ಚಿಕ್ಕಮಗಳೂರು: ಪ್ರಧಾನಮಂತ್ರಿ ಆವಾಸ್‌ಯೋಜನೆಯಡಿ ನಗರಸಭೆ ವ್ಯಾಪ್ತಿಯಲ್ಲಿವಸತಿ ರಹಿತರಿಗೆ ನಿರ್ಮಾಣವಾಗುತ್ತಿರುವಜಿ-ಪ್ಲೆಸ್ 2 ಮಾದರಿ ಗುಂಪು ಮನೆಗಳಗುಣಮಟ್ಟ ಕಾಪಾಡಿಕೊಂಡು ತ್ವರಿತವಾಗಿಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆಜಿಲ್ಲಾಧಿಕಾರಿ ಕೆ.ಎನ್. ರಮೇಶ್‌ಸೂಚಿಸಿದರು.
ನಗರದ ಹೊರವಲಯದ ಸಿಡಿಎಲೇಔಟ್ ಸಮೀಪದಲ್ಲಿ ಬುಧವಾರನಿರ್ಮಾಣಗೊಳ್ಳುತ್ತಿರುವ ಬಡಾವಣೆಗೆ ಭೇಟಿನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಅವರುಮಾತನಾಡಿದರು. ನಗರಸಭೆ ವ್ಯಾಪ್ತಿಯಲ್ಲಿವಸತಿ ರಹಿತರಿಗೆ ಪಿಎಂಎವೈ ಯೋಜನೆಯಡಿ1,511 ಜಿ-ಪ್ಲೆಸ್ 2 ಮಾದರಿ ಮನೆಗಳನಿರ್ಮಾಣವಾಗುತ್ತಿದ್ದು, ರಾಜೀವ್ ಗಾಂಧಿವಸತಿ ನಿಗಮದಿಂದ 11,502.34 ಲಕ್ಷ ರೂ.ಟೆಂಡರ್ ಅನುಮೋದನೆ ಪಡೆದು ಮನೆಗಳನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದುತಿಳಿಸಿದರು.
ಕೋವಿಡ್ ಕಾರಣದಿಂದ ಕಾರ್ಮಿಕರಕೊರತೆ ಉಂಟಾಗಿದ್ದು, ಮನೆ ನಿರ್ಮಾಣಕಾಮಗಾರಿ ಕುಂಠಿತಗೊಂಡಿದ್ದು,ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿಫಲಾನುಭವಿಗಳಿಗೆ ಹಸ್ತಾಂತರಿಸುವಂತೆಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆಎಂದರು.ಪಿಎಂಎವೈ ಯೋಜನೆಯಡಿ 1,511ಫಲಾನುಭವಿಗಳು ಆಯ್ಕೆಗೊಂಡಿದ್ದು,ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರಶೇ.60ರಷ್ಟು ಹಾಗೂ ರಾಜ್ಯ ಸರ್ಕಾರಶೇ.40ರಷ್ಟು ಅನುಪಾತದಲ್ಲಿ ಹಣಕಾಸುನೆರವು ನೀಡಲಿದೆ.
