ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮಳೆ ನಿಲ್ಲಿಸುವಂತೆ ಮಳೆ ದೇವರಿಗೆ ಸ್ಥಳಿಯರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ಮಳೆದೇವರಿಗೆ ನೆಮ್ಮಾರ್ ಸೀಮೆಯವರಿಂದ ಹಾಗೂ ಸ್ಥಳೀಯರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಿಗ್ಗಾದ ಋಷ್ಯಶೃಂಗೇಶ್ವರ ಮಳೆ ದೇವರು ಎಂದೇ ಖ್ಯಾತರಾದ ದೇವರು. ಮಳೆ ಬೇಕು ಅಂದಾಗ ಸುರಿಸೋ, ಬೇಡವೆಂದಾಗ ನಿಲ್ಲಿಸೋ ಮಳೆದೇವರು ಎಂಬುದು ಸ್ಥಳೀಯರ ನಂಬಿಕೆ.
ಶೃಂಗೇರಿಯಲ್ಲಿ ಈ ವರ್ಷ ವಾಡಿಕೆಗಿಂತ ಡಬಲ್ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾಫಿ, ಮೆಣಸು, ಅಡಿಕೆಗೆ ಕೊಳೆ ರೋಗದ ಭೀತಿ ಆವರಿಸಿದೆ. ಅತಿವೃಷ್ಟಿ ನಿವಾರಿಸೋ ಎಂದು ಸ್ಥಳಿಯರು ಋಷ್ಯಶೃಂಗನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅತಿವೃಷ್ಟಿ-ಅನಾವೃಷ್ಟಿ ವೇಳೆ ಈ ದೇವನಿಗೆ ಸರ್ಕಾರವೇ ಪೂಜೆ ಸಲ್ಲಿಸಿತ್ತು.