ಚಿಕ್ಕಮಗಳೂರು: ಸಾರಿಗೆ ಬಸ್ ನಿಂದ ಇಳಿಯುವಾಗ ಬಿದ್ದು ವಿದ್ಯಾರ್ಥಿನಿಯೊಬ್ಬಳ ಮೆದುಳು ನಿಷ್ಕ್ರೀಯ ವಾದ ದಾರುಣ ಘಟನೆ ಬುಧವಾರ ನಡೆದಿದೆ.
ಕಡೂರು ತಾಲೂಕಿನ ಸೋಮನಹಳ್ಳಿಯ ತಾಂಡ್ಯದ ಯುವತಿ ಬಸ್ ಚಲಿಸುತ್ತಿರುವಾಗಲೇ ಕೆಳಗೆ ಬಿದ್ದಿದ್ದು, ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿತ್ತು.
ಇದನ್ನೂ ಓದಿ: 40% ಕಮಿಷನ್ ವಿರುದ್ಧ ‘ಪೇ ಸಿಎಂ’ ಅಭಿಯಾನ ಆರಂಭಿಸಿದ ಕಾಂಗ್ರೆಸ್
ಚಿಕ್ಕಮಗಳೂರಿನ ಬಸವನಹಳ್ಳಿ ಸರ್ಕಾರಿ ಪಿಯುಸಿ ಕಾಲೇಜಿನಲ್ಲಿ ಓದುತ್ತಿದ್ದ ರಕ್ಷಿತಾ ಸಾವಿನಲ್ಲೂ ಸಾರ್ಥಕತೆ ಮೆರೆಯಲಿದ್ದು, ಮಗಳ ಅಂಗಾಂಗ ದಾನಕ್ಕೆ ತಾಯಿ ಲಕ್ಷ್ಮಿಬಾಯಿ, ತಂದೆ ಸುರೇಶ್ ನಾಯ್ಕ ಅವರು ಒಪ್ಪಿಗೆ ನೀಡಿದ್ದಾರೆ.
ಸದ್ಯ ರಕ್ಷಿತಾ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿದ್ದು, ಇಂದು ಸಂಜೆ ಚಿಕ್ಕಮಗಳೂರಿಗೆ ವಿಶೇಷ ತಜ್ಞರ ತಂಡ ಆಗಮಿಸಲಿದ್ದು, ನಾಳೆ ಮಧ್ಯಾಹ್ನದ ಹೊತ್ತಿಗೆ 2 ಹೆಲಿಕ್ಯಾಪ್ಟರ್ ನಲ್ಲಿ ಅಂಗಾಂಗ ರವಾನೆ ಮಾಡಲಾಗುತ್ತಿದೆ.ಇದೇ ಮೊದಲ ಬಾರಿಗೆ ಹೃದಯ ವಿದ್ರಾವಕ, ಅಪರೂಪದ ಪ್ರಕರಣಕ್ಕೆ ಕಾಫಿನಾಡು ಸಾಕ್ಷಿಯಾಗಲಿದೆ.