Advertisement

ಅಲಂಗಾರು ದೇವಸ್ಥಾನದ ಚಿಕ್ಕಮೇಳ ಪ್ರಾರಂಭ : ಗೆಜ್ಜೆ, ಜಾಗಟೆ, ಮದ್ದಳೆಯಿಂದ ಶಾಂತಿ , ನೆಮ್ಮದಿ

07:04 PM Jul 20, 2021 | Team Udayavani |

ಮೂಡುಬಿದಿರೆ : ಅಲಂಗಾರು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ಕೃಪಾಪೋಷಿತ `ಚಿಕ್ಕ ಮೇಳ ‘ವು ಯಕ್ಷಗಾನ ಕಲಾವಿದ, ಯಕ್ಷಗುರು ರಕ್ಷಿತ್ ಶೆಟ್ಟಿ ಅವರ ನೇತೃತ್ವದಲ್ಲಿ ಪ್ರಾರಂಭವಾಗಿದೆ. ದ.ಕ. ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷ ಸುದರ್ಶನ್ ಎಂ. ದೀಪ ಬೆಳಗಿಸಿ ನೂತನ ಚಿಕ್ಕಮೇಳದ ತಿರುಗಾಟಕ್ಕೆ ಚಾಲನೆ ನೀಡಿದರು. ದೇವಳದ ಆಡಳಿತ ಮೊಕ್ತೇಸರ ಈಶ್ವರ ಭಟ್ಟರು ಆಶೀರ್ವಚನವಿತ್ತರು. ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಮೂಡುಬಿದಿರೆಯ `ದಿಗಿಣ ದಿವಿಜ ನಾಟ್ಯ ತರಬೇತಿ ಕೇಂದ್ರ’ದ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ಲಾಡಿ ಉಪಸ್ಥಿತರಿದ್ದರು.

Advertisement

ಯಕ್ಷಗಾನ ಪೋಷಕ, ವಿಮರ್ಶಕ ಎಂ.ಶಾಂತರಾಮ ಕುಡ್ವ ಮಾತನಾಡಿ, `ಗೆಜ್ಜೆ, ಜಾಗಟೆ, ಮದ್ದಳೆ ಇವುಗಳ ನಾದ ಮನೆಯಲ್ಲಿ ಅನುರಣಿಸಿದರೆ , ದುಷ್ಟ ಶಕ್ತಿಗಳು , ಭೂತ ಪ್ರೇತಗಳ ಸಂಚಾರ , ಕೃತ್ರಿಮ ದೋಷಗಳು ತೊಲಗಿ ಮನೆಯಲ್ಲಿ ಶಾಂತಿ , ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಇದೆ’ ಎಂದರು.

ವಾರಾಂತ್ಯ ವಿಶೇಷ ಕಾರ್ಯಕ್ರಮ: ಕಲಾವಿದರಿಗೆ ಗೌರವ ವಾರದ ಆರುದಿನಗಳಲ್ಲಿ ಸಂ.ಗಂ.6ರಿಂದ 10ರವರೆಗೆ ಮನೆ ಮನೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುವ, ಆರು ಮಂದಿ ಇರುವ ಚಿಕ್ಕಮೇಳವು ರವಿವಾರ ಅಲಂಗಾರು ದೇವಸ್ಥಾನದಲ್ಲಿ ಎರಡು ತಾಸುಗಳ ಯಕ್ಷಗಾನ ಪ್ರದರ್ಶನವನ್ನು ಪೋಷಕರ ಪ್ರಾಯೋಜಕತ್ವದಲ್ಲಿ ನೀಡಲಿದ್ದು ಅಂದು ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ ಓರ್ವ ಕಲಾವಿದರನ್ನು ಗೌರವಿಸುವ ಉದ್ದೇಶ ಹೊಂದಿದೆ ಎಂದು ಪ್ರಕಟಿಸಲಾಯಿತು.

ಪ್ರಥಮ ಪ್ರದರ್ಶನದಲ್ಲಿ ಕಟೀಲು ಮೇಳದ ಕಲಾವಿದ ಅರಳ ಗಣೇಶ ಅವರನ್ನು ಅಭಿನಂದಿಸಿ , ಆಹಾರ ಧಾನ್ಯಗಳ ಕಿಟ್ ಹಾಗೂ ನಗದು ನೀಡಿ ಗೌರವಿಸಲಾಯಿತು .
ಕಲಾವಿದ ವಾದಿರಾಜ ಕಲ್ಲೂರಾಯ ನಿರೂಪಿಸಿದರು. ಕಟೀಲು ಮೇಳದ ಕಲಾವಿದ ಅರಳ ಗಣೇಶ ಅವರನ್ನು ಅಭಿನಂದಿಸಿ , ಆಹಾರ ಧಾನ್ಯಗಳ ಕಿಟ್ ಹಾಗೂ ನಗದು ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next