Advertisement

ಕಾಫಿ ನಾಡಿನ ಕ್ರಿಕೆಟ್‌ ಪ್ರತಿಭೆಗೆ ಅಮೆರಿಕ ತಂಡದಲ್ಲಿ ಮನ್ನಣೆ

07:21 PM Jan 25, 2022 | Team Udayavani |

ಚಿಕ್ಕಮಗಳೂರು: ವಿದ್ಯೆಗೆ ತಕ್ಕ ಕೆಲಸ ಸಿಕ್ಕಿಲ್ಲ.ನನ್ನ ಪ್ರತಿಭೆಗೆ ತಕ್ಕ ಅವಕಾಶ ಸಿಗಲಿಲ್ಲ, ಇಂತಹಮಾತುಗಳನ್ನು ನಿತ್ಯ ನಮ್ಮ ಸುತ್ತಮುತ್ತ ಕೇಳುತ್ತಲೇಇರುತ್ತೇವೆ. ಕೆಲವರು ಅವಕಾಶಕ್ಕಾಗಿ ಕಾಯದೆ ತಮ್ಮಬಳಿಗೆ ಅವಕಾಶಗಳು ಹುಡುಕಿಕೊಂಡು ಬರುವಂತೆಮಾಡಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ.ಆದರೆ ಕೆಲವರು ಇಲ್ಲಿ ಅವಕಾಶ ಸಿಗದೆ ವಿದೇಶಕ್ಕೆಹಾರುವುದೂ ಹೊಸದಲ್ಲ. ಇಂಥದ್ದೊಂದು ಪ್ರತಿಭಾಫಲಾಯನಕ್ಕೆ ಕಾಫಿನಾಡು ಚಿಕ್ಕಮಗಳೂರು ಸಾಕ್ಷಿಯಾಗಿದೆ.

Advertisement

ಪ್ರತಿಭಾ ಪಲಾಯನ ಎನ್ನುವುದುಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ಅನೇಕಕ್ಷೇತ್ರಗಳನ್ನು ಕಾಡುತ್ತಿದೆ. ಹಾಗೇ ಕ್ರೀಡಾ ಕ್ಷೇತ್ರವನ್ನು ಬಿಟ್ಟಿಲ್ಲ, ನಮ್ಮ ದೇಶದಲ್ಲಿ ಆಡಿ ಬೆಳೆದ ಅದೆಷ್ಟೋಪ್ರತಿಭೆಗಳು ಬೇರೆ ದೇಶವನ್ನು ಪ್ರತಿನಿಧಿ ಸುತ್ತಿದ್ದಾರೆ. ಹಾಗೆಯೇ ಕಾಫಿ ನಾಡಿನ ಯುವಕ ಭಾರತದಲ್ಲಿಅವಕಾಶ ವಂಚಿತನಾಗಿ ಅಮೆರಿಕ ಕ್ರಿಕೆಟ್‌ ಟೀಮ್‌ನಲ್ಲಿ ಸ್ಥಾನ ದಕ್ಕಿಸಿಕೊಂಡಿದ್ದಾನೆ. ಕ್ರಿಕೆಟ್‌ ಜಗತ್ತಿನಲ್ಲಿ ಅಮೆರಿಕಈಗ ತಾನೇ ಅಂಬೆಗಾಲಿಡುತ್ತಿದೆ.

ಯುಎಸ್‌ಎಇಂಟರ್‌ನ್ಯಾಶನಲ್‌ ಟೀಮ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ನೋಸ್ತುಶ್‌ಸದಸ್ಯನಾಗಿದ್ದಾನೆ. ಮೂಡಿಗೆರೆ ತಾಲೂಕಿನ ಕೆಂಜಿಗೆಗ್ರಾಮದ ಪ್ರದೀಪ್‌ ಕೆಂಜಿಗೆ ಮತ್ತು ಶೃತಿ ಕೀರ್ತಿ ದಂಪತಿಪುತ್ರ ನೋಸ್ತುಶ್‌ ಚಿಕ್ಕ ವಯಸ್ಸಿನಿಂದಲೂ ಕ್ರಿಕೆಟ್‌ನಲ್ಲಿದೊಡ್ಡ ಹೆಸರು ಮಾಡಬೇಕು ಎಂಬ ಕನಸು ಹೊತ್ತುಹಗಲಿರುಳು ಶ್ರಮಿಸಿದ.

ಆದರೆ, ಇಲ್ಲಿ ಅವಕಾಶವಂಚಿತನಾಗಿ ಅನಿವಾರ್ಯವಾಗಿ ಬೇರೆದೇಶದತ್ತ ಮುಖ ಮಾಡಿದ್ದಾರೆ. 2017ರಿಂದ ಅಮೆರಿಕ ತಂಡವನ್ನುಪ್ರತಿನಿ ಧಿಸುತ್ತಿರುವ ನೋಸ್ತುಶ್‌ ಅಮೆರಿಕತಂಡದ ಪರ ಟಿ-20 ಸೇರಿದಂತೆ ವಿವಿಧಪಂದ್ಯಗಳಲ್ಲಿ ಆಡಿದ್ದಾರೆ. ಸದ್ಯ ತವರೂರುಚಿಕ್ಕಮಗಳೂರಿಗೆ ಆಗಮಿಸಿರುವಅವರು, ನಗರದ ಸುಭಾಷ್‌ ಚಂದ್ರಬೋಸ್‌ ಆಟದಮೈದಾನದಲ್ಲಿ ನೆಟ್‌ ಪ್ರ್ಯಾಕ್ಟಿಸ್‌ನಲ