Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
Related Articles
Advertisement
ಹಡಪದ ಅಪ್ಪಣ್ಣ ತಮ್ಮ ವಚನಗಳ ಮೂಲಕ ಸಮಾಜದ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಅವರ ಒಂದು ವಚನದಲ್ಲಿ ವ್ಯಕ್ತಿಯ ವೇಷಭೂಷಣದಿಂದ ಅಳೆಯಬಾರದು. ಅವನ ಅಂತರಂಗವನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದರು. ಆದರೆ, ವ್ಯಕ್ತಿಯ ಅಂತರಂಗವನ್ನು ಅರ್ಥಮಾಡಿಕೊಳ್ಳದೆ ಕೇವಲ ವ್ಯಕ್ತಿಯ ವೇಷಭೂಷಣದಿಂದ ಅಳೆಯುವ ಮನಃಸ್ಥಿತಿ ನಮ್ಮಲ್ಲಿ ಇಂದು ಕೂಡ ಇದೆ. ಇಂತಹ ಮನಃಸ್ಥಿತಿ ನಮ್ಮಿಂದ ದೂರವಾದಾಗ ಮಾತ್ರ ವಚನಕಾರರ ಆಶಯಕ್ಕೆ ಅರ್ಥ ಬರುತ್ತದೆ ಎಂದರು.
ಕಾಯಕವೇ ಕೈಲಾಸ ಎಂಬ ಬಸವ ತತ್ವ ಪಾಲನೆ ಮತ್ತು ದಾಸೋಹದಿಂದ ವ್ಯಕ್ತಿಗೆ ಮುಕ್ತಿ, ಶರಣರಿಗೆ ಮೋಕ್ಷ ಎಂಬುದು ಹಡಪದ ಅಪ್ಪಣ್ಣ ಅವರ ಮುಖ್ಯ ಉದ್ದೇಶವಾಗಿತ್ತು. ಅವರ ವಚನಗಳ ಮೂಲಕ ಇದನ್ನು ಸಾರಿದರು. ಅವರ ಈ ಕಾರ್ಯಕ್ಕೆ ಪತ್ನಿ ಲಿಂಗಮ್ಮ ಅವರು ಬೆಂಬಲ ನೀಡಿದರು. ಸುಮ್ಮನೆ ಮಹನೀಯರ ಜಯಂತಿ ಆಚರಿಸುವುದರಿಂದ ಮಹಾತ್ಮರ ಜಯಂತಿಗೆ ಅರ್ಥ ಬರುವುದಿಲ್ಲ. ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡಾಗ ಜಯಂತಿಗಳ ಆಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಅಪರ ಜಿಲ್ಲಾಧಿಕಾರಿ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ್, ಬಿಎಸ್‌ಪಿ ಮುಖಂಡ ರಾಧಾಕೃಷ್ಣ, ರವೀಶ್ ಕ್ಯಾತನಬೀಡು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.