Advertisement
2 ಕೋಟಿ ಉದ್ಯೋಗ ನೀಡುವ ಭರವಸೆ ಏನಾಯಿತು?ಕೋಟೇಶ್ವರದ ಬಸ್ ನಿಲ್ದಾಣದ ಬಳಿ ಬುಧವಾರ ಸಂಜೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಬಹಿರಂಗ ಪ್ರಚಾರ ಸಭೆಯಲ್ಲಿ ಜಯಪ್ರಕಾಶ ಹೆಗ್ಡೆ ಮಾತನಾಡಿ, ಕೇಂದ್ರ ಸರಕಾರ ನೀಡಿದ ವಿವಿಧ ಆಶ್ವಾಸನೆಗಳಲ್ಲಿ ಎಲ್ಲರ ಖಾತೆಗೆ 15 ಲಕ್ಷ ರೂ. ಜಮಾ ಆಯಿತೇ, ವರ್ಷಕ್ಕೆ 2 ಕೋಟಿ ಜನರಿಗೆ ಉದ್ಯೋಗ ನೀಡುವ ಭರವಸೆ ಏನಾಯಿತು ಎಂದರು.
Related Articles
ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 25ಕ್ಕೂ ಹೆಚ್ಚು ಸ್ಥಾನವನ್ನು ಗಳಿಸುವುದು ಎಂದು ಭವಿಷ್ಯ ನುಡಿದರು.
Advertisement
ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಬಿಜೆಪಿಯಿಂದ ತನಗಾದ ಅನ್ಯಾಯದ ಬಗ್ಗೆ ಸಭೆಯಲ್ಲಿ ವಿವರಿಸಿದರಲ್ಲದೇ ಪೊಳ್ಳು ಭರವಸೆ ಮೂಲಕ ಮತದಾರರನ್ನು ವಂಚಿಸುವ ಅವರ ಗಿಮಿಕ್‌ಗೆ ಯಾರೂ ಬಲಿಯಾಗಬಾರ ದೆಂದರು. ಕಾಂಗ್ರೆಸ್ ಮುಖಂಡ ವಿಕಾಸ್ ಹೆಗ್ಡೆ, ದಿನೇಶ ಹೆಗ್ಡೆ ಮೊಳಹಳ್ಳಿ ಮಾತನಾಡಿದರು.
ಮಾಜಿ ಶಾಸಕ ಗೋಪಾಲ ಪೂಜಾರಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಯುವಕಾಂಗ್ರೆಸ್ ಅಧ್ಯಕ್ಷ ನಿಶ್ಚಿತಾರ್ಥ ಶೆಟ್ಟಿ, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೆಪಿಸಿಸಿ ಸದಸ್ಯ ನವೀನ್ ಚಂದ್ರ ಶೆಟ್ಟಿ, ಡಿಸಿಸಿ ಪದಾಧಿ ಕಾರಿಗಳಾದ ಸತೀಶ ಕಿಣಿ ಬೆಳ್ವೆ, ಸದಾನಂದ ಶೆಟ್ಟಿ ಕೆದೂರು, ಸುರೇಂದ್ರ ಶೆಟ್ಟಿ ಅಂಕದಕಟ್ಟೆ, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಅಶೋಕ ಪೂಜಾರಿ ಬೀಜಾಡಿ, ದೇವಾನಂದ ಶೆಟ್ಟಿ, ಮುಸ್ತಾಕ್ ಅಹಮ್ಮದ್, ಹೆರಿಯಣ್ಣ, ಪ್ರಕಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ವಿನೋದ ಕ್ರಾಸ್ತಾ ವಂದಿಸಿದರು.
10 ವರ್ಷಗಳಲ್ಲಿ ಕುಂದಾಪುರದಲ್ಲಿ ಬಿಜೆಪಿ ಏನು ಮಾಡಿದೆ: ಸುಧೀರ ಕುಮಾರ್ ಮರೋಳಿ ಪ್ರಶ್ನೆ
ಕೆಪಿಸಿಸಿ ವಕ್ತಾರ ಸುಧೀರ ಕುಮಾರ್ ಮರೋಳಿ ಮಾತನಾಡಿ, ಮಹಿಳೆಯರುಹಾಗೂ ಯುವಕರ ಪಾಲಿಗೆ ಆಶಾಕಿರಣ ವಾಗಿರುವ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಎಲ್ಲೂ ಭರವಸೆಯನ್ನು ಹುಸಿ ಮಾಡಿಲ್ಲ. 10 ವರ್ಷಗಳಲ್ಲಿ ಕುಂದಾಪುರದಲ್ಲಿ ಬಿಜೆಪಿ ಏನು ಮಾಡಿದೆ? ಯಾವ ಯೋಜನೆಯನ್ನೂ ಅನುಷ್ಠಾನಗೊಳಿಸಿದೆ ಎಂಬುದನ್ನು ಜನರೇ ಆಡಿಕೊಳ್ಳುತ್ತಿದ್ದಾರೆ. ಜಯ ಪ್ರಕಾಶ ಹೆಗ್ಡೆ ದಕ್ಷತೆ, ಕಾರ್ಯತತ್ಪರತೆ ರಾಷ್ಟ್ರಕ್ಕೆ ಮಾದರಿಯಾಗಿದೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬ ಮತದಾರರಿಗಿದೆ ಎಂದರು.