Advertisement

“ಬಾಲ್ಯವಿವಾಹ ಪಿಡುಗು ನಿವಾರಿಸಲು ಸಹಕರಿಸಿ’

12:20 PM Jun 26, 2017 | Team Udayavani |

ಕೆ.ಆರ್‌.ನಗರ: ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ದೊಡ್ಡ ಪಿಡುಗು. ಇದನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸುತ್ತಿರುವ ಸರ್ಕಾರ ಮತ್ತು ಮಹಿಳಾ ಕಲ್ಯಾಣ ಇಲಾಖೆಯೊಂದಿಗೆ ಎಲ್ಲರೂ ಕೈ ಜೋಡಿಸುವುದು ಅತ್ಯವಶ್ಯ ಎಂದು ಹನಸೋಗೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಮತಾ ಹೇಳಿದರು

Advertisement

ತಾಲೂಕಿನ ಹನಸೋಗೆ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಹನಸೋಗೆ ಗ್ರಾಮದಲ್ಲಿ ಆಯೋಜಿಸಿದ್ದ ಬಾಲ್ಯ ವಿವಾಹದ ವಿರುದ್ಧ ಜಾಗೃತಿ ಜಾಥಾ ಮತ್ತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು

ಗ್ರಾಮೀಣ ಭಾಗದಲ್ಲಿ ನಿಯಮಗಳನ್ನು ಮೀರಿ ಬಾಲ್ಯ ವಿವಾಹ ಮಾಡಲಾಗುತ್ತಿದೆ. ಇದರಿಂದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಹೆಣ್ಣು ಮಕ್ಕಳು ಇದರ ವಿರುದ್ಧ ಸಿಡಿದೇಳಬೇಕಾಗಿದೆ ಎಂದರು.

ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸಂಗೀತಾ ಮಾತನಾಡಿ, 18 ವರ್ಷ ತುಂಬದ ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹ ಮಾಡುವುದು ಶಿûಾರ್ಹ ಅಪರಾಧ. ಇಂತಹ ವಿವಾಹಗಳನ್ನು ಪ್ರೋತ್ಸಾಹಿಸುವ ಕುಟುಂಬದವರು ಮತ್ತು ವಿವಾಹಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬಹುದು. ಇಂತಹ ವಿವಾಹಗಳಿಗೆ ಜನತೆ ಪ್ರೋತ್ಸಾಹ ನೀಡಬಾರದೆಂದು ಮನವಿ ಮಾಡಿದರು.

ದೌರ್ಜನ್ಯ ಸಂರಕ್ಷಣಾಧಿಕಾರಿ ಆಶಾ, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಕಿರುಕುಳಗಳು ಮತ್ತು ಬಾಲ್ಯ ವಿವಾಹದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರಣೆ ನೀಡಿದರು. ಜೆಡಿಎಸ್‌ ಮುಖಂಡ ಎಚ್‌.ಜಿ.ರಾಮಕೃಷ್ಣ, ಜಯಕರ್ನಾಟಕ ಸಂಘಟನೆಯ ಎಚ್‌.ಆರ್‌.ಹರೀಶ್‌, ಮುಖಂಡರಾದ ಅನಿಲ್‌, ಜಗದೀಶ್‌, ಪ್ರಾಂಶುಪಾಲ ಬಸವರಾಜು, ಶಿಕ್ಷಕರಾದ ಮಂಜುನಾಥ್‌, ಮಹದೇವಸ್ವಾಮಿ, ಸೋಮಶೇಖರ್‌, ವಿಠಲ, ನಟರಾಜು ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next