Advertisement

ಜನಿಸಿದ ಒಂದು ಗಂಟೆಯಲ್ಲೇ ಸಾವನಪ್ಪಿದ ವಿಚಿತ್ರ ದೇಹದ ಕರು

09:50 AM Dec 18, 2022 | Team Udayavani |

ಚಿಕ್ಕಮಗಳೂರು: ವಿಚಿತ್ರ ದೇಹ ಹೊಂದಿದ್ದ ಕರು ಹುಟ್ಟಿ ಒಂದೇ ಗಂಟೆಯಲ್ಲಿ ಸತ್ತು ಹೋಗಿರುವ ಘಟನೆ ಕಡೂರು ತಾಲೂಕಿನ ಕೇದಿಗೆರೆ ಗ್ರಾಮದಲ್ಲಿ ನಡೆದಿದೆ.

Advertisement

ಕೇದಿಗೆರೆ ಗ್ರಾಮದ ಈಶಣ್ಣ ಎಂಬುವರ ಮನೆಯಲ್ಲಿ 1 ತಲೆ, 8 ಕಾಲು, 2 ದೇಹ, ಒಂದು ದೇಹಕ್ಕೆ ತಲೆಯೇ ಇಲ್ಲ, ಒಂದು ದೇಹ ಮತ್ತೊಂದು ದೇಹದ ಜೊತೆ ಸೇರ್ಪಡೆಯಾಗಿರುವಂತೆ ಕರು ವಿಚಿತ್ರವಾಗಿ ಹುಟ್ಟಿತ್ತು.

ಈಶಣ್ಣ30 ಕುರಿಗಳನ್ನು ಸಾಕಿಕೊಂಡು ಬದುಕುತ್ತಿದ್ದ. ವಿಚಿತ್ರ ಕರು ನೋಡಲು ಅಕ್ಕಪಕ್ಕದ ಹಳ್ಳಿಗಳಿಂದೆಲ್ಲಾ ಜನ ಬರುತ್ತಿರುತ್ತಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next