Advertisement
ಜಿಲ್ಲಾದ್ಯಂತ ಉತ್ತಮ ಮತದಾನವಾಗಿದೆ. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿನ ಮತದಾನವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.74.56ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನದಲ್ಲಿಏರಿಕೆಯಾಗಿದ್ದು ಶೇ.75.26 ರಷ್ಟು ಮತದಾನವಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ 13,86,516 ಮತದಾರರಲ್ಲಿ 10,32,871 ಜನ ತಮ್ಮ ಹಕ್ಕು ಚಲಾಯಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟಾರೆ 15,13,116 ಮತದಾರರ ಪೈಕಿ
11,48,277 ಜನ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಮತದಾನದ ಪ್ರಮಾಣವನ್ನು ಗಮನಿಸಿದರೆ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ.78.86ರಷ್ಟು ಮತದಾನವಾಗಿದ್ದರೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಶೇ.69.42 ರಷ್ಟು
ಮತದಾನವಾಗಿದೆ. ಕ್ಷೇತ್ರವಾರು ಮತದಾನದ ವಿವರ: ಕುಂದಾಪುರ ಒಟ್ಟು ಮತದಾರರು 2,03,279, ಪುರುಷರು 97,692, ಮಹಿಳೆಯರು 1,05,585, ಚಲಾವಣೆಯಾದ ಮತ : 1,57,761, ಪುರುಷರು 74,304, ಮಹಿಳೆಯರು 83,456, ಶೇ.77.61.
ಉಡುಪಿ: ಒಟ್ಟು ಮತದಾರರು 2,09,504, ಪುರುಷರು 1,01,386, ಮಹಿಳೆಯರು 1,08,116, ಚಲಾವಣೆಯಾದ ಮತ: 1,65,033, ಪುರುಷರು 79,394, ಮಹಿಳೆಯರು 85,639, ಶೇ.78.77. ಕಾಪು: ಒಟ್ಟು ಮತದಾರರು 1,84,101, ಪುರುಷರು 87,704, ಮಹಿಳೆಯರು 96,384, ಚಲಾವಣೆಯಾದ ಮತ: 1,43,170, ಪುರುಷರು 67,257,
ಮಹಿಳೆಯರು 75,913, ಶೇ.77.77. ಕಾರ್ಕಳ: ಒಟ್ಟು ಮತದಾರರು 1,83,528, ಪುರುಷರು 87,915, ಮಹಿಳೆಯರು 95,616, ಚಲಾವಣೆಯಾದ ಮತ: 1,43,949,ಪುರುಷರು 68,437, ಮಹಿಳೆಯರು 75,512, ಶೇ.78.43. ಶೃಂಗೇರಿ: ಒಟ್ಟು ಮತದಾರರು 1,65,578, ಪುರುಷರು 81,685, ಮಹಿಳೆಯರು 83,889, ಚಲಾವಣೆಯಾದ ಮತ : 1,30,577, ಪುರುಷರು 65,576, ಮಹಿಳೆಯರು 65,001, ಶೇ.78.86. ಮೂಡಿಗೆರೆ: ಒಟ್ಟು ಮತದಾರರು 1,68,579, ಪುರುಷರು 83,054, ಮಹಿಳೆಯರು 85,711, ಚಲಾವಣೆಯಾದ ಮತ: 1,26,294, ಪುರುಷರು
63,678, ಮಹಿಳೆಯರು 62,615, ಶೇ.74.92. ಚಿಕ್ಕಮಗಳೂರು: ಒಟ್ಟು ಮತದಾರರು 2,14,958, ಪುರುಷರು 1,06,964, ಮಹಿಳೆಯರು 1,07,971, ಚಲಾವಣೆಯಾದ ಮತ: 1,49,230, ಪುರುಷರು 75,849, ಮಹಿಳೆಯರು 73,378, ಶೇ.69.42.
ತರೀಕೆರೆ: ಒಟ್ಟು ಮತದಾರರು 1,83,589, ಪುರುಷರು 92,183, ಮಹಿಳೆಯರು 91,406, ಚಲಾವಣೆಯಾದ ಮತ: 1,32,263, ಪುರುಷರು 68,669, ಮಹಿಳೆಯರು 63,594, ಶೇ.72.04.
ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾರರ ಸಂಖ್ಯೆಯೂ ಹೆಚ್ಚಳವಾಗಿದ್ದು, ಮತದಾನದ ಶೇಕಡಾವಾರು ಪ್ರಮಾಣವೂ ಸ್ವಲ್ಪ ಏರಿಕೆಯಾಗಿದೆ. ಪ್ರತಿ ಚುನಾವಣೆಯಂತೆ ಈ
ಚುನಾವಣೆಯಲ್ಲಿಯೂ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಚುನಾವಣಾ ಆಯೋಗವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೂ ಸಹ ಮತದಾನದ ಪ್ರಮಾಣದಲ್ಲಿ ಹೆಚ್ಚಳವಾಗಲು ಕಾರಣವಾಗಿದೆ.
Related Articles
Advertisement
ಈ ಬಾರಿಯ ಚುನಾವಣೆಯಲ್ಲಿ ಮತದಾನದ ಪ್ರಮಾಣದಲ್ಲಿ ಸ್ವಲ್ಪಮಟ್ಟಿನ ಹೆಚ್ಚಳವಾಗಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪೂರಕವಾಗಿದೆ. ಮೈತ್ರಿ ಪಕ್ಷಗಳ ಎಲ್ಲ ಮುಖಂಡರು, ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಿದ್ದೇವೆ. ಬಿಜೆಪಿ ಅಭ್ಯರ್ಥಿಯ ವಿರುದ್ಧವಾಗಿ ಆ ಪಕ್ಷದವರೇ ಗೋ ಬ್ಯಾಕ್ ಶೋಭಾ ಅಭಿಯಾನ ನಡೆಸಿದ್ದು, ನಮ್ಮ ಗೆಲುವಿಗೆ ಸಹಕಾರಿಯಾಗಿದೆ.
ಹಿಂದಿನ ಸಿದ್ದರಾಮಯ್ಯ ಸರ್ಕಾರದ ವಿವಿಧ ಭಾಗ್ಯಗಳ ಯೋಜನೆಗಳು, ಈಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಅವರು ರೈತರ ಸಾಲ ಮನ್ನಾ ಮಾಡಿದ್ದು, ಸೇರಿದಂತೆ ಹಲವು ಯೋಜನೆಗಳು, ಪ್ರಮೋದ್ ಮಧ್ವರಾಜ್ ಅವರು ಶಾಸಕರು, ಸಚಿವರಾಗಿ ಮಾಡಿರುವ ಉತ್ತಮ ಕೆಲಸಗಳು ನಮ್ಮ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿದೆ.
ರಂಜನ್ ಅಜಿತ್ ಕುಮಾರ್,
ಜೆಡಿಎಸ್ ಜಿಲ್ಲಾಧ್ಯಕ್ಷರು. ಕಳೆದ ಲೋಕಸಭಾ ಚುನಾವಣೆಗಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿ ಶೋಭಾ ಕರಂದ್ಲಾಜೆ
ಗೆಲ್ಲಲಿದ್ದಾರೆ. ಸಂಸದರು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು.
ದೇಶ ಹಾಗೂ ದೇಶದ ಭದ್ರತೆಯ ದೃಷ್ಟಿಯಿಂದ ಮೋದಿ ಅವರೇ ಅವಶ್ಯಕ ಎಂಬುದನ್ನು ಜನತೆ ಮನಗಂಡಿದ್ದಾರೆ. ಅದರೊಟ್ಟಿಗೆ ವಿಪಕ್ಷಗಳಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುದೇ ತಿಳಿದಿಲ್ಲ.
ನೆಗಟೀವ್ ವಿಚಾರಗಳಿಗಿಂತಲೂ ಪಾಸಿಟೀವ್ ವಿಚಾರಗಳ ಆಧಾರದಲ್ಲಿಯೇ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈ ಬಾರಿಯ ಚುನಾವಣೆ ಏಕಪಕ್ಷೀಯವಾಗಿ ನಡೆದಿದೆ. ಕಳೆದ ಬಾರಿಗಿಂತ ಅತೀ ಹೆಚ್ಚು ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿಯ ಗೆಲುವು ನಿಶ್ಚಿತ.
ಡಿ.ಎನ್.ಜೀವರಾಜ್,
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಕೆ.ಲಕ್ಷ್ಮೀಪ್ರಸಾದ್