ಚಿಕ್ಕೋಡಿ: ಅನೈತಿಕ ಸಂಬಂಧಕ್ಕೆ ಸಂಶಯಪಟ್ಟು ಯುವಕ-ಯುವತಿಯನ್ನು ಜಾಲಿ ಗಿಡಗೆ ಕಟ್ಟಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿ ಬುಧವಾರ ತೀರ್ಪು ಪ್ರಕಟಿಸಿದೆ.
ಚಿಕ್ಕೋಡಿ ತಾಲೂಕಿನ ಮಮದಾಪೂರ ಕೆಕೆ ಗ್ರಾಮದ ಬಾಬು ಮುತ್ತೇಪ್ಪ ಆಕಳೆ, ನಾಗಪ್ಪ ಮುತ್ತೇಪ್ಪ ಆಕಳೆ, ಮುತ್ತೇಪ್ಪ ಭೀಮಪ್ಪ ಆಕಳೆ ಎಂಬ ಮೂವರು ದೋಷಿಗಳಿಗೆ ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.
ಘಟನೆ ವಿವಿರ
ಕಳೆದ 22 ಅಕ್ಟೋಬರ್ 2013 ರಂದು ವಿವಾಹಿತೆಯಾಗಿದ್ದ ಸಂಗೀತಾ ಬಾಬು ಆಕಳೆ ಮತ್ತು ಬಸವರಾಜ ಪ್ರಭಾಕರ ಬುರ್ಜಿ ಎಂಬ ಯುವಕ ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಜಾಲಿ ಗಿಡಕ್ಕೆ ಕಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಸಂಗೀತಾ ಮತ್ತು ಬಸವರಾಜ ಇಬ್ಬರು ಮೊಬೈಲ್ ನಲ್ಲಿ ಮಾತನಾಡಿದ್ದನ್ನು ಯುವತಿಯ ಗಂಡ ಮೊಬೈಲದಲ್ಲಿ ರೇಕಾರ್ಡ್ ಮಾಡಿ ಇಬ್ಬರನ್ನು ಎಳೆದು ತಂದು ಜಾಲಿ ಗಿಡಕ್ಕೆ ಕಟ್ಟಿ ರೇಕಾರ್ಡನ್ನು ಅವರಿಗೆ ಕೇಳಿಸಿ ಅವಾಚ್ಯ ಶಬ್ದದಿಂದ ಬೈದು ಕತ್ತಿದಿಂದ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದರು.
ಪ್ರಕರಣದ ಕುರಿತು ಅಂದಿನ ಸಿಪಿಐ ಶಂಕರ ರಾಗಿ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು. ಕಳೆದ ಒಂಭತ್ತು ವರ್ಷ ವಿಚಾರಣೆ ನಡೆಸಿದ ನ್ಯಾಯಾಲಯ ಬುಧವಾರ ಮೂವರು ಆರೋಪಿತರಿಗೆ ಗಲ್ಲು ಶಿಕ್ಷೆ ನೀಡಿ ತೀರ್ಪು ನೀಡಿದೆ. ಸರ್ಕಾರಿ ಅಭಿಯೋಜಕ ವೈ.ಜಿ.ತುಂಗಳ ಪ್ರಕರಣದ ವಕಾಲತ್ತು ವಹಿಸಿದ್ದರು.