Advertisement

Chikkamagaluru; ಹಿರಿಯರಿಗೆ- ಸ್ಥಾನಕ್ಕೆ ಗೌರವ ನೀಡಲೇಬೇಕು: ಸಿ.ಟಿ ರವಿ

10:58 AM Jan 16, 2024 | Team Udayavani |

ಚಿಕ್ಕಮಗಳೂರು: ಹಿರಿಯರು ಮತ್ತು ಸ್ಥಾನಕ್ಕೆ ಯಾವ ಗೌರವ ಕೊಡಬೇಕೋ ಆ ಗೌರವವನ್ನು ಕೊಡಲೇಬೇಕು. ಅನಂತ್ ಕುಮಾರ್ ಹೆಗಡೆ ಕಾರ್ಯಶೈಲಿ ಭಿನ್ನವಿದೆ ಹಾಗೆಂದ ಮಾತ್ರಕ್ಕೆ ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡಬಾರದು ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.

Advertisement

ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂತಹ ಹೇಳಿಕೆಗಳನ್ನು ನಾವು ಸಮರ್ಥಿಸುವುದಿಲ್ಲ. ರಾಮ ಎಲ್ಲರನ್ನೂ ಜೋಡಿಸಿಕೊಂಡು ಹೋಗುವವನು. ಅನಂತ್ ಕುಮಾರ್ ಹೆಗಡೆ ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಹೇಳಿರುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.

ಅನಂತ್ ಕುಮಾರ್ ಹೆಗಡೆ ಅವರ ಭಾವನೆ ಇರಬಹುದು ನಿಜ, 42 ಸಾವಿರ ದೇವಾಲಯಗಳನ್ನು ಘಜನಿ, ಘೋರಿ, ಖಿಲ್ಜಿ, ಔರಂಗಜೇಜ್ ಮೊಘಲ್ ಕಾಲಘಟ್ಟದಲ್ಲಿ, ದಕ್ಷಿಣದಲ್ಲಿ ಮಲ್ಲಿಖಾಫರ್ ದಾಳಿ ಸಂದರ್ಭದಲ್ಲಿ, ಆದಿಲ್ ಷಾಹಿ ಕಾಲಘಟ್ಟದಲ್ಲಿ ನಿಜಾಮರು, ಟಿಪ್ಪು ಸುಲ್ತಾನ್ ಆಳ್ವಿಕೆಯ ಸಂದರ್ಭದಲ್ಲಿ ದೇವಾಲಯಗಳನ್ನು ಧ್ವಂಸ ಮಾಡಿ ಮಸೀದಿ ನಿರ್ಮಿಸಿರುವುದು ನಿಜ, ವಾಸ್ತವ. ಭಾರತೀಯ ಮುಸ್ಲಿಮರು ದಾಳಿಕೋರರ ಜತೆ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದಿಲ್ಲ. ಭಾರತೀಯತೆ ಸನಾತನ ಪರಂಪರೆಯ ಮೇಲೆ ವಿಶ್ವಾಸವಿಟ್ಟು ಇಲ್ಲಿ ಉಳಿದು ಕೊಂಡಿದ್ದಾರೆ ಎನ್ನುವ ವಿಶ್ವಾಸ ನನಗಿದೆ. ಅವರಿಗೂ ಮನ ಪರಿವರ್ತನೆ ದಿನ ಬರಬಹುದು. ಆಕ್ರಮಣ ಮಾಡಿ ಇನ್ನೊಬ್ಬರ ಮನಸ್ಸಿಗೆ ಘಾಸಿ ಮಾಡಿ ಕಟ್ಟಿದ ಮಂದಿರದಲ್ಲಿ ನಮಾಜ್ ಮಾಡಿದರೆ ಅದು ಹರಮ್ ಆಗುತ್ತದೆ ಎಂದು ಅನಿಸಬಹುದು. ಅಂದು ಅವರು ಉದಾರತೆಯನ್ನು ಪ್ರದರ್ಶನ ಮಾಡಬಹುದು ಎಂದರು.

ಇಲ್ಲಿ ಘಜನಿ, ಘೋರಿ, ಮೊಘಲ್ ಜತೆ ಗುರುತಿಸಿಕೊಳ್ಳುವ ಮಾನಸಿಕತೆ ಅಪಾಯಕಾರಿ ಅದನ್ನು ನಾವು ಸಹಿಸಿಕೊಳ್ಳುವುದಿಲ್ಲ. ಅದರ ವಿರುದ್ದ ನಮ್ಮ ಭಾವನೆಗಳಿವೆ. ಎಲ್ಲಾ ಮುಸ್ಲಿಮರನ್ನು ಒಂದೇ ತಕಡಿಯಲ್ಲಿಟ್ಟು ತೂಗುವುದಿಲ್ಲ. ಮುಸ್ಲಿಮರು ಘಜನಿ, ಘೋರಿ, ಬಾಬರ್ ಮಾನಸಿಕತೆಯಿಂದ ಹೊರಗೆ ಬರಬೇಕು. ಅವರಿಗೆ ಶಿಶುನಾಳ ಶರೀಪರು, ಎಪಿಜೆ ಅಬ್ದುಲ್ ಕಲಾಂ ಅಂತವರು ಆದರ್ಶ ಆಗಬೇಕು. ಆಗ ನಮ್ಮಲ್ಲಿ ಸಹೋದರತ್ವ ಭಾವನೆ ಗಟ್ಟಿಯಾಗುತ್ತದೆ ಎಂದರು.

ಯಾರಿಗೆ ಆಗಲಿ ಏಕವಚನದಲ್ಲಿ ಮಾತನಾಡುವುದನ್ನು, ಅಗೌರವ ತರುವುದನ್ನು ಒಪ್ಪಿಕೊಳ್ಳುವುದಿಲ್ಲ. ಅನಂತ್ ಕುಮಾರ್ ಹೆಗಡೆ ಅವರು ಹೇಳಿದರೆಂದು ಅವರನ್ನು ಟೀಕೆ ಮಾಡುವ ಭರದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು ನಾಯಿಗೆ ಹೋಲಿಸಿರುವುದು ಅದು ಕೂಡ ತಪ್ಪು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ಅವರನ್ನು ಏಕವಚನದಲ್ಲಿ ಮಾತನಾಡುವುದು, ಸರ್ಜಿಕಲ್ ಸ್ಟ್ರೈಕ್ ಹೀಯಾಳಿಸಿದ್ದಾರೆ ಅದು ಕೂಡ ತಪ್ಪೇ. ಹಿರಿಯರಾಗಿ ಗೌರವ ನೀಡಬೇಕು ಆಗ ಉಳಿದವರಿಗೆ ಮಾದರಿಯಾಗುತ್ತದೆ ಎಂದರು.

Advertisement

ಇದೇ ವೇಳೆ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ದೇವಾಲಯಗಳ ಸ್ವಚ್ಛತ ಕಾರ್ಯ ನಡೆಸುತ್ತಿದ್ದು ಮಂಗಳವಾರ ಹಿರೇಮಗಳೂರು ಶ್ರೀ ಕೋದಂಡ ರಾಮಚಂದ್ರ ಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡರು. ಪ್ರಧಾನಿಯವರ ಆಶಯದಂತೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next