Advertisement

ಪ್ರವಾಸೋದ್ಯಮ ಚೇತರಿಕೆಗೆ ಬೇಕಾಗಬಹುದು 6 ತಿಂಗಳು

04:41 PM May 27, 2020 | Naveen |

ಚಿಕ್ಕಮಗಳೂರು: ಲಾಕ್‌ಡೌನ್‌ ತೆರವುಗೊಂಡ ನಂತರವೂ ಪ್ರವಾಸೋದ್ಯಮ ಚೇತರಿಕೆಗೆ ಆರು ತಿಂಗಳು ಕಾಲಾವಕಾಶ ಬೇಕಾಗಬಹುದೆಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಜಾಗತಿಕ ಪ್ರವಾಸೋದ್ಯಮವೇ ನೆಲಕಚ್ಚಿದೆ.ಅದರಂತೆ ಚಿಕ್ಕಮಗಳೂರು ಪ್ರವಾಸೋದ್ಯಮ ಪಾತಾಳ ಕಂಡಿದೆ. ಲಾಕ್‌ಡೌನ್‌ ತೆರವು ನಂತರ ಪುನಃಶ್ಚೇತನ ಗೊಳಿಸಲು ಸ್ಥಳೀಯ ಪ್ರವಾಸಿಗರನ್ನೇ ಅವಲಂಬಿಸಬೇಕಾಗುತ್ತದೆ. ಸಿಂಗಪೂರ ಮಾದರಿಯಲ್ಲಿ ಲವ್‌ ಯುವರ್‌ ನೇಟಿವ್‌ ಅಳವಡಿಸಿಕೊಳ್ಳಲಾಗುವುದು ಎಂದರು.

ನಂತರ ಸಾಮಾಜಿಕ ಜಾಲತಾಣಗಳಲ್ಲಿ ನೋಡು ಬಾ…ನಮ್ಮೂರ ಎಂದು ಜಿಲ್ಲೆಗೆ ಪ್ರಮೋಟ್‌ ಮಾಡಲಾಗುವುದು. ಚೇತರಿಕೆ ಕಂಡ ನಂತರ ಅಂತಾರಾಜ್ಯ ಪ್ರವಾಸೋದ್ಯಮ ಉತ್ತಮಗೊಳಿಸಲಾಗುವುದು. ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಚೇತರಿಕೆಗೆ ಒಂದೂವರೆ ವರ್ಷ ಕಾಲ ಬೇಕಾಗಬಹುದೆಂದರು.

ನ್ಯೂ ಟೂರಿಸಂ ಪಾಲಿಸಿ ಜೂನ್‌ ಅಂತ್ಯ ದೊಳಗೆ ರಾಜ್ಯದಲ್ಲಿ ಜಾರಿಗೆ ತರಲಾಗುವುದು. ಅದೇ ವೇಳೆ ಜಿಲ್ಲಾ ಪಾಲಿಸಿಯನ್ನು ಹೊರ ತರಲಾಗುವುದು. ನಂತರ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಸಿ ಆಯಾ ಜಿಲ್ಲೆಗೆ ಹೊಂದಿಕೆಯಾಗುವಂತೆ ರಾಜ್ಯ ಮಟ್ಟದ ಪಾಲಿಸಿ ಜತೆ ಜಿಲ್ಲಾಮಟ್ಟದ ಪಾಲಿಸಿ ಜಾರಿಗೆ ತರುವ ಚಿಂತನೆ ಇದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next