Advertisement

Chikkodi: ಕೃಷ್ಣಾ ನದಿಯ ಒಳಹರಿವು ಹೆಚ್ಚಳ: ನದಿತೀರದ ಗ್ರಾಮಗಳಿಗೆ ಪ್ರಕಾಶ್ ಹುಕ್ಕೇರಿ ಭೇಟಿ

03:22 PM Jul 21, 2024 | Team Udayavani |

ಚಿಕ್ಕೋಡಿ: ಮಹಾರಾಷ್ಟದ ಕೊಂಕಣ ಭಾಗ ಮತ್ತು ಕರ್ನಾಟಕದ ಕೆಲ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಯ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನಲೆ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಜು.21ರ ರವಿವಾರ ಕೃಷ್ಣಾ ನದಿ ತೀರದ ಇಂಗಳಿ, ಮಾಂಜರಿ, ಯಡೂರ, ಚಂದೂರ ಹಾಗೂ ಕಲ್ಲೋಳ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಬಂದರೆ ಮುಂಜಾಗ್ರತೆ ಕ್ರಮವಾಗಿ 5 ಗ್ರಾಮಗಳಲ್ಲಿ ಸುಸಜ್ಜಿತ ಯಂತ್ರ ಚಾಲಿತ ದೋಣಿಗಳು ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಪ್ರವಾಹದ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾ.ಪಂ. ಪಿ.ಡಿ.ಓ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಇಂಗಳಿ ಗ್ರಾಮದ ಗಣಪತಿ ಧನವಡೆ, ರಮೇಶ ಮುರಚಿಟ್ಟೆ, ಶಶಿಕಾಂತ ಧನವಡೆ, ಚಂದ್ರಕಾಂತ ಲಂಗೋಟೆ, ಮಾಂಜರಿ ಗ್ರಾಮದ ಪಾಂಡು ಮಾನೆ, ಪೋಪಟ ಲಾಮಖಾನೆ, ಸಂಜು ನರವಡೆ, ನಿತೀನ ಮಾಯನ್ನವರ, ಯಡೂರ ಗ್ರಾಮದ ಮಹೇಶ ಕಾಗವಾಡೆ, ಶಿವಾನಂದ ಕರೋಶಿ, ಅಜೀತ ಕಿಲ್ಲೇದಾರ, ಗ್ರಾ.ಪಂ ಅಧ್ಯಕ್ಷ ಬಾಳು ಧನಗರ, ಚಂದೂರ ಗ್ರಾಮದ ಅನೀಲ ಪಾಟೀಲ, ಶರತ ಪಾಟೀಲ, ಶಶಿಕಾಂತ ಪಾಟೀಲ, ಸಿದ್ದು ಮಗದುಮ್ಮ, ಬಾಳಕೃಷ್ಣ ಮದ್ಯಾಪ್ಪಗೋಳ, ಮಾರುತಿ ಪಾಟೀಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next