Advertisement
2019-20 ಏಪ್ರಿಲ್1 ರಿಂದ ಮಾರ್ಚ್‌ಅಂತ್ಯದವರೆವಿಗಿನ ಹನ್ನೆರೆಡು ತಿಂಗಳುಗಳಲ್ಲಿ 39 ಬಾಲ್ಯ ವಿವಾಹಗಳು ಕೋಲಾರ ಜಿಲ್ಲೆಯಲ್ಲಿ ಪತ್ತೆಯಾಗಿದ್ದರೆ,2020 ರ ಏಪ್ರಿಲ್ ನಿಂದ ಆಗಸ್ಟ್‌ವರೆಗೂ 61 ಬಾಲ್ಯ ವಿವಾಹಗಳು ಪತ್ತೆಯಾಗಿರುವುದು ವಿಶೇಷ.
Related Articles
Advertisement
ಸ್ವಯಂ ಪ್ರೇರಿತ ಎಫ್ ಐಆರ್: ಬಾಲ್ಯ ವಿವಾಹ ನಿಷೇಧ ಕಾಯ್ದೆ 2016 ಕ್ಕೆ ತಿದ್ದುಪಡಿ ಆದ ನಂತರ ಬಾಲ್ಯ ವಿವಾಹಗಳನ್ನು ಮಕ್ಕಳ ರಕ್ಷಣಾಧಿಕಾರಿ ತಂಡ ಮಾತ್ರವೇ ಎಫ್ಐಆರ್ ದಾಖಲಿಸಬೇಕಾಗಿಲ್ಲ, ಪೊಲೀಸ್, ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಿಗರು, ಆಯಾ ಶಾಲಾ ಮುಖ್ಯ ಶಿಕ್ಷಕರು ಸಹ ಎಫ್ಐಆರ್ ದಾಖಲಿಸಬಹುದಾಗಿದೆ. ಬಾಲ್ಯ ವಿವಾಹ ಸಂಬಂಧ ಸ್ವಯಂ ಪ್ರೇರಿತವಾಗಿಯೇಪ್ರಕರಣದಾಖಲಿಸಿಕೊಳ್ಳಬಹುದಾಗಿದೆ. ಕಾರಣಗಳು: ಬಹುತೇಕ ಬಾಲ್ಯ ವಿವಾಹಗಳು ಬಡತನ ಕಾರಣಕ್ಕೆ ನಡೆಯುತ್ತಿದೆ. ಬಡ ಕುಟುಂಬ ಗಳಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಸಮಸ್ಯೆ ಹಾಗೂ ಹೆಣ್ಣು ಮಕ್ಕಳನ್ನು ಓದಿಸಲು ಆರ್ಥಿಕ ಸಾಮರ್ಥ್ಯವಿಲ್ಲದೆ ಮದುವೆ ಮಾಡಿ ಕಳುಹಿಸುವಮನಸ್ಥಿತಿಏರ್ಪಡುತ್ತಿದೆ.ಹೆಣ್ಣು ಮಕ್ಕಳು ಋತು ಮತಿ ಯಾಗು ತ್ತಿದ್ದಂ ತೆಯೇ ಮದುವೆ ಮಾಡ ಬಹುದು ಎಂಬ ಧಾರ್ಮಿಕ ನಂಬಿಕೆ ಬಾಲ್ಯ ವಿವಾಹಗಳನ್ನು ಹೆಚ್ಚಿಸುತ್ತಿದೆ.
ಮುಂದೇನು?: ಬಾಲ್ಯ ವಿವಾಹ ಪ್ರಕರಣಗಳಲ್ಲಿ ಪತ್ತೆಯಾದ ಬಹುತೇಕ ಹೆಣ್ಣು ಮಕ್ಕಳಿಗೆ ಬಾಲ ಮಂದಿರದಲ್ಲಿಯೇ ಅನೌಪಚಾರಿಕವಾಗಿ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇಂತ ಹೆಣ್ಣು ಮಕ್ಕಳ ಭವಿಷ್ಯತ್ತು ರೂಪಿಸಲು ಪ್ರಾಯೋಜಕ ಪೋಷಕರನ್ನು ಹುಡುಕಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ವೃತ್ತಿ ಕೌಶಲ್ಯ ತರಬೇತಿ ನೀಡಲು ಕ್ರಿಯಾ ಯೋಜನೆಯೊಂದನ್ನುಜಿಲ್ಲಾ ಮಟ್ಟದಲ್ಲಿ ರೂಪಿಸಲಾಗುತ್ತಿದೆ. ಕಣ್ತಪ್ಪಿ ಹೋದ ಬಾಲ್ಯವಿವಾಹಗಳು: ಕೋಲಾರ ಜಿಲ್ಲೆ ಯಲ್ಲಿಈ ವರ್ಷ 61ಬಾಲ್ಯ ವಿವಾಹಗಳು ಪತ್ತೆಯಾಗಿದ್ದು, ಇವು ಮಕ್ಕಳ ರಕ್ಷಣಾಧಿಕಾರಿಗಳ ಗಮನಕ್ಕೆ ಬಂದಿವೆ. ಆದರೆ, ಇವರ ಗಮನಕ್ಕೆ ಬಾರದೆಯೇ ಮದುವೆಯಾಗಿರುವ ಅದೆಷ್ಟೋ ಪ್ರಕರಣಗಳು ಇನ್ನೂ ಪತ್ತೆಯಾಗದೆ ಇರಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ.
ಮನೆಗೆ ಹೋಗದ ಬಾಲಕಿ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಅಲೆಮಾರಿ ಅಪ್ರಾಪೆ¤ಗೆ ಬಾಲ್ಯವಿವಾಹ ಮಾಡುವುದನ್ನು ತಡೆಗಟ್ಟಲಾಗಿದೆ. ಈ ಯುವತಿಗೆ ಓದಿನಲ್ಲಿ ಅಪಾರ ಆಸಕ್ತಿ, ಈಕೆ ಶಾಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗುತ್ತಿದ್ದರು. ಇದೀಗ ಬಾಲ ಮಂದಿರದಲ್ಲಿರುವ ಈ ಯುವತಿಯನ್ನು ಬಿಡಿಸಲು ಪೋಷ ಕರು ಎಲ್ಲಾ ರೀತಿಯ ಒತ್ತಡಗಳನ್ನು ಹಾಕಿಸಿದ್ದರು. ಆದರೆ, ಬಾಲಕಿಯೇ ಖುದ್ದು ತಾನು ಓದುವ ನಿರ್ಧಾರ ತೆಗೆದುಕೊಂಡು ಮನೆಗೆ ಹೋಗದೆಬಾಲಮಂದಿರದಲ್ಲಿಯೇ ವ್ಯಾಸಂಗ ಮುಂದು ವರಿಸುತ್ತಿರುವುದು ವಿಶೇಷವೆನಿಸಿದೆ.
ಬಾಲ್ಯ ವಿವಾಹ ತಡೆಗಟ್ಟುವ ಅಧಿಕಾರಿಗಳೆಂದು ಗುರುತಿಸಿಕೊಂಡಿರುವ ಪೊಲೀಸ್, ಮುಖ್ಯ ಶಿಕ್ಷಕರು, ಪಿಡಿಒಗಳು,ಕಂದಾಯಾಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದಕೆಲಸ ಮಾಡಿದರೆ ಮತ್ತಷ್ಟು ಪರಿಣಾಮಕಾರಿಯಾಗಿ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. –ಚೌಡಪ್ಪ, ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ
ಪತ್ತೆಗೆ ಹಚ್ಚಲು ತೊಡಕು : ಕೋಲಾರ ಜಿಲ್ಲೆಯು ಆಂಧ್ರಪ್ರದೇಶ ಹಾಗೂ ತಮಿಳು ನಾಡು ಗಡಿ ಹೊಂದಿರುವುದರಿಂದ ಬಾಲ್ಯ ವಿವಾಹಗಳು ಆಗಿ ಹೊರ ರಾಜ್ಯಕ್ಕೆ ಹೋಗುವುದು ಹಾಗೂ ಹೊರ ರಾಜ್ಯದಲ್ಲಿ ಬಾಲ್ಯ ವಿವಾಹವಾಗಿ ಜಿಲ್ಲೆಗೆ ಬರುವ ಪ್ರಕರಣಗಳು ಪತ್ತೆ ಹಚ್ಚುವುದು ಸಮಸ್ಯೆಯಾಗುತ್ತಿದೆ. ಬಾಲ್ಯವಿವಾಹಗಳನ್ನು ಪತ್ತೆ ಹಚ್ಚಿದರೂ ಎಫ್ಐಆರ್ ದಾಖಲಿಸಲು ಪೊಲೀಸರು ಸಾಕ್ಷ್ಯಾಧಾರಗಳನ್ನು ಹುಡುಕಿಕೊಡಿ ಎನ್ನುತ್ತಿರುವುದು. ಶೀಘ್ರ ಶಿಕ್ಷೆ ವಿಧಿಸಿ, ದಂಡ ಹಾಕಲು ಅವಕಾಶ ಇಲ್ಲದಿರುವುದು ಬಾಲ್ಯವಿವಾಹದ ತೊಡಕುಗಳಾಗಿವೆ.
ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಸಾರ್ವಜನಿಕರು ಹಾಗೂ ಎಲ್ಲಾ ಇಲಾಖೆಗಳ ಸ್ಪಂದನೆ ಅತ್ಯಗತ್ಯ. ಬಾಲ್ಯವಿವಾಹದಲ್ಲಿ ಪತ್ತೆಯಾದಯುವತಿಯರ ಭವಿಷ್ಯ ರೂಪಿಸುವಂತ ವೃತ್ತಿಕೌಶಲ್ಯ ಕಾರ್ಯಕ್ರಮಗಳ ತರಬೇತಿ ನೀಡಲು ಸದ್ಯಕ್ಕೆ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. -ಎಂ.ರಮೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
-ಕೆ.ಎಸ್.ಗಣೇಶ್