೆಎಷ್ಟೇ ಬಡತನವಿದ್ದರೂ, ಹೆಣ್ಣುಮಕ್ಕಳಿಗೆ ಒತ್ತಾಯಪೂರ್ವಕವಾಗಿ ಕನಿಷ್ಠ 10 ತರಗತಿ, ಓದಲು ಇಚ್ಚಿಸುವ ಮಕ್ಕಳಿಗೆ ಕನಿಷ್ಠವೆಂದರೂ ಪದವಿ ಶಿಕ್ಷಣ ನೀಡುವ ಅಭ್ಯಾಸ ಜಿಲ್ಲೆಯಲ್ಲಿದೆ. ವ್ಯಾಸಂಗ ಮುಗಿಸುವುದ
ರೊಳಗಾಗಿ ಮಕ್ಕಳು ಮದುವೆ ವಯಸ್ಸಿಗೆ ಬರುತ್ತಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಾಮಾಜಿಕ ಪಿಡುಗು ಬಾಲ್ಯ ವಿವಾಹಕ್ಕೆ ಬಲಿಯಾಗುವ ಅಪ್ರಾಪ್ತ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇದೆ.
ಬಾಲ್ಯ ವಿವಾಹವನ್ನು ಪರಿಣಾಮ ಕಾರಿಯಾಗಿ ತಡೆಗಟ್ಟಲು ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಗ್ರಾ.ಪಂ.ನಲ್ಲಿರುವ ಸಮಿತಿ 2 ತಿಂಗಳಿಗೊಮ್ಮೆ, ತಾ| ಮತ್ತು
ಜಿಲ್ಲಾ ಮಟ್ಟದ ಸಮಿತಿ 3 ತಿಂಗಳಿಗೊಮ್ಮೆ ಸಭೆ ನಡೆಸಿ, ಇದರ ತಡೆಗೆ ನಿರ್ದಿಷ್ಟ ಕ್ರಮಗಳನ್ನು ಅನುಷ್ಠಾನ ಮಾಡುವ ಕುರಿತು ನಿರಂತರ ಸಭೆ ನಡೆಸುತ್ತಿದೆ. ಏಕೈಕ ಜಿಲ್ಲೆ!
ಕೋವಿಡ್ ಅವಧಿಯಲ್ಲಿ ರಾಜ್ಯಾದ್ಯಂತ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಘಟನೆಗಳು ಸಂಭವಿಸಿವೆ. ಆದರೆ ಉಡುಪಿ ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆಸಲು ಪ್ರಯತ್ನವೂ ನಡೆದಿಲ್ಲ. ರಾಜ್ಯಮಟ್ಟದ ಪಟ್ಟಿಯಲ್ಲಿ ಶೂನ್ಯ ಪ್ರಕರಣ ಹೊಂದಿರುವ ಏಕೈಕ ಜಿಲ್ಲೆಯಾಗಿ ಗುರುತಿಸಿಕೊಂಡಿದೆ.
Related Articles
ಪ್ರಸ್ತುತ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಿಗಿಯಾಗಿದ್ದು, ಅರ್ಚಕರು, ತಂದೆ-ತಾಯಿ, ಹುಡುಗನ ತಂದೆ-ತಾಯಿ, ಮದುವೆಗೆ ಬರುವ ಸಂಬಂಧಿಕರು, ಸಹಕಾರ ನೀಡಿದ ಸಂಘಟಕರ ಮೇಲೆಯೂ ಕಾನೂನು ಅನ್ವಯ ಪ್ರಕರಣ ದಾಖಲಿಸಲು ಅವಕಾಶವಿದೆ. ಈ ಬಗ್ಗೆ ಸಾಮಾನ್ಯ ಅರಿವು ಜನರಲ್ಲಿ ಇರುವುದರಿಂದ ಬಾಲ್ಯವಿವಾಹ ನಡೆಯುತ್ತಿಲ್ಲ. ಸ್ಥಳೀಯರಲ್ಲಿ ಜಾಗೃತಿ ಕಳೆದ ಐದಾರು ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ನಡೆಸುವ ಪ್ರಯತ್ನಗಳು ವಿಫಲವಾಗಿವೆ. ಸ್ಥಳೀಯರ ಜಾಗೃತ ಮನೋಭಾವ ಮತ್ತು ಅಧಿಕಾರಿಗಳು ಮಾಹಿತಿ ದೊರೆತ ತತ್‌ಕ್ಷಣ ಕಾರ್ಯಪ್ರವೃತ್ತರಾಗುತ್ತಿದ್ದಾರೆ. ಇದರಿಂದಾಗಿ ವಿವಾಹ ಪ್ರಯತ್ನಗಳು ಕೂಡ ನಡೆಯುತ್ತಿಲ್ಲ. ಶಿಕ್ಷಣ ಇಲಾಖೆಯ ಸಹಯೋಗದಲ್ಲಿ 6ರಿಂದ 18 ವರ್ಷದೊಳಗಿನವರ ಪಟ್ಟಿ ತಯಾರಿಸಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಮಕ್ಕಳ ಹಾಜರಾತಿ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ.
Advertisement
ಮೂರು ವರ್ಷಗಳಿಂದ ಯಾವುದೂ ಇಲ್ಲಬಾಲ್ಯ ವಿವಾಹಕ್ಕೆ ಏನಾದರೂ ಪ್ರಯತ್ನ ನಡೆದರೆ ಪೋಷಕರಿಗೆ ಬಾಲ್ಯ ವಿವಾಹದಿಂದಾಗುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಲಾಗುತ್ತದೆ. ಇದರಿಂದಾಗಿ ಮದುವೆಯ ತನಕ ಬಂದು ನಿಂತ ಪ್ರಕರಣಗಳು ಕಳೆದ ಮೂರು ವರ್ಷಗಳಿಂದ ಯಾವುದೂ ಇಲ್ಲ. ಜಿಲ್ಲೆಯಲ್ಲಿ ಸುಶಿಕ್ಷಿತರ ಪ್ರಮಾಣವೂ ಹೆಚ್ಚಿದೆ.
-ಸದಾನಂದ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಉಡುಪಿ.