Advertisement

Chikkamagaluru: ಸೇತುವೆ ನಿರ್ಮಾಣಕ್ಕೆ 1.80 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಕೆ

01:49 AM Sep 28, 2024 | Team Udayavani |

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೋಣೆಗೋಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೌಲಭ್ಯ ಇಲ್ಲದೇ ಮೃತಪಟ್ಟ ಯುವಕನನ್ನು ಕಾಲು ದಾರಿ ಮೂಲಕ ಜೋಳಿಗೆಯಲ್ಲಿ ಹೊತ್ತೂಯ್ದ ಸುದ್ದಿ ಪ್ರಕಟವಾದ ಪರಿಣಾಮ ಬೆನ್ನಲ್ಲೇ ಎಚ್ಚೆತ್ತ ಗ್ರಾಮ ಪಂಚಾಯತ್‌ ಗ್ರಾಮದ ಸೇತುವೆ ಹಾಗೂ ರಸ್ತೆ ಕಾಂಕ್ರೀಟಿಕರಣಕ್ಕೆ 1.80 ಕೋಟಿ ರೂ.ಅಂದಾಜು ಪಟ್ಟಿ ತಯಾರಿಸಿ ಅನುಮೋದನೆಗಾಗಿ ಸಲ್ಲಿಸಿದೆ.

Advertisement

“ದಾರಿ ಇಲ್ಲದೇ ಯುವಕನ ಶವ ಜೋಳಿಗೆಯಲ್ಲಿ ಹೊತ್ತೂಯ್ದರು’ ಶೀರ್ಷಿಕೆಯಡಿ ಸೆ. 2ರಂದು “ಉದಯವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಪರಿಣಾಮ ವಾಸ್ತವಾಂಶ ಅರಿತು ಕೈಗೊಂಡ ಕ್ರಮಗಳ ಕುರಿತು ಅನುಪಾಲನಾ ವರದಿ ಸಲ್ಲಿಸುವಂತೆ ಗ್ರಾಮ ಪಂಚಾಯತ್‌ಗೆ ಸರಕಾರದಿಂದ ನಿರ್ದೇಶನ ನೀಡಲಾಗಿತ್ತು. ಆ ಬಳಿಕ ರಾಜ್ಯ ಮಾನವ ಹಕ್ಕು ಆಯೋಗದ ನ್ಯಾಯಾಂಗ ಸದಸ್ಯ ಎಸ್‌.ಕೆ.ವೆಂಟಿಗೋಡಿ ಅವರು ಗ್ರಾಮಕ್ಕೆ ಭೇಟಿ ನೀಡಿ ಮೂಲಸೌಕರ್ಯಗಳನ್ನು ಪರಿಶೀಲಿಸಿದ್ದರು.

ಗ್ರಾಮಕ್ಕೆ ಕಳೆದ ಸಾಲಿನಲ್ಲಿ ರಸ್ತೆ ನಿರ್ಮಾಣಕ್ಕೆ 40 ಲಕ್ಷ ಅನುದಾನ ಕಾಯ್ದಿರಿಸಿದ್ದು ಅನುದಾನ ಕೊರತೆಯಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಈಗ ರಸ್ತೆ, ಸೇತುವೆ ಕಾಮಗಾರಿಗೆ 1.80 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ ಮಂಜೂರಾತಿ ಕೋರಿ ಸಲ್ಲಿಕೆ ಮಾಡಲಾಗಿದೆ ಎಂದು ಸಂಸೆ ಗ್ರಾಮ ಪಂಚಾಯತ್‌ ಪಿಡಿಒ ಸಿಎಂ ಕಚೇರಿಗೆ ಸಲ್ಲಿಸಿರುವ ಅನುಪಾಲನಾ ವರದಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next