Advertisement

“ಜನನಿ’ಯಿಂದ ನೋವಿಲ್ಲದ ಸಹಜ ಹೆರಿಗೆ

06:12 PM Dec 18, 2020 | Suhan S |

ವಿಜಯಪುರ: ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೈದ್ಯಕೀಯ ಕ್ಷೇತ್ರದ ಪ್ರಥಮ ಗರ್ಭಿಣಿಯೊಬ್ಬಳು ನೋವು ರಹಿತ ಸಹಜ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ, ವಿಭಿನ್ನವಾದ ಪ್ರಾಯೋಗಿಕ ಯೋಜನೆ ಘಟನೆಗೆ ವಿಜಯಪುರ ಸಾಕ್ಷಿಯಾಗಿದೆ.

Advertisement

ವಿಶಿಷ್ಟ ತಂತ್ರಜ್ಞಾನ ಅಳವಡಿಕೆ ಮೂಲಕ ಇಂಥ ಪ್ರಾಯೋಗಿಕ ಹೆರಿಗೆ ಯಶಸ್ವಿಯೂ ಆಗಿದ್ದು ಜಿಲ್ಲೆಯ ವೈದ್ಯರ ನೈಪುಣ್ಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ. ನಗರದ ಜಲನಗರದಲ್ಲಿರುವ ಜನನಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ ವೈದ್ಯ ಡಾ| ಹಂಪನಗೌಡ ಪಾಟೀಲ ನೇತೃತ್ವದ ವೈದ್ಯರ ತಂಡ ಎಪಿಡ್ನೂರಲ್‌ ಅರವಳಿಕೆ ತಂತ್ರಜ್ಞಾನದ ಮೂಲಕ ನೋವು ರಹಿತ ಹೆರಿಗೆಮಾಡಿಸುವ ಮೂಲಕ ವಿಶಿಷ್ಟ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಮಟ್ಟಿಗೆ ಪ್ರಪ್ರಥಮ ವೈದ್ಯಕೀಯ ಲೋಕದಲ್ಲಿ ಅದರಲ್ಲೂ ಆಸ್ಪತ್ರೆಯೊಂದರಲ್ಲಿ ನಡೆದ ಪ್ರಾಯೋಗಿಕ ಹೆರಿಗೆಯಶಸ್ವಿಯಾಗಿದೆ. ಹಂಪನಗೌಡ ಪಾಟೀಲ ನೇತೃತ್ವದಲ್ಲಿ ಡಾ| ಟಿ.ಎಂ. ಸೂರ್ತಿ, ಡಾ| ವಿನಯ ಮಲಕಣ್ಣವರ ವೈದ್ಯರು ಹಾಗೂ ಸಿಬ್ಬಂದಿಗಳಿದ್ದ ತಂಡ ಅಪರೂಪದ ಸಾಧನೆ ಮಾಡಿದೆ. ನಗರದ ಆದರ್ಶ ನಗರದ 21 ವರ್ಷದಚನ್ನಮ್ಮ ಬಿರಾದಾರ ಗರ್ಭಿಣಿಯಾಗಿರುವ ಹಂತದಿಂದ ಈವರೆಗೆ ನಗರದ ಜನನಿಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಡಾ| ಹಂಪನಗೌಡಪಾಟೀಲ ಅವರಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದರು.

ಹೆರಿಗೆ ಸಂದರ್ಭದಲ್ಲಿ ಗರ್ಭಿಣಿ ನೋವು ಅನಭವಿಸುವುದು ಸಹಜವಾಗಿದ್ದು ಜನನಿ ಡಾ| ಹಂಪನಗೌಡ ಅವರು ವೈದ್ಯಕೀಯಲೋಕದಲ್ಲಿ ಇತರೆಡೆ ಯಶಸ್ವಿಯಾಗಿರುವ ನೋವು ರಹಿತ ಹೆರಿಗೆ ಮಾಡುವ ಯೋಚನೆ ಮಾಡಿದರು. ವಿಷಯವನ್ನು ಗರ್ಭಿಣಿ ಚನ್ನಮ್ಮ ಅವರಿಗೆ ತಿಳಿಸಿದಾಗ ಅವರು ಕೂಡ ಇದಕ್ಕೆ ಸಮ್ಮತಿಸಿದ್ದರು. ಅಂತಿಮವಾಗಿ ವಿಜಯಪುರ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದ ನೋವು ರಹಿತ ಹೆರಿಗೆ ಮಾಡಿಸಿ ಯೋಜನೆ ಯಶಸ್ವಿಯಾಗಿದೆ. ನೋವುರಹಿತೆ ಹೆರಿಗೆಯಲ್ಲಿ ಚನ್ನಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಜನನಿ ಆಸ್ಪತ್ರೆ ವೈದ್ಯರು ಪ್ರಥಮ ಹೆರಿಗೆಯಲ್ಲೇನನಗೆ ನೋವಿಲ್ಲದೇ ಸಹಜ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮನೀಡುವ ಅವಕಾಶಕಲ್ಪಿಸಿದ್ದಾರೆ. ಹೆರಿಗೆ ಎಂದರೆ ಗರ್ಭಿಣಿಯೊಬ್ಬಳುಮಗುವಿಗೆ ಜನ್ಮ ನೀಡಿದ ತಾಯಿ ಆಗುವ ಹಂತಎಂದರೆ ಅದು ಸ್ವಯಂ ಆಕೆಗೇ ಪುನರ್ಜನ್ಮ.ಹೀಗಾಗಿ ನನ್ನ ಮಟ್ಟಿಗೆ ಜನನಿ ಆಸ್ಪತ್ರೆ ವೈದ್ಯರಕಾರ್ಯ ಅತ್ಯಂತ ನೆಮ್ಮದಿ-ಸಂತಸದ ತಂದಿದೆ ಎಂದು ನೂತನ ತಂತ್ರಜ್ಞಾನದಲ್ಲಿ ಮಗುವಿಗೆ ಜನ್ಮನೀಡಿದ ಚನ್ನಮ್ಮ ಪ್ರತಿಕ್ರಿಯಿಸಿದ್ದಾರೆ. ಹೆರಿಗೆ ನೋವು ಕಾಣಿಸಿಕೊಂಡರೆ ಸಾಕು ಸ್ತ್ರೀಯರು ಹಲವು ದಿನಗಳ ಕಾಲ ಹೆರಿಗೆನೋವಿನಿಂದ ಬಳಲುತ್ತಾರೆ. ಹಲವು ಸಂದರ್ಭದಲ್ಲಿ ಹೆರಿಗೆಯಲ್ಲೂ ತೊಂದರೆ ಅನುಭವಿಸುತ್ತಾರೆ. ಮಗು ಗರ್ಭದಿಂದ ಹೊರ ಬರುವಾಗ ಗತಿ ಬದಲಾಯಿಸಿದರೆ, ತಾಯಿ ಮತ್ತು ಮಗು ಅಸುನಿಗಿದ ಘಟನೆಗಳೂ ಇವೆ. ಹೀಗಾಗಿ ಸ್ತ್ರೀಯರಿಗೆ ಹೆರಿಗೆ ಸಂದರ್ಭದಲ್ಲಿ ನೋವು ತಡೆಯದಾದಾಗ ವೈದ್ಯರು ವಿಧಿ ಇಲ್ಲದೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುತ್ತಾರೆ. ಗರ್ಭಿಣಿಯರು ಹೆರಿಗೆ ಸಂದರ್ಭದಲ್ಲಿ ಅನುಭವಿಸುವ ಇಂಥ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವುದೇ ನೋವು ರಹಿತ ಹೆರಿಗೆ ತಂತ್ರಜ್ಞಾನ. ಜನನಿ ಆಸ್ಪತ್ರೆ ಮುಖ್ಯ ಅರವಳಿಕೆ ಮುಖ್ಯ ತಜ್ಞೆಯಾಗಿರುವ ಡಾ| ಸೂರ್ತಿ, ಎಪಿಡ್ನೂರಲ್‌ ಅನಸ್ತೇಶಿಯಾ ಹೆರಿಗೆ ತಂತ್ರಜ್ಞಾನದಲ್ಲಿ ಹೈದ್ರಾಬಾದ್‌ನ ಫರ್ನಾಂಡಿಸ್‌ ಆಸ್ಪತ್ರೆಯಲ್ಲಿ ಅನುಭವ ಪಡೆದಿದ್ದಾರೆ.

Advertisement

ಮಹಾನಗರಗಳಲ್ಲಿ ಅತ್ಯಂತ ಸುಧಾರಿತ ತಂತ್ರಜ್ಞಾನದ ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಇರುವ ಆಸ್ಪತ್ರೆಗಳಲ್ಲಿ ಮಾತ್ರ ನೋವು ರಹಿತ ಸಹಜ ಹೆರಿಗೆ ನಡೆಯುತ್ತವೆ. ಇದೇ ಮೊದಲ ಬಾರಿಗೆ ಪ್ರಾಯೋಗಿಕ ಹಂತದಲ್ಲೇ ವಿಜಯಪುರ ಜಿಲ್ಲೆಯಲ್ಲೂ ಯಶಸ್ವಿಯಾಗಿದೆ. ಇದು ನಮ್ಮ ಸಂತಸ ಇಮ್ಮಡಿಗೊಳಿಸಿದೆ. ಡಾ| ಹಂಪನಗೌಡ ಪಾಟೀಲ, ಯಶಸ್ವಿ ಯೋಜನೆ ರೂವಾರಿ, ಜನನಿ ಆಸ್ಪತ್ರೆ, ಜಲನಗರ

ಸದರಿ ತಂತ್ರಜ್ಞಾನದ ಪ್ರಾಯೋಗಿಕ ಹಂತದಲ್ಲಿ ಸೂಕ್ಷ್ಮ ಅಧ್ಯಯನದ ಅಗತ್ಯವಿದೆ. ಗರ್ಭಿಣಿ ಹಾಗೂ ಆಕೆಯ ಭವಿಷ್ಯ ಎನಿಸುವ ಮಗುವಿನ ಭವಿಷ್ಯವೂ ಇದರಲ್ಲಿ ಅಡಕವಾಗಿರುತ್ತದೆ.ಸೂಕ್ತ ಜ್ಞಾನ, ಪರಿಣಿತಿ ಬಯಸುವ ಈ ತಂತ್ರಜ್ಞಾನ ಅಪಾಯಕಾರಿಯೂ ಹೌದು. ಹೀಗಾಗಿ ಉನ್ನತ ಅಧ್ಯಯನ, ಅನುಭವ ಇದಲ್ಲಿ ಮಾತ್ರ ಇಂಥ ಯೋಜನೆಗಳು ಯಶಸ್ಸು ಸಾ ಧಿಸಲು ಸಾಧ್ಯವಿದೆ.  –ಡಾ| ಟಿ.ಎಂ.ಸೂರ್ತಿ, ಅರವಳಿಕೆ ತಜ್ಞವೈದ್ಯೆ, ಜನನಿ ಆಸ್ಪತ್ರೆ, ಜನಲನಗರ

ಜನನಿ ಆಸ್ಪತ್ರೆ ವೈದ್ಯ-ಸಿಬ್ಬಂದಿ ನೋವಿಲ್ಲದೇ ಯಶಸ್ವಿಯಾಗಿ ಸಹಜ ಹೆರಿಗೆ ಮಾಡಿಸಿದ್ದಾರೆ. ತಾಯಂದಿರ ಪಾಲಿಗೆ ಈ ತಂತ್ರಜ್ಞಾನ ವರದಾನವಾಗಿದೆ. ನೋವಿಲ್ಲದ ಸಹಜ ಹೆರಿಗೆ ಮೂಲಕ ಜನ್ಮ ನೀಡಿದ ಜಿಲ್ಲೆಯ ಮೊದಲ ತಾಯಿ ಎಂಬ ಕೀರ್ತಿಯೂ ಲಭಿಸಿದ್ದು ಸಂತಸವಾಗಿದೆ. –ಚನ್ನಮ್ಮ ಬಿರಾದಾರ, ನೋವು ರಹಿತ ಹೆರಿಗೆಯಾದ ತಾಯಿ, ಆದರ್ಶ ನಗರ

Advertisement

Udayavani is now on Telegram. Click here to join our channel and stay updated with the latest news.

Next