ಪರಿಶಿಷ್ಟ ಜಾತಿ ಮತ್ತುಪರಿಶಿಷ್ಟ ಪಂಗಡದ ಫಲಾ ನುಭವಿಗಳಿಗೆ3.3ಲಕ್ಷ ರೂ. ಹಾಗೂ ಇತರೆ ಹಿಂದುಳಿದವರ್ಗಗಳಿಗೆ 2.7ಲಕ್ಷ ರೂ. ಸಹಾಯಧನಒದಗಿಸಲಿದೆ. ಉಳಿದ ಹಣ ಬ್ಯಾಂಕ್‌ಗಳ ಮೂಲಕ ಸಾಲದ ರೂಪದಲ್ಲಿಪಡೆದುಕೊಳ್ಳಬಹುದಾಗಿದೆ ಎಂದುತಿಳಿಸಿದರು.ಮನೆ ನಿರ್ಮಾಣಕ್ಕೆ ಬ್ಯಾಂಕ್‌ಗಳಿಂದ ಸಾಲವಿತರಣೆಗೆ ಸಂಬಂ ಧಿಸಿದಂತೆ ಲೀಡ್‌ಬ್ಯಾಂಕ್‌ಹಾಗೂ ಇತರೆ ಬ್ಯಾಂಕ್ ಅ ಧಿಕಾರಿಗಳಜೊತೆ ಸಭೆ ನಡೆಸಿ ಚರ್ಚಿಸಲಾಗಿದ್ದು, ಮನೆಸಾಲದ ಕುರಿತು 600 ಅರ್ಜಿಗಳ ಪೈಕಿ 232ಅರ್ಜಿಗಳಿಗೆ ಸಾಲ ನೀಡಲಾಗಿದೆ.
ಸುಮಾರು368 ಅರ್ಜಿದಾರ ಫಲಾನುಭವಿಗಳಿಗೂತ್ವರಿತವಾಗಿ ಸಾಲ ವಿತರಣೆಗೆ ಕ್ರಮವಹಿಸಲುಸೂಚನೆ ನೀಡಲಾಗಿದೆ. ಈ ಬಗ್ಗೆ ಮತ್ತೂಮ್ಮೆಸಭೆ ನಡೆಸಲಾಗುವುದು ಎಂದರು.ಜಿ-ಪ್ಲಸ್ 2 ಮಾದರಿಯಲ್ಲಿ ಮನೆಗಳುನಿರ್ಮಾಣಗೊಳ್ಳುತ್ತಿದ್ದು, ಮನೆಗಳ ನಿರ್ಮಾಣಕಾಮಗಾರಿಯನ್ನು ಬೆಳಗಾವಿಯ ಮೆ| ಎಸ್.ಬಂಡಿ ಇನಾø ಫೈ ಲಿಮಿಡೆಡ್ ವಹಿಸಿಕೊಂಡಿದೆ.30 ಬ್ಲಾಕ್‌ಗಳ ಪೈಕಿ ಪ್ರತಿ ಬ್ಲಾಕಿನಲ್ಲಿ24 ಮನೆಗಳು ನಿರ್ಮಾಣವಾಗುಲಿವೆಎಂದು ಗುತ್ತಿಗೆದಾರರು ತಿಳಿಸಿದ್ದು,ಮನೆಗಳ ನಿರ್ಮಾಣ ಕಾಮಗಾರಿಯನ್ನುಗುಣಮಟ್ಟದೊಂದಿಗೆ ಏಪ್ರಿಲ್ ಅಂತ್ಯದೊಳಗೆಪೂರ್ಣಗೊಳಿಸಿ ಫಲಾನುಭವಿಗಳಿಗೆಹಸ್ತಾಂತರಿಸುವಂತೆ ಸೂಚಿಸಲಾಗಿದೆಎಂದರು.
ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾನಗರಾಭಿವೃದ್ಧಿ ಕೋಶದ ಯೋಜನಾನಿರ್ದೇಶಕ ಮನೋಹರ್, ಪೌರಾಯುಕ್ತಬಿ.ಸಿ.ಬಸವ ರಾಜ್, ಕಾರ್ಯಪಾಲಕಅಭಿಯಂತರ ಕುಮಾರ್, ನಗರಸಭೆಸಹಾಯಕ ಕಿರಿಯ ಎಂಜಿನಿಯರ್‌ಚಂದನ್, ಆಶ್ರಯ ಶಾಖೆ ವಿಷಯನಿರ್ವಾಹಕ ನಾಗರಾಜ್, ಗುತ್ತಿಗೆದಾರಎಂಜಿನಿ ಯರ್ ಧನುಷ್ ಇದ್ದರು.