Advertisement

ರೈತರು-ಕಾರ್ಖಾನೆ ಕಣ್ಣುಗಳಿದಂತೆ

04:46 PM Nov 02, 2018 | |

ಚಿಕ್ಕೋಡಿ: ರಾಜಕಾರಣ ಬಿಟ್ಟು ಸಕ್ಕರೆ ಉದ್ದಿಮೆ ಸ್ಥಾಪನೆ ಮಾಡಬೇಕು. ರೈತರು ಮತ್ತು ಕಾರ್ಖಾನೆ ಎರಡು ಕಣ್ಣುಗಳ ಹಾಗೇ ಕಾರ್ಯ ನಿರ್ವಹಿಸಿದರೆ ಮಾತ್ರ ಸಕ್ಕರೆ ಉದ್ದಿಮೆಯಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

Advertisement

ಚಿಕ್ಕೋಡಿ ಸಮೀಪದ ಜೈನಾಪುರದಲ್ಲಿ ಬೋರಗಾಂವದ ಅರಿಹಂತ ಸಮೂಹ ವತಿಯಿಂದ ಓಂ ಶುಗರ್ ಸಕ್ಕರೆ ಕಾರ್ಖಾನೆಯ ಪ್ರಸಕ್ತ ವರ್ಷದ ಪ್ರಥಮ ಬಾಯ್ಲರ್‌ ಪ್ರದೀಪನ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಸಕ್ಕರೆ ಕಾರ್ಖಾನೆಯು 2500 ಮೆಟ್ರಿಕ್‌ ಟನ್‌ ಕುಬ್ಬು ನುರಿಸುವ ಸಾಮರ್ಥ್ಯ ಹೊಂದಿದ್ದು, ಅದನ್ನು 3500 ಮೆಟ್ರಿಕ್‌ ಟನ್‌ ಸಾಮರ್ಥ್ಯ ಮಾಡಿದರೆ ಸುಲಭವಾಗಲಿದೆ. ಈ ಕಾರ್ಯನೆಯು ಒಳ್ಳೆಯ ರೀತಿಯಿಂದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸಬೇಕು ಎಂದರು.

ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ಸಕ್ಕರೆ ಕಾರ್ಖಾನೆಗಳಿಗೆ ಉತ್ತಮ ಕಬ್ಬು ಬೇಕಾಗುತ್ತದೆ. ಅದೇ ರೀತಿ ರೈತರಿಗೆ ಉತ್ತಮ ಬೆಲೆ ನಿರೀಕ್ಷೆ ಮಾಡುತ್ತಾರೆ. ಆದರೆ ಸಮರ್ಪಕ ಮಳೆ ಇಲ್ಲದೆ ಇರುವದರಿಂದ ಕಬ್ಬಿನ ಇಳುವರಿಯಲ್ಲಿ ಕಡಿಮೆಯಾಗುತ್ತಿದೆ. ಇದೇ ರೀತಿ 2013ರಲ್ಲಿ ಸಮಸ್ಯೆ ಇತ್ತು. ಅಂದಿನ ಸರ್ಕಾರದಲ್ಲಿ ನಾನು ಸಕ್ಕರೆ ಸಚಿವನಾಗಿದ್ದಾಗ 1800 ಕೋಟಿ ರೂ. ಮಂಜೂರು ಮಾಡಿ ಪ್ರತಿ ಟನ್‌ ಕಬ್ಬಿಗೆ ಪ್ರೋತ್ಸಾಹ ಹಣ ನೀಡಲಾಗಿತ್ತು. ಅದೇ ಮಾದರಿಯಲ್ಲಿ ಈಗಲು ರಾಜ್ಯ ಸರ್ಕಾರ ಪ್ರೋತ್ಸಾಹ ಹಣ ನೀಡಬೇಕೆಂದು ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಲಾಗಿದೆ ಎಂದರು.

ಸಾಂಗ್ಲಿ ಸಂಸದ ಸಂಜಯಕಾಕಾ ಪಾಟೀಲ ಮಾತನಾಡಿದರು. ಈ ಮೊದಲು ನಿಡಸೋಸಿ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಬಾಯ್ಲರ ಪ್ರದೀಪನಕ್ಕೆ ಪೂಜೆ ಸಲ್ಲಿಸಿದರು. ವೇದಿಕೆಯಲ್ಲಿ ಶಾಸಕ ಗಣೇಶ ಹುಕ್ಕೇರಿ, ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ರಾಜು ಕಾಗೆ, ಉದ್ಯಮಿ ಲಕನ ಜಾರಕಿಹೊಳಿ, ವೀರಕುಮಾರ ಪಾಟೀಲ, ಲಕ್ಷ್ಮಣರಾವ ಚಿಂಗಳೆ, ಸುಭಾಷ ಜೋಶಿ, ಡಿ.ಟಿ. ಪಾಟೀಲ, ಬಿ.ಆರ್‌. ಸಂಗಪ್ಪಗೋಳ, ಸಾಂಗ್ಲೀ ಮಾಜಿ ಮಹಾಪೌರ ಸುರೇಶದಾದಾ ಪಾಟೀಲ, ಮಹಾವೀರ ಮೋಹಿತೆ ಇತರರು ಇದ್ದರು. ಉತ್ತಮ ಪಾಟೀಲ ಸ್ವಾಗತಿಸಿದರು. ಜೀವಂಧರ ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next