Advertisement

ಬಾಲ್ಯ ವಿವಾಹ ನಿರ್ಮೂಲನಾ ಜಾಗೃತಿ

04:31 PM Mar 27, 2022 | Team Udayavani |

ಕೊಟ್ಟೂರು: ತಾಲೂಕು ಕಚೇರಿಯಲ್ಲಿ ಬಾಲ್ಯ ವಿವಾಹ ಪದ್ಧತಿ ನಿಷೇಧ ಜಾಗೃತಿ ಮೂಡಿಸಲಾಯಿತು. ತಾಲೂಕು ದಂಡಾಧಿಕಾರಿಗಳಾದ ಎಂ. ಕುಮಾರಸ್ವಾಮಿ ನೇತೃತ್ವದಲ್ಲಿ ತಾಲೂಕು ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೂಡ್ಲಿಗಿ ವತಿಯಿಂದ ಜಾಗೃತಿ ಅಭಿಯಾನ ವಾಹನದ ಮೂಲಕ ಪಟ್ಟಣದಲ್ಲಿ ಸಂಚರಿಸಿ ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಮಾಡುವ ಕುರಿತು ಜಾಗೃತಿ ಮೂಡಿಸಲಾಯಿತು.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಕುರಿತಂತೆ ಪ್ರತಿಜ್ಞೆ ಮಾಡಿದರು. ತಹಶೀಲ್ದಾರ್‌ ಎಂ.ಕುಮಾರಸ್ವಾಮಿ ಮಾತನಾಡಿ, ಬಾಲ್ಯ ವಿವಾಹ ಪದ್ಧತಿ ಎನ್ನುವುದು ಸಮಾಜಕ್ಕೆ ಪಿಡುಗು. ನಾವೆಷ್ಟೇ ವಿದ್ಯಾವಂತರಾಗಿ ವೈಜ್ಞಾನಿಕವಾಗಿ ಮುನ್ನುಗ್ಗಿದ್ದರು ಸಹ ಇನ್ನೂ ಅನೇಕ ಗ್ರಾಮಗಳಲ್ಲಿ ಈ ಬಾಲ್ಯ ವಿವಾಹ ಪದ್ಧತಿ ಇದೆ. ಆದ್ದರಿಂದ ಇದನ್ನು ತೊಡೆದು ಹಾಕುವುದು ಎಲ್ಲರ ಕರ್ತವ್ಯವಾಗಿದೆ. ಯಾರೇ ಇಂತಹ ಪ್ರಕರಣಗಳು ನಡೆದಲ್ಲಿ ಕೂಡಲೇ ಜಾಗ್ರತರಾಗಿ ದೂರವಾಣಿ ಕರೆ ಮುಖಾಂತರ ತಿಳಿಸಿ ಬಾಲ್ಯ ವಿವಾಹ ತಡೆಗಟ್ಟಲು ಮುಂದಾಗಿ ಎಂದರು.

ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ನಮ್ಮ ರಾಜ್ಯವನ್ನು ‘ಬಾಲ್ಯವಿವಾಹ ಮುಕ್ತ’ ರಾಜ್ಯವನ್ನಾಗಿಸುವ ದಿಸೆಯಲ್ಲಿ ಎಲ್ಲ ಅಗತ್ಯ ಕ್ರಮ ತೆಗೆದುಕೊಂಡು ಮಕ್ಕಳ ಅಭಿವೃದ್ಧಿಗಾಗಿ ನಾವೆಲ್ಲ ಶ್ರಮಿಸಬೇಕು ಹಾಗೂ ಪ್ರತಿಜ್ಞಾ ವಿಧಿ ಯಂತೆ ನಡೆದುಕೊಳ್ಳಬೇಕು ಎಂದರು.

ನಾಗನಗೌಡ ಸಿಡಿಪಿಒ ಕೂಡ್ಲಿಗಿ, ವಿಜಯಲಕ್ಷ್ಮೀ ಮೇಲ್ವಿಚಾರಕರು, ನಂದಿನಿ ಪೋಷಣ ಅಭಿಯಾನ ಕೂಡ್ಲಿಗಿ ಹಾಗೂ ಕೊಟ್ಟೂರು ಪಟ್ಟಣದ ಅಂಗನವಾಡಿ ಕಾರ್ಯಕರ್ತೆಯರು, ದೇವರಾಜ, ಶಿರಾಜುದ್ದೀನ್‌, ಸಿ.ಮ. ಗುರುಬಸವರಾಜ, ಆಶಾ, ಮಂಜಮ್ಮ, ಹಾಲಮ್ಮ, ಶಿಕ್ಷಣ ಇಲಾಖೆಯ ಇಸಿಒ ಅಜ್ಜಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next