Advertisement

ಸಂಪರ್ಕಿತರ ಪತ್ತೆ ಹಚ್ಚಿ ಲಸಿಕೆ ನೀಡಿ: ರಘುಮೂರ್ತಿ

10:56 PM Jun 18, 2021 | Team Udayavani |

ಚಳ್ಳಕೆರೆ: ನಗರ ವ್ಯಾಪ್ತಿಯಲ್ಲಿ ಮೇಲೋಟಕ್ಕೆ ಕೊರೊನಾ ನಿಯಂತ್ರಣಗೊಂಡರೂ ಒಳಭಾಗದಲ್ಲಿ ಅದರ ತೀವ್ರತೆ ಹೆಚ್ಚಿದೆ. ಕಾರಣ, ನಗರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಪರ್ಕ ಹೊಂದಿದವರನ್ನು ಪೂರ್ಣ ಪ್ರಮಾಣದಲ್ಲಿ ಪತ್ತೆ ಹಚ್ಚಿ ಲಸಿಕೆ ನೀಡಲಾಗಿಲ್ಲ. ಸಂಪರ್ಕಿತರು ಯಾರೇ ಇರಲಿ ಅವರನ್ನು ಪತ್ತೆ ಹಚ್ಚಿ ಲಸಿಕೆ ಹಾಕಿಸುವ ಮೂಲಕ ಸಾರ್ವನಿಕರನ್ನು ಕೊರೊನಾ ವೈರಾಣುವಿನಿಂದ ಮುಕ್ತ ಮಾಡಬೇಕೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

Advertisement

ನಗರಸಭಾ ಅಧ್ಯಕ್ಷೆ ಪ್ರತಿನಿ ಧಿಸುವ 13,14,15, 21, 22 ಮತ್ತು 28 ನೇ ವಾರ್ಡ್‌ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣ ಜಾಗೃತಿ ಸಭೆ ನಡೆಸಿ ಮಾತನಾಡಿದರು. ಪ್ರತಿಯೊಂದು ವಾರ್ಡ್‌ನಲ್ಲೂ ಜನ ಸಂಖ್ಯೆಗೆ ಅನುಗುಣವಾಗಿ ಲಸಿಕೆ ಹಾಕಲಾಗಿಲ್ಲ. ಸೋಂಕಿತರ ಸಂಪರ್ಕ ಹೊಂದಿರುವ ಹಲವಾರು ವ್ಯಕ್ತಿಗಳು ಲಸಿಕೆಯಿಂದ ಹೊರಗುಳಿದಿದ್ದು, ಅವರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪ್ರಗತಿ ಸಾಧಿಸಲಾಗಿಲ್ಲ. ಆರೋಗ್ಯ, ಅಂಗನವಾಡಿ, ಆಶಾ ಮತ್ತು ಮತಗಟ್ಟೆ ಅ ಕಾರಿಗಳು ಹೆಚ್ಚು ಜಾಗೃತೆ ವಹಿಸದೆ ನಿರ್ಲಕ್ಷ ತೋರಿರುವುದು ಎದ್ದು ಕಾಣುತ್ತಿದೆ.

ಆದರೆ, ನಾನು ನೀವು ತಪ್ಪು ಮಾಡಿದ್ದೀರೆಂದು ತೆಗಳದೆ ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಜಾಗೃತಿಯಿಂದ ನಿರ್ವಹಿಸಿದರೆ ಮಾತ್ರ ನಾವೆಲ್ಲರೂ ಕೊರೊನಾ ಸಂಕಟದಿಂದ ಪಾರಾಗಬಹುದು. ಆರೋಗ್ಯ ಇಲಾಖೆ ಹೆಚ್ಚಿನ ಪ್ರಮಾಣದ ಲಸಿಕೆ ಸರಬರಾಜು ಮಾಡುವ ಭರವಸೆ ನೀಡಿದ್ದು, ಇಂದಿನಿಂದಲೇ ಆಶಾ, ಅಂಗನವಾಡಿ, ಮತಗಟ್ಟೆ ಅ ಕಾರಿಗಳು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮುಂದುವರಿಸಬೇಕು.

ನಗರದ ಎಲ್ಲಾ ವಾರ್ಡ್‌ಗಳಲ್ಲೂ ಮೂಲ ಸೌಕರ್ಯಗಳ ಕೊರತೆ ಉಂಟಾಗದಂತೆ ಜಾಗ್ರತೆ ವಹಿಸಬೇಕು ಎಂದರು. ಪೌರಾಯುಕ್ತ ಪಿ.ಪಾಲಯ್ಯ ಮಾತನಾಡಿ, ಆರೋಗ್ಯ ಇಲಾಖೆ ನೀಡಿದ ಮಾಹಿತಿ ಅನುಸರಿಸಿ ತಹಶೀಲ್ದಾರ್‌ ಗಮನಕ್ಕೆ ತಂದು ನಗರಸಭೆ ಸಿಬ್ಬಂದಿ ವರ್ಗ ನಗರ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸಂಪರ್ಕದ ಮಾಹಿತಿಯನ್ನು ಪಡೆದು ಕಾರ್ಯನಿರ್ವಹಿಸಿದ್ದಾರೆ.

ಸೋಂಕಿತರ ಮನೆಯ ಪ್ರದೇಶದಲ್ಲಿ ಸ್ಟಿಕ್ಕರ್‌ ಅಂಟಿಸಿ ಜಾಗೃತಿ ಮೂಡಿಸಲಾಗಿದೆ. ನಗರಸಭೆಯ ಪೌರಕಾರ್ಮಿಕರು ಹಗಲುರಾತ್ರಿ ಎನ್ನದೆ ಸ್ವತ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಎಲ್ಲಾ ರೀತಿಯ ಪ್ರಯತ್ನ ಮುಂದುವರಿಸಲಾಗಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮಿ ಕೃಷ್ಣಮೂರ್ತಿ ಮಾತನಾಡಿ, ಕೊರೊನಾ ಪ್ರಾರಂಭದ ದಿನದಂದೇ ನಿಯಂತ್ರಣಕ್ಕೆ ನಗರಸಭೆ ಆಡಳಿತ ಕಾಯೋನ್ಮುಖವಾಗಿದೆ. ನಗರಸಭೆಯ ಎಲ್ಲ ವಾರ್ಡ್‌ಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಯಂತ್ರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ, ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಪರ್ಕಿತರು ನಗರದಲ್ಲಿದ್ದು, ಕೆಲವರು ಮಾಹಿತಿ ನೀಡದೆ ಇರುವ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದ್ದು, ಇದನ್ನು ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭಾ ಸದಸ್ಯರಾದ ಕೆ.ವೀರಭದ್ರಪ್ಪ, ಹೊಯ್ಸಳ ಗೋವಿಂದ, ಸಿ.ಎಂ. ವಿಶುಕುಮಾರ್‌, ಸಾವಿತ್ರಮ್ಮ, ಕಾಂಗ್ರೆಸ್‌ ಮುಖಂಡರಾದ ಎಸ್‌.ಮುಜೀಬ್‌, ಆರ್‌ .ಪ್ರಸನ್ನಕುಮಾರ್‌, ಕೃಷ್ಣಮೂರ್ತಿ, ಪರಸಪ್ಪ , ವ್ಯವಸ್ಥಾಪಕ ಲಿಂಗರಾಜು, ಎಇಇ ಜೆ.ಶ್ಯಾಮಲ, ವಿನಯ್‌, ನೈರ್ಮಲ್ಯ ಇಂಜಿನಿಯರ್‌ ನರೇಂದ್ರಬಾಬು, ಜೆಇ ಲೋಕೇಶ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next