Advertisement
ಜ. 16ರಂದು ಮಗು ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸಿತ್ತು. ಜ.28ರಂದು ಮಧ್ಯಾಹ್ನ ಪೋಷಕರು ಪೋಲಿಯೋ ಲಸಿಕೆ ಹಾಕಿಸಿದ್ದರು. ಸಂಜೆ ವೇಳೆಗೆ ಮಗು ಮಂಕಾಯಿತು. ಮಗುವಿಗೆ ಉಷ್ಣವಾಗಿರಬಹುದೆಂದು ಸುಮ್ಮನಾದರು. ಮಾರನೇ ದಿನ ಅಸ್ವಸ್ಥವಾದ ಕಾರಣಆಸ್ಪತ್ರೆಗೆ ಕರೆತಂದರು. ವೈದ್ಯರು ಮಗುವಿಗೆ ಸರಿಯಾಗಿ ಹಾಲುಣಿಸಿಲ್ಲ. ಇದರಿಂದಾಗಿ ಜ್ವರ ಬಂದಿದೆ. ಇದರಿಂದ ಸೋಂಕಾಗಿದೆ ಎಂದು ಸಬೂಬು ಹೇಳಿ, ನಿಮ್ಹಾನ್ಸ್‌ಗೆ ಕರೆದೊಯ್ಯವಂತೆ ಸೂಚಿಸಿದರು. ಅಲ್ಲಿ ಕರೆದೊಯ್ದು ತಪಾಸಣೆಗೊಳಪಡಿಸಿದಾಗ ಸ್ಥಿತಿ ಗಂಭೀರವಾಗಿದೆ, ಈಗ ಏನೂ ಮಾಡಲಾಗದು ಎಂದರು. ಮಗು ಮನೆಗೆ ಬರುವ ವೇಳೆಗೆ ಅಸುನೀಗಿತ್ತು.