ಚಿಕ್ಕಮಗಳೂರು: ಚಿಕ್ಕಮಗಳೂರು ನಗರಸಭೆಯಲ್ಲಿ ಗದ್ದುಗೆಗಾಗಿ ಗುದ್ದಾಟ ಗೊರಗಿದೆ, ಅವಧಿ ಮುಗಿದರೂ ರಾಜೀನಾಮೆ ನೀಡದೆ ಸತಾಯಿಸುತ್ತಿರೋ ಅಧ್ಯಕ್ಷ ವೇಣುಗೋಪಾಲ್ ವಿರುದ್ಧ ತಮ್ಮದೇ ಪಕ್ಷದ ಸದಸ್ಯರು ಗರಂ ಆಗಿರುವ ಘಟನೆ ನಡೆದಿದೆ.
ಅಧ್ಯಕ್ಷರ ಅವಧಿ ಮುಗಿದಿದ್ದರೂ ಇನ್ನೂ ರಾಜೀನಾಮೆ ನೀಡದೆ ಸತಾಯಿಸುತ್ತಿದ್ದ ವೇಣುಗೋಪಾಲ್ ವಿರುದ್ಧ ಕೆಂಡಾಮಂಡಲರಾದ ಬಿಜೆಪಿ ಸದಸ್ಯರು ನಗರ ಸಭೆಗೆ ತೆರಳಿ ಅಧ್ಯಕ್ಷರು ಕೂರುವ ಸೋಫಾ ಚೇರ್ ತೆಗೆದು ಆ ಜಾಗಕ್ಕೆ ಪ್ಲಾಸ್ಟಿಕ್ ಕುರ್ಚಿ ಇಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೇಣುಗೋಪಾಲ್ ಈ ಹಿಂದೆ ಎರಡು ಬಾರಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳಿಕ ಹಿಂಪಡೆದಿದ್ದರು, ಆದರೆ ಇದೀಗ ಅವರ ಅಧ್ಯಕ್ಷ ಸ್ಥಾನದ ಅವಧಿ ಮುಗಿದರೂ ರಾಜೀನಾಮೆ ನೀಡಲು ಮುಂದಾಗದ ಹಿನ್ನೆಲೆಯಲ್ಲಿ ಸ್ವತಃ ಬಿಜೆಪಿ ಸದಸ್ಯರೇ ಈ ನಿರ್ಧಾರಕ್ಕೆ ಬಂದಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು ನಗರಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಚಿಕ್ಕಮಗಳೂರು ನಗರಸಭೆಯಲ್ಲಿ ಎರಡು ತಿಂಗಳಿಂದ ಅಧ್ಯಕ್ಷಗಿರಿಯ ದೊಂಬರಾಟ ಮುಂದುವರೆದಿದ್ದು ಇನ್ನು ಅಂತ್ಯ ಕಾಣಲಿಲ್ಲ.
ಇದನ್ನೂ ಓದಿ: Telangana: ಲೈವ್ ಕಾರ್ಯಕ್ರಮದಲ್ಲೆ ಬಿಜೆಪಿ ನಾಯಕನ ಮೇಲೆ ಹಲ್ಲೆ ನಡೆಸಿದ ಬಿಆರ್‌ಎಸ್ ಶಾಸಕ