Advertisement

ಚಿಕ್ಕೋಡಿ: ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆ ಅನ್ನದಾತರಿಗೆ ವರದಾನ

06:10 PM May 22, 2023 | Team Udayavani |

ಚಿಕ್ಕೋಡಿ: ಬಿರು ಬೇಸಿಗೆಯಲ್ಲಿ ತೀವ್ರ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದ ಚಿಕ್ಕೋಡಿ ಭಾಗದ ವ್ಯಾಪ್ತಿಯ ಬಹುತೇಕ ಗ್ರಾಮಗಳು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಶ್ರೀ ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆ ಚಿಕ್ಕೋಡಿ ತಾಲೂಕಿನ ಜನತೆಗೆ ವರದಾನವಾಗಿ ಪರಿಣಮಿಸಿದೆ.

Advertisement

ಒಂದೆಡೆ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದರೆ, ಇನ್ನೊಂದೆಡೆ ಕೃಷ್ಣಾ ನದಿಯ ಒಳಹರಿವು ಗಣನೀಯ ಪ್ರಮಾಣದಲ್ಲಿ
ಇಳಿಕೆಯಾಗಿ ತಾಲೂಕಿನ ಜಲಮೂಲಗಳು ಬತ್ತಲಾರಂಬಿಸುತ್ತಿವೆ. ಅಂತರ್ಜಲ ಮಟ್ಟವೂ ಕ್ಷೀಣಿಸಲು ಆರಂಭಿಸಲಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಉಲ್ಬಣಗೊಂಡು, ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಹ ಹಾಹಾಕಾರ ಏರ್ಪಟ್ಟಿತ್ತು. ಆದರೆ ಕ್ಷೇತ್ರದಲ್ಲಿ ಗಟ್ಟಿ ನಾಯಕತ್ವದ ಫಲವಾಗಿ ಇದೆಲ್ಲಕ್ಕೂ ತಕ್ಕ ಮಟ್ಟಿಗೆ ಪರಿಹಾರ ಸಿಗಲು ಸಾಧ್ಯವಾಗಿದೆ.

ವಿಧಾನ ಪರಿಷತ್‌ ಸದಸ್ಯ ಪ್ರಕಾಶ್‌ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ದೂರದೃಷ್ಟಿ ಫಲವಾಗಿ ರೂಪುಗೊಂಡ
ಶ್ರೀ ಅನ್ನಪೂಣೇಶ್ವರಿ ಏತ ನೀರಾವರಿ ಯೋಜನೆಯಿಂದ ಸಿಬಿಸಿ ಕಾಲುವೆಗೆ ನೀರು ಹರಿಲಾರಂಭಿಸಿದೆ. ಇದರಿಂದ
ಬೇಸಿಗೆಯಲ್ಲಿ ಚಿಕ್ಕೋಡಿ ತಾಲೂಕಿನ ಜನತೆಗೆ ಅನುಕೂಲವಾಗುತ್ತಿದೆ.

ಕೃಷ್ಣಾ ನದಿಗೆ ನೀರಿನ ಮಟ್ಟ ಕಡಿಮೆಯಾದಾಗ ತಕ್ಷಣ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರನ್ನು ಭೇಟಿ ಮಾಡಿದ ವಿ.ಪ.ಸದಸ್ಯ ಪ್ರಕಾಶ ಹುಕ್ಕೇರಿ ಅವರು ಮಹಾರಾಷ್ಟ್ರದಿಂದ  ನೀರು ಬಿಡಿಸಲು ಯಶಸ್ವಿಯಾಗಿದ್ದಾರೆ. ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಶ್ರೀ ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆಯಡಿ ಕಲ್ಲೋಳ ಬಳಿ ಕೃಷ್ಣಾ ನದಿಯಿಂದ ಅತ್ಯಾಧುನಿಕ ಯಂತ್ರಗಳಿಂದ ನೀರು ಎತ್ತಿ, ಅಲ್ಲಿಂದ 15 ಕಿಮೀ ದೂರದಲ್ಲಿರುವ ಚಿಕ್ಕೋಡಿ ಬ್ರ್ಯಾಂಚ್‌ ಕೆನಾಲ್‌ಗೆ ನೀರು ಹರಿಸಿ,
ಇದರಿಂದ ಜನರು, ಜಾನುವಾರುಗಳಿಗೆ ಮಾತ್ರವಲ್ಲದೆ ಕೃಷಿ ಚಟುವಟಿಕೆಗಳಿಗೂ ಅಗತ್ಯ ನೀರು ಪೂರೈಸಲಾಗುತ್ತಿದೆ. ಹನಿ
ನೀರಿಗೂ ಪರದಾಡುವ ಪರಿಸ್ಥಿತಿಯಲ್ಲಿದ್ದ ಜನತೆಗೆ ಭರಪೂರ ನೀರಿನ ಅನುಕೂಲ ಮಾಡಿಕೊಡಲಾಗಿದೆ.

ವಾರದಿಂದ ಕಾಲುವೆಗೆ ನೀರು ಹರಿದು ಬರಲಾರಂಭಿಸಿದೆ. ಅಗಾಧ ಪ್ರಮಾಣದ ಬಿಸಿಲು ಇರುವುದರಿಂದ ನಿಧಾನವಾಗಿ ನೀರು
ಹರಿದು ಬರಲಾರಂಬಿಸಿದೆ. ಸದ್ಯ ಹಿರೇಕೊಡಿ, ನಾಗರಾಳ ಮತ್ತು ನೇಕ ಕಡೆ ನೀರು ಬರುತ್ತಿದೆ. ನಾಲ್ಕೈದು ದಿನಗಳ ಒಳಗಾಗಿ ಶಿರಗಾಂವ ಗ್ರಾಮದ ಕಡೆ ನೀರು ಬರುತ್ತಿದೆ. ಇದರಿಂದ ರೈತಾಪಿ ವರ್ಗದ ಜನರಿಗೆ ಅನುಕೂಲವಾಗಲಿದೆ.
*ಭೀಮಾ ಉದಗಟ್ಟಿ
ಶಿರಗಾಂವ ಗ್ರಾಮಸ್ಥರು

Advertisement

*ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next