Advertisement
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರಳವಿವಾಹ ಮಾರ್ಗಸೂಚಿ ದುರ್ಬಳಕೆ ಮಾಡಿಕೊಂಡುಕೆಲವರು ಮಕ್ಕಳಿಗೆ ಮದುವೆ ಮಾಡಿಸಲು ಮುಂದಾಗಿದ್ದದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದರು.
Related Articles
Advertisement
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವಕಾಶ: ತಡೆ ಹಿಡಿದಿರುವಬಾಲ್ಯ ವಿವಾಹಗಳಲ್ಲಿ ಎಲ್ಲಾ ಹೆಣ್ಣುಮಕ್ಕಳು ಶಿಕ್ಷಣಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಶಾಲೆಪ್ರಾರಂಭಗೊಂಡ ನಂತರ ಇವರನ್ನು ಶಾಲೆಗೆ ದಾಖಲಿಸುವುದು. ಇವರ ಶೈಕ್ಷಣಿಕ ಮಟ್ಟ ಹೆಚ್ಚಿಸಲು ಕಾರ್ಯಕ್ರಮರೂಪಿಸಲಾಗುವುದು. ಬಾಲ್ಯವಿವಾಹದಿಂದ ರಕ್ಷಿಸಿದಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ. ಕುಟುಂಬದ ಎಲ್ಲಾ ಸದಸ್ಯರಿಗೆ ಆಪ್ತಸಮಾಲೋಚನೆ ಮಾಡಿ, ಬಾಲ್ಯವಿವಾಹದಿಂದ ಆಗುವದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಕಳೆದ ವರ್ಷ 2020 ಮತ್ತು21ನೇ ಸಾಲಿನಲ್ಲಿ62 ಬಾಲ್ಯವಿವಾಹದ ಪ್ರಕರಣಗಳಲ್ಲಿ 54 ಬಾಲ್ಯ ವಿವಾಹಗಳನ್ನುತಡೆಯಲಾಗಿದೆ.8 ಎಫ್ಐಆರ್ ದಾಖಲಾಗಿದೆ.
ಕರೆ ಕೂಡಲೇ ಸ್ಪಂದನೆ: ದೊಡ್ಡಬಳ್ಳಾಪುರ 8 ಪ್ರಕರಣಗಳಲ್ಲಿ7 ತಡೆ ಹಿಡಿದಿದ್ದು, ಅದರಲ್ಲಿ ಒಂದು ಎಫ್ಐಆರ್‌ದಾಖಲಿಸಲಾಗಿದೆ. ದೇವನಹಳ್ಳಿ 5 ಬಾಲ್ಯವಿವಾಹದಪ್ರಕರಣ, ಹೊಸಕೋಟೆಯಲ್ಲಿ 4 ಬಾಲ್ಯವಿವಾಹದಪ್ರಕರಣಗಳು ಕಂಡುಬಂದಿದೆ.
ನೆಲಮಂಗಲದಲ್ಲಿಯಾವುದೇ ಬಾಲ್ಯವಿವಾಹದ ಪ್ರಕರಣಗಳು ಕಂಡುಬಂದಿಲ್ಲ. ಬಾಲ್ಯವಿವಾಹದ ಪ್ರಕರಣ ಸ್ವೀಕೃತವಾದಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಗಳು ಮತ್ತುತಾಲೂಕು ಆಡಳಿತ ಸಹಯೋಗದೊಂದಿಗೆ ಎಲ್ಲಿಬಾಲ್ಯವಿವಾಹ ನಡೆಯುತ್ತಿದೆ ಎಂಬ ಮಾಹಿತಿ ದೊರೆತಕೂಡಲೇ ಅಧಿಕಾರಿಗಳ ತಂಡ ಪ್ರಕರಣ ತಡೆಹಿಡಿದುಕ್ರಮಕೈಗೊಳ್ಳುತ್ತಿದ್ದಾರೆ. ಬಾಲ್ಯವಿವಾಹಕ್ಕೆ ಶ್ರಮಿಸುತ್ತಿರುವಸಂಘಟನೆಮಕ್ಕಳ ಸಹಾಯವಾಣಿ1098ಕ್ಕೆ ಕರೆ ಮಾಡಿದಕೂಡಲೇ ಸ್ಪಂದಿಸಲಾಗುತ್ತಿದೆ.
ಪೋಷಕರಿಗೆ ಅರಿವಿಲ್ಲ: ಜಿಲ್ಲೆಯಲ್ಲಿ 16ರಿಂದ 17ವರ್ಷದ ಮದುವೆ ಪ್ರಕರಣಗಳೇ ಹೆಚ್ಚು ಪñಯಾಗ ೆ¤ ುತ್ತಿವೆ. ಬಹಳಷ್ಟು ಪಾಲಕರು 17 ವರ್ಷ ತುಂಬಿದ ಹೆಣ್ಣುಮಕ್ಕಳನ್ನು 18 ವರ್ಷ ತುಂಬಿದೆ ಎಂದು ಹೇಳಿಮದುವೆಗೆ ಮುಂದಾಗಿದ್ದಾರೆ. ಕಾನೂನಿನಡಿ 18 ವರ್ಷತುಂಬಿದ ಮೇಲಷ್ಟೇ ಮದುವೆಗೆ ಅರ್ಹರು ಎಂಬುದರ ಕುರಿತು ಪೋಷಕರಿಗೆ ಅರಿವಿಲ್ಲ.
ಜಿಲ್ಲೆಯಲ್ಲಿ ಪತ್ತೆಯಾದಪ್ರಕರಣಗಳಲ್ಲಿಕೆಲವು ಪ್ರೇಮ ವಿವಾಹಕ್ಕೆ ಸಂಬಂಧಿಸಿದ್ದೇಹೆಚ್ಚು.ಪ್ರೇಮಪಾಶಕ್ಕೆಬಿದ್ದು ಮಕ್ಕಳ ದಾರಿತಪ್ಪುವಆತಂಕದಿಂದ ಬೇಗನೇ ಮದುವೆ ಮುಗಿಸಲು ಪಾಲಕರುಮುಂದಾಗಿದ್ದರು. ಮತ್ತೂಂದೆಡೆ ಪ್ರೀತಿ ಪ್ರೇಮ ನೆಪದಲ್ಲಿಮನೆಯಲ್ಲಿ ಮರ್ಯಾದೆ ಹಾಳಾಗುತ್ತದೆ ಎಂಬ ಕಾರಣಕ್ಕೆ ಬೇರೆಯವರೊಂದಿಗೆ ಮದುವೆಮಾಡಿ ಮುಗಿಸಲುಅಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದೆ.
ಎಸ್.ಮಹೇಶ್