ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಗೆ ಭೇಟಿ ನೀಡಿದ್ದಉಸ್ತುವಾರಿ ಸಚಿವ ಅಂಗಾರ, ಶಾಸಕ ಎಂ.ಪಿ ಕುಮಾರಸ್ವಾಮಿಗೆ ಸಂತ್ರಸ್ತರಿಂದ ತರಾಟೆಗೆ ತೆಗೆದುಕೊಂಡಿದ್ದಾರೆ.
2019ರಲ್ಲಿ ಮಹಾಮಳೆಯಿಂದ ಮನೆ, ಆಸ್ತಿಯನ್ನು ಕಳೆದುಕೊಂಡಿದ್ದ ಸಂತ್ರಸ್ತರಿಗೆ ಮೂರು ವರ್ಷವಾದರೂ ಮನೆಕಟ್ಟಿ ಕೊಟ್ಟಿಲ್ಲ. 5 ಮನೆಗಳು, 40 ಎಕರೆ ಜಮೀನು ಸಂಪೂರ್ಣ ಕೊಚ್ಚಿ ಹೋಗಿದ್ದವು. ಈವರೆಗೆ ಯಾರೂ ಇತ್ತ ಕಡೆ ಕಣ್ಣು ಹಾಯಿಸಿಯೂ ನೋಡಿಲ್ಲ ಎಂದು ಸಚವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ : ಆರ್.ಟಿ. ಪಿ.ಸಿ. ಆರ್ ಲ್ಯಾಬ್ ಲೋಕಾರ್ಪಣೆ ಮಾಡಿದ ಸಿ.ಎನ್ ಅಶ್ವತ್ಥನಾರಾಯಣ
ಆಗುದಿಲ್ಲವಾದಲ್ಲಿ ಹೇಳಿ, ಹೇಘಾದರೂ ಭಿಕ್ಷೆ ಬೇಡಿ ಬದುಕುತ್ತೇವೆ. ಇಲ್ಲಿಯವರೆಗೆ ಸಂತ್ರಸ್ತರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಿಲ್ಲ ಎಂದು ಸಚಿವ ಅಂಗಾರ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
2019ರಲ್ಲಿ ಪ್ರವಾಹದ ಬಳಿಕ ಗ್ರಾಮಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದ್ದನ್ನು ಹೊರತಾಗಿ ಯಾರೂ ಈ ಬಗ್ಗೆ ಏನೂ ವ್ಯವಸ್ಥೆ ಮಾಡಿಕೊಟ್ಟಿಲ್ಲ ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ನಿಯಮ ಪಾಲನೆ ಮಾಡದ ಪೆಟ್ ಶಾಪ್ ಗಳಿಗೆ ಬೀಗ : ಸಚಿವ ಪ್ರಭು ಚವ್ಹಾಣ್