Advertisement

ಜಿಲ್ಲೆಯಲ್ಲಿವೆ 48 ಅಪಘಾತ ಸಂಭಾವ್ಯ ಸ್ಥಳ

03:08 PM May 12, 2019 | Naveen |

ಚಿಕ್ಕಮಗಳೂರು: ಜಿಲ್ಲೆಯಲ್ಲಿ 48 ಅಪಘಾತ ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಪೈಕಿ 15 ನಗರ ವ್ಯಾಪ್ತಿಯಲ್ಲಿವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ತಿಳಿಸಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ರಸ್ತೆಯೊಂದರ 500 ಮೀಟರ್‌ ವ್ಯಾಪ್ತಿಯಲ್ಲಿ ಐದು ಅಪಘಾತ ಅಥವಾ ತೀವ್ರ ಸ್ವರೂಪದ ಗಾಯಗಳಿಗೆ ಎಡೆ ಮಾಡಿದ 10 ಅಪಘಾತ ಪ್ರಕರಣ ಘಟಿಸಿದ್ದ ಜಾಗವನ್ನು ಅಪಘಾತ ಸಂಭಾವ್ಯ ಸ್ಥಳ ಎಂದು ಗುರುತಿಸಲಾಗಿದೆ ಎಂದರು.

ಪೊಲೀಸ್‌ ಇಲಾಖೆಯೊಂದಿಗೆ ಪ್ರಾದೇಶಿಕ ಸಾರಿಗೆ ಇಲಾಖೆ, ಲೊಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿಯವರು ಸೇರಿ ಒಟ್ಟಾಗಿ ಸ್ಥಳಗಳನ್ನು ಪರಿಶೀಲಿಸಲಾಗಿದೆ. ಈ ಸ್ಥಳಗಳಲ್ಲಿ ಆಗಬೇಕಿರುವ ಕೆಲಸಗಳ ಕುರಿತು ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಮೇ 17ರಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಲಿದ್ದು, ಸದರಿ ಸಭೆಯಲ್ಲಿ ಅಂದಾಜು ಪಟ್ಟಿಗೆ ಅನುಮೋದನೆ ಪಡೆದು ಪ್ರಸ್ತಾವನೆಯನ್ನು ರಾಜ್ಯ ರಸ್ತೆ ಸುರಕ್ಷತಾ ಸಮಿತಿಗೆ ಕಳುಹಿಸಿಕೊಡಲಾಗುವುದು. ಅಲ್ಲಿ ಅನುಮೋದನೆ ದೊರೆತು ಅನುದಾನ ಬಿಡುಗಡೆಯಾದ 3 ತಿಂಗಳೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.

ಅಪಘಾತ ಸಂಭಾವ್ಯ ಸ್ಥಳಗಳ ಸಮೀಕ್ಷೆ ಮಾಡಿದ್ದೇವೆ. ಸೂಚನಾ ಫಲಕಗಳು, ಎಚ್ಚರಿಕೆ ಫಲಕಗಳು, ಪ್ರತಿಫಲನ (ಬ್ಲಿಂಕರ್ಸ್‌), ಕ್ಯಾಟ್ ಐಸ್‌ ಮೊದಲಾದವನ್ನು ಅಳವಡಿಸಲು ಅಗತ್ಯ ಇರುವ ಕಡೆಗಳಲ್ಲಿ ರಸ್ತೆ ವಿಸ್ತರಣೆ ಮಾಡುವುದಕ್ಕೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು. ನಗರದ ಹೌಸಿಂಗ್‌ ಬೋರ್ಡ್‌ ಎಸ್‌ಬಿಐ-ಹೋಲಿಕ್ರಾಸ್‌ ಆಸ್ಪತ್ರೆ, ಐಡಿಎಸ್‌ಜಿ ಕಾಲೇಜು-ಎಐಟಿ ವೃತ್ತ, ಎಪಿಎಂಸಿ ಯಾರ್ಡ್‌-ಸೇಂಟ್ ಜೋಸೆಫ್‌ ಶಾಲೆ, ದಂಟರಕ್ಕಿ ಕೆರೆ ಏರಿ, ದಂಟರಮಕ್ಕಿ ಕೆರೆ ಕ್ರಾಸ್‌-ಕೃಷಿ ಇಲಾಖೆ ಕಚೇರಿ, ನಾಗಲಕ್ಷ್ಮಿ ಟಾಕೀಸ್‌-ಶಾಮನೂರು ಪೆಟ್ರೋಲ್ ಬಂಕ್‌, ಮಥಾಯ್ಸ ಟವರ್‌-ತೊಗರಿಹಂಕಲ್ ವೃತ್ತ, ಬೋಳರಾಮೇಶ್ವರ ದೇಗುಲ- ಅನ್ನಪೂರ್ಣ ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಡಿಪೊ- ಕಾಫಿ ಡೇ ಕೆಫೆ, ಬೇಲೂರು ರಸ್ತೆ ಸರ್ಕಾರಿ ಪಿಯು ಕಾಲೇಜು-ಸ್ಪೆನ್ಸರ್‌ ರಸ್ತೆ ಕ್ರಾಸ್‌, ಬೇಲೂರು ರಸ್ತೆ ವೈಷ್ಣವಿ ಹೋಂಡ ಮಳಿಗೆ- ಕೋಟೆ ಕೆರೆ ಕ್ರಾಸ್‌, ಬೇಲೂರು ರಸ್ತೆ ಆಂಜನೇಯ ಸರ್ವಿಸ್‌ಸ್ಟೇಷನ್‌-ರೈಲುನಿಲ್ದಾಣ, ಬೇಲೂರು ರಸ್ತೆ ಪೈ ಕಲ್ಯಾಣ ಮಂಟಪ- ಹಿರೇಮಗಳೂರು ಸ್ಥಳಗಳನ್ನು ಸಂಭಾವ್ಯ ಅಪಘಾತ ವಲಯಗಳೆಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಇದರೊಂದಿಗೆ ತರೀಕೆರೆ ರಸ್ತೆಯ ಹಾಲೆನಹಳ್ಳಿ-ಮೌಂಟೆನ್‌ ವ್ಯೂ ಶಾಲೆ, ತರೀಕೆರೆ ರಸ್ತೆಯ ಗಾಲ್ಫ್ ಕ್ಲಬ್‌ ಕ್ರಾಸ್‌-ಅಲ್ಲಂಪುರ, ಲಕ್ಷ್ಮೀಪುರ ಕ್ರಾಸ್‌ ಬಳಿ (ಕಡೂರು- ಚಿಕ್ಕಮಗಳೂರು ಮುಖ್ಯರಸ್ತೆ), ಮಾಗಡಿ ಕೆರೆ ಬಳಿ (ಬೇಲೂರು-ಚಿಕ್ಕಮಗಳೂರು ಮುಖ್ಯರಸ್ತೆ), ಶೃಂಗೇರಿಯ ಮಠದ ಬಳಿ, ಕುರುಬಗೆರೆ ವೃತ್ತ ಶೃಂಗೇರಿ ಪಟ್ಟಣ ರಸ್ತೆ, ತಾಲ್ಲೂಕು ಕಚೇರಿ-ಡಿಎಸ್ಪಿ ಕಚೇರಿ ತರೀಕೆರೆ, ಎಪಿಎಂಸಿ ಯಾರ್ಡ್‌-ಭಾರತ್‌ ಟಾಕೀಸ್‌, ತರೀಕೆರೆ, ಅಲಂಕಾರ್‌ ಹೋಟೆಲ್-ಭುವನ್‌ ಹೋಟೆಲ್ ತರೀಕೆರೆ, ವಿಜ್ಞಾನ್‌ ಇಂಡಸ್ಟ್ರೀಸ್‌ ಫ್ಯಾಕ್ಟರಿ- ಹಳಿಯೂರು ಗೇಟ್, ತರೀಕೆರೆ, ಗೇರಮರಡಿ ಗೇಟ್- ಅಜ್ಜಂಪುರ ಕ್ರಾಸ್‌, ತರೀಕೆರೆ, ಎಂ.ಸಿ.ಹಳ್ಳಿ ತರೀಕೆರೆ, ಅಜ್ಜಂಪುರ ಎಪಿಎಂಸಿ-ಎಂ.ಜಿ ವೃತ್ತ ಅಜ್ಜಂಪುರ, ಕಾಟಿಗನೆರೆ ಗೇಟ್, ಅಜ್ಜಂಪುರ, ತಮ್ಮಟದಹಳ್ಳಿ ಗೇಟ್, ಅಜ್ಜಂಪುರ, ತಮ್ಮಟದಹಳ್ಳಿ ಗೇಟ್ ಬೀರೂರು, ಸಿದ್ಧರಾಮೇಶ್ವರ ದೇಗುಲ- ಶಿವಪುರ ಗೇಟ್, ಬೀರೂರು, ಕುಡ್ಲೂರು ಗೇಟ್- ಪುಂಡನಹಳ್ಳಿ ಕ್ರಾಸ್‌, ಬೀರೂರು, ರೈಲ್ವೇ ಗೇಟ್ 2-ಜೋಡಿತಿಮ್ಮಾಪುರ, ಬೀರೂರು, ರೈಲ್ವೆ ಗೇಟ್- ಗಾಳಿಹಳ್ಳಿ, ಬೀರೂರು, ಕೋಡಿಹಳ್ಳಿ ಕ್ರಾಸ್‌-ಬೀರೂರಿನ ಎಂ.ಜಿ. ವೃತ್ತ, ಬೀರೂರು, ಬ್ರೈಟ್ ಫೂಚರ್‌ ಶಾಲೆ- ಹಾಲಿನ ಡೇರಿ ಬೀರೂರು, ಕೆಎಲ್ವಿ ವೃತ್ತ -ಚೆಕ್‌ಪೋಸ್ಟ್‌ ಕಡೂರು, ಅನ್ನಪೂರ್ಣ ಲಾಡ್ಜ್- ಮಸಾಲ ಡಾಬಾ ಕಡೂರು, ತಂಗಲಿ ಕ್ರಾಸ್‌- ಪ್ರಜ್ಞಾ ಶಾಲೆ ಕಡೂರು, ಗೆದ್ಲೆಹಳ್ಳಿ ಕ್ರಾಸ್‌-ಸ್ನಾತಕೋತ್ತರ ಕೇಂದ್ರ ಕಡೂರು, ಮತ್ತಿಘಟ್ಟ, ಕಡೂರು, ಕುಪ್ಪಾಳು, ಕಡೂರು , ಮೊರಾರ್ಜಿ ಶಾಲೆ-ಬಾಬಾ ಎಸ್ಟೇಟ್ ಕಡೂರು, ತುರುವನಹಳ್ಳಿ ಕ್ರಾಸ್‌-ವಿಜಯಲಕ್ಷ್ಮಿ ಟಾಕೀಸ್‌ ಕಡೂರು, ಸೀಗೆಹಡು- ಮಲ್ಲಿದೇವಿಹಳ್ಳಿ ಕಡೂರು, ಕೆಳಸೇತುವೆ ರಸ್ತೆ ಕಡೂರು, ಕನಕ ವೃತ್ತ-ಚಿಕ್ಕಪಟ್ಟಣಗೆರೆ ಗೇಟ್ ಕಡೂರು, ಕಂಸಾಗರ ಗೇಟ್-ಸರಸ್ವತಿಪುರ ಕಡೂರು, ಕುಶಾಲ ಲ್ಯಾಂಡ್‌- ಕಲ್ಮರುಡೇಶ್ವರ ಆರ್ಚ್‌ ಸಖರಾಯಪಟ್ಟಣ, ಹೊಸೂರು-ಆಂಜನೇಯ ದೇಗುಲ ಸಖರಾಯಪಟ್ಟಣ ಇವುಗಳನ್ನು ಸಹ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದರು.

Advertisement

ಸಿಗ್ನಲ್ ಲೈಟ್: ನಗರದಲ್ಲಿ ಮತ್ತೆ ಕೆಲವು ಕಡೆಗಳಲ್ಲಿ ಹೊಸದಾಗಿ ಸಿಗ್ನಲ್ ಲೈಟ್ ಅಳವಡಿಸಲು ಯೋಚಿಸಲಾಗಿದೆ. ನಗರದ ಎಐಟಿ ವೃತ್ತ, ಆಜಾದ್‌ ಪಾರ್ಕ್‌ ವೃತ್ತಗಳಲ್ಲಿಯೂ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಈ ಪ್ರದೇಶಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸಲಾಗುವುದು. ಈಗಾಗಲೇ ಇದಕ್ಕೆ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು. ನಗರದ ಕೆಲವು ವೃತ್ತಗಳಲ್ಲಿ ವಾಹನ ನಿಲುಗಡೆ ಮಾಡುವುದು ಹೆಚ್ಚಾಗಿದ್ದರಿಂದಾಗಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಎನ್‌ಎಂಸಿ ವೃತ್ತ ಹಾಗೂ ಶೃಂಗಾರ್‌ ವೃತ್ತಗಳ 100 ಮೀ. ವ್ಯಾಪ್ತಿಯಲ್ಲಿ 15 ದಿನಗಳ ಹಿಂದಿನಿಂದ 4 ಚಕ್ರಗಳ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ವಾಹನ ನಿಲುಗಡೆ ನಿಷೇಧಿಸಿದ ನಂತರ ಈಗ ವಾಹನ ಸಂಚಾರ ಸುಗಮವಾಗಿದೆ. ಮುಂದಿನ ದಿನಗಳಲ್ಲಿ ಹನುಮಂತಪ್ಪ ವೃತ್ತ, ಎಐಟಿ ವೃತ್ತ, ಬದ್ರಿಯಾ, ಉಪ್ಪಳ್ಳಿ ವೃತ್ತಗಳಲ್ಲಿಯೂ ಇದೇ ರೀತಿ 4 ಚಕ್ರಗಳ ವಾಹನ ನಿಲುಗಡೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಶಾಲಾ, ಕಾಲೇಜುಗಳಿಗೆ ಪತ್ರ: ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆತರುವ ವಾಹನಗಳ ಕುರಿತು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರುಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಕೆಲವು ಶಾಲೆಗಳ ಮಕ್ಕಳನ್ನು ಆಟೋಗಳಲ್ಲಿ ಕರೆತರಲಾಗುತ್ತದೆ. ಆಟೋಗಳಲ್ಲಿ ನಿಗದಿತ ಸಂಖ್ಯೆಗಿಂತಲೂ ಹೆಚ್ಚಿನ ಮಕ್ಕಳನ್ನು ಕರೆತರುವುದರಿಂದ ಅಪಘಾತವಾಗುವ ಸಂಭವ ಹೆಚ್ಚಾಗಿರುತ್ತದೆ. ಈ ಬಗ್ಗೆ ಶಾಲೆಯವರೇ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಸೂಚಿಸಲಾಗಿದೆ. ಒಂದು ವೇಳೆ ಅವರಿಂದ ಸಾಧ್ಯವಾಗದಿದ್ದಲ್ಲಿ ಕೂಡಲೇ ಇಲಾಖೆಗೆ ತಿಳಿಸುವಂತೆ ಹೇಳಲಾಗಿದೆ ಎಂದರು. ಅದೇ ರೀತಿ ಶಾಲಾ, ಕಾಲೇಜುಗಳ ವಾಹನಗಳು ಸುಸ್ಥಿತಿಯಲ್ಲಿರುವ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಕೆಲವು ವಾಹನಗಳ ಚಾಲಕರ ಬಳಿ ವಾಹನ ಚಾಲನಾ ಪರವಾನಗಿ ಇಲ್ಲದಿರುವ ಬಗ್ಗೆ ಹಾಗೂ ಈಗಾಗಲೇ ಅಪಘಾತ ಮಾಡಿ ವಿಚಾರಣೆ ಎದುರಿಸುತ್ತಿರುವ ಚಾಲಕರನ್ನು ನೇಮಿಸಿಕೊಂಡಿರುವ ಬಗ್ಗೆಯೂ ದೂರು ಬಂದಿದ್ದು ಈ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಹೇಳಿದರು.

ಸಭೆ: ತೋಟಗಳು ಹಾಗೂ ದೊಡ್ಡ ಕಟ್ಟಡಗಳ ನಿರ್ಮಾಣಕ್ಕೆ ಕೂಲಿ, ಕಾರ್ಮಿಕರುಗಳನ್ನು ಸರಕು ಸಾಗಣೆ ವಾಹನದಲ್ಲಿ ಕರೆದೊಯ್ಯುತ್ತಿರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ತೋಟಗಳ ಮಾಲೀಕರುಗಳು ಹಾಗೂ ಇಂಜಿನಿಯರ್‌ಗಳು, ಗುತ್ತಿಗೆದಾರರ ಸಭೆಯನ್ನು ಕರೆಯಲಾಗಿದೆ. ಸದರಿ ಸಭೆಯಲ್ಲಿ ಯಾವುದೇ ಕಾರಣಕ್ಕೂ ಸರಕು ಸಾಗಣೆ ವಾಹನದಲ್ಲಿ ಕೂಲಿ, ಕಾರ್ಮಿಕರುಗಳನ್ನು ಕರೆದೊಯ್ಯಬಾರದೆಂದು ಸ್ಪಷ್ಟ ನಿರ್ದೇಶನ ನೀಡಲಾಗುವುದು ಎಂದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶೃತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next