ಚಿಕ್ಕಮಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ರಂಭಾಪುರಿ ಮಠಕ್ಕೆ ಆನೆವೊಂದನ್ನು ಕೊಡುಗೆಯಾಗಿ ನೀಡಿದ್ದಾರೆ.
ರಂಭಾಪುರಿ ಮಠಕ್ಕೆ ಈ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ಕೊಟ್ಟ ನಟಿ ಶಿಲ್ಪಾ ಶೆಟ್ಟಿ ಈ ಮೂಲಕ ಅರಣ್ಯ ಇಲಾಖೆಗೆ ನೆರವಾಗಿದ್ದಾರೆ.
ರಂಭಾಪುರಿ ಶ್ರೀ ಈ ರೋಬೋಟಿಕ್ ಆನೆಯನ್ನು ಉದ್ಘಾಟನೆ ಮಾಡಿದ್ದಾರೆ. ನೋಡಲು ನಿಜವಾದ ಆನೆಯಂತೆ ಹೋಲಿಕೆ ಕಾಣುವ ರೋಬೋಟಿಕ್ ಆನೆ ಹಲವು ವಿಶೇಷತೆಗಳನ್ನು ಹೊಂದಿದೆ.
ಈ ರೋಬೋಟಿಕ್ ಆನೆಯ ಕಿವಿ, ತಲೆ, ಸೊಂಡಿಲು ಹಾಗೂ ಬಾಲ ಸದಾ ಅಲುಗಾಡಿಸುತ್ತಿರುತ್ತಿದ್ದು, ನೋಡುಗರ ಗಮನ ಸೆಳೆಯುತ್ತಿದೆ.
ನೋಡಿದ ಕೂಡಲೇ ನಿಜವಾದ ಆನೆಯಂತೆಯೇ ಭಾಸವಾಗುವ ಈ ಆನೆ ಪಂಚಪೀಠಗಳಲ್ಲೇ ಮೊದಲ ಪೀಠವಾದ ರಂಭಾಪುರಿ ಮಠಕ್ಕೆ ಹಸ್ತಾಂತರವಾಗಿದೆ.
ಎನ್.ಆರ್.ಪುರ ತಾಲೂಕಿನ ಭದ್ರಾ ನದಿ ತಟದಲ್ಲಿರುವ ರಂಭಾಪುರಿ ಮಠ ಈ ವಿಶೇಷ ಆನೆಯ ಆಗಮನಕ್ಕೆ ಸಾಕ್ಷಿಯಾಗಿದೆ.