Advertisement

ಜಿಲ್ಲಾ ಉತ್ಸವದಲ್ಲಿ ಪ್ಯಾರಾ ಗ್ಲೈಡಿಂಗ್‌-ಸ್ಕೈ ಡ್ರೈವಿಂಗ್‌

01:36 PM Feb 26, 2020 | Team Udayavani |

ಚಿಕ್ಕಮಗಳೂರು: ಜಿಲ್ಲಾ ಉತ್ಸವದಲ್ಲಿ ಚಿಕ್ಕಮಗಳೂರು ಅಡ್ವೆಂಚರ್‌ ಕ್ಲಬ್‌ನಿಂದ ಪ್ಯಾರಾ ಮೋಟರ್‌ ಗ್ಲೈಡಿಂಗ್‌, ಪ್ಯಾರಾ ಗ್ಲೈಡಿಂಗ್‌ ಹಾಗೂ ಸ್ಕೈ ಡ್ರೈವಿಂಗ್‌ ಆಯೋಜಿಸಲಾಗಿದೆ ಎಂದು ಅಡ್ವೆಂಚರ್‌ ನ್ಪೋರ್ಟ್ಸ್ ಕ್ಲಬ್‌ ಸಂಸ್ಥಾಪಕ ಅಧ್ಯಕ್ಷ ರೂಬೆನ್‌ ಮೊಸಸ್‌ ತಿಳಿಸಿದರು.

Advertisement

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಅನೇಕ ವರ್ಷಗಳಿಂದ ನಿಂತಿದ್ದ ಜಿಲ್ಲಾ ಉತ್ಸವಕ್ಕೆ ಸರ್ಕಾರ ಮರು ಚಾಲನೆ ನೀಡಿರುವುದು ಸಂತಸ ತಂದಿದೆ. ಉತ್ಸವಕ್ಕೆ ಇನಷ್ಟು ಮೇರಗು ತರುವ ಹಿನ್ನೆಲೆಯಲ್ಲಿ ಕ್ಲಬ್‌ ವತಿಯಿಂದ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ನಗರದ ಎಐಟಿ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ಮೋಟರ್‌ ಪ್ಯಾರಾ ಗ್ಲೆ„ಡಿಂಗ್‌ ಆಯೋಜಿಸಿದ್ದು, ಪೈಲಟ್‌ ಜೊತೆ ಒಬ್ಬರು ಕುಳಿತು ಆಕಾಶ ಪ್ರದಕ್ಷಿಣೆ ಹಾಕಬಹುದು. ಪ್ರತಿದಿನ ಬೆಳಿಗ್ಗೆ 6.30 ರಿಂದ 10 ಗಂಟೆವರೆಗೆ ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ನಡೆಯಲಿದೆ. ಈ ಸಾಹಸ ಕ್ರೀಡೆಯಲ್ಲಿ ಭಾಗವಹಿಸುವ ಓರ್ವರಿಗೆ 3,100 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದರು.

ಎಐಟಿ ಮೈದಾನದಲ್ಲಿ ಸ್ಕೈ ಡೈವಿಂಗ್‌ ಆಯೋಜಿಸಿದ್ದು, ಮೋಟರ್‌ ಪ್ಯಾರಾ ಗ್ಲೆ„ಡಿಂಗ್‌ ಮೇಲಕ್ಕೆ ಹೋದಾಗ ಸಾವಿರ ಅಡಿ ಎತ್ತರದಿಂದ ನುರಿತ ತರಬೇತಿ ಹೊಂದಿದ ಪರಿಣಿತರು ಕೆಳಗೆ ಧುಮುಕಲಿದ್ದು, ಪ್ಯಾರಾಚೂಟ್‌ ಮೂಲಕ ಭೂಮಿಗೆ ತಲುಪುವರು. ಈ ಸಾಹಸವನ್ನು ಸಾರ್ವಜನಿಕರ ವೀಕ್ಷಣೆಗೆ ಮಾತ್ರ ಅವಕಾಶವಿರುತ್ತದೆ ಎಂದು ತಿಳಿಸಿದರು.

ಪ್ಯಾರಾ ಗ್ಲೈಡಿಂಗ್‌ ವಾಯು ಸಾಹಸ ಕ್ರೀಡೆ ಮಾಣಿಕ್ಯಧಾರದ ಬಳಿ ಇರುವ ಟವರ್‌ ಪಕ್ಕದ ಸಣ್ಣಗುಡ್ಡದ ಮೇಲಿಂದ ಕೆಳಗೆ ದುಮುಕಲಿದ್ದು, ಅಲ್ಲಿಂದ ಮಲ್ಲೇನಹಳ್ಳಿ ಬಿಂಡಿಗ ದೇವಸ್ಥಾನದ ಹಿಂಭಾಗದ ಮೈದಾನದಲ್ಲಿ ಇಳಿಯುತ್ತದೆ. ಇದು ಕೂಡ ಸಾರ್ವಜನಿಕರ ವೀಕ್ಷಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಉತ್ಸವದ ಹಿನ್ನೆಲೆಯಲ್ಲಿ ನಡೆಯುವ ಸಾಹಸ ಕ್ರೀಡೆಗಳನ್ನು ಈಗಾಗಲೇ ಟೆಸ್ಟ್‌ ಡ್ರೈವ್‌ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ಇಂತಹ ಕ್ರೀಡೆಗಳಲ್ಲಿ ಭಾಗವಹಿಸಲು ನಮ್ಮ ರಾಜ್ಯದಲ್ಲಿ ಅವಕಾಶವಿಲ್ಲ. ಜಿಲ್ಲೆಯ ಜನರು ಸಾಹಸ ಕ್ರೀಡೆಗಳನ್ನು ಆನಂದಿಸಲಿ ಎಂದು ಆಯೋಜಿಸಲಾಗಿದೆ. ಸರ್ಕಾರ ಸಾಹಸ ಪ್ರದರ್ಶನಕ್ಕೆ ಸಹಕಾರ ನೀಡಿದಲ್ಲಿ ಮುಂದಿನ ದಿನಗಳಲ್ಲಿ ನಿರಂತರವಾಗಿ ಇಂತಹ ಸಾಹಸ ಪ್ರದರ್ಶನಗಳನ್ನು ಆಯೋಜಿಸಲಾಗುವುದಉ. ಜಿಲ್ಲಾ ಉತ್ಸವದ ಅಂಗವಾಗಿ ನಡೆಯುತ್ತಿರುವ ಕ್ರೀಡೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ಸಹಕಾರ ನೀಡಿದ್ದಾರೆ ಎಂದರು.

ಕ್ಲಬ್‌ ಅಧ್ಯಕ್ಷ ಕಿಶನ್‌ಗೌಡ ಮಾತನಾಡಿ, ಸಾಹಸ ಕ್ರೀಡೆಯಲ್ಲಿ ಭಾಗವಹಿಸಲು ಅನೇಕರು ಈಗಾಗಲೇ ನೋಂದಾವಣಿ ಮಾಡಿಕೊಂಡಿದ್ದಾರೆ. ಈಗಾಗಲೇ ಜಿಲ್ಲಾಡಳಿತದ ಕ್ರೀಡೆ ನಡೆಸಲು ಅನುಮತಿ ಪಡೆದುಕೊಳ್ಳಲಾಗಿದೆ. ಸಾಹಸ ಕ್ರೀಡೆಯ ಹೆಚ್ಚಿನ ಮಾಹಿತಿಗಾಗಿ ನವೀನ್‌ ಮೊ. 8880155466, ಕಿಶನ್‌ಗೌಡ ಮೊ.9448008639 ಹಾಗೂ ವಿವೇಕ್‌ ಮೊ.9880386432 ಅವರನ್ನು ಸಂಪರ್ಕಿಸುವಂತೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕ್ಲಬ್‌ ಕಾರ್ಯದರ್ಶಿ ವಿವೇಕ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next