Advertisement

ಚಿಕ್ಕೋಡಿ ಪೊಲೀಸರ ಕಾರ್ಯಾಚರಣೆ 3.60 ಕೋಟಿ ರೂ ಮೌಲ್ಯದ 12 ಲಾರಿ ವಶ

01:25 PM Jul 01, 2021 | Team Udayavani |

ಚಿಕ್ಕೋಡಿ: ಸುಳ್ಳು ದಾಖಲಾತಿ ಸೃಷ್ಟಿ ಮಾಡಿ ಇನ್ಸೂರನ್ಸ್ ಕಂಪನಿಯಿಂದ ಹಣ ಕೊಡಿಸುತ್ತೇವೆಂದು ಲಾರಿಗಳನ್ನು ಬೇರೆಯವರಿಗೆ ಮಾರಾಟ ಮಾಡುವ ಇಬ್ಬರನ್ನು ಅಂತರಾಜ್ಯ ವಂಚಕರನ್ನು ಬಂಧಿಸುವಲ್ಲಿ ಚಿಕ್ಕೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಈ ಕುರಿತು ಎಸ್.ಪಿ. ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.

ಇದನ್ನೂ ಓದಿ:ಬೆಳಗಾವಿ ನಗರದಲ್ಲಿ ಚಿರತೆ ಪ್ರತ್ಯಕ್ಷ: ಸಾರ್ವಜನಿಕರಲ್ಲಿ ಆತಂಕ

ಸಾಂಗ್ಲಿ ಜಿಲ್ಲೆಯ ವಾಳವಾ ತಾಲೂಕಿನ ಮಚ್ಚೇಂದ್ರಗಡ ಗ್ರಾಮದ ಯುನೂಸ್ ಸೈಯದ್ ಹಾಗೂ ದಾಂಡೇಲಿ ಪಟ್ಟಣದ ಅಫ್ಜಲ್ ದಿಲಾವರ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಟಾಟಾ ಕಂಪನಿಯ 4 ಟಿಪ್ಪರ್ ಗಳು,‌ ಮಹಿಂದ್ರಾ ಕಂಪನಿಯ 2 ಟಿಪ್ಪರ್ ಗಳು,  ಅಶೋಕ ಲೈಲೆಂಡ್ ಕಂಪನಿಯ 3 ವಾಹನಗಳು, ಒಂದು ಜೆಸಿಬಿ ಹೀಗೆ 12 ವಾಹನಗಳು ವಶಪಡಿಸಿಕೊಂಡಿದ್ದಾರೆ.

Advertisement

ಡಿವೈಎಎಸ್ ಪಿ ಮನೋಜ ನಾಯಿಕ. ಸಿಪಿಐ ಆರ್‌.ಆರ್. ಪಾಟೀಲ,‌ ಪಿಎಸ್ ಐ ರಾಕೇಶ ಬಗಲಿ,‌ ಅಶೋಕ ಕುಳ್ಳೂರ ನೇತೃತ್ವದಲ್ಲಿ ಸಿಬ್ಬಂದಿ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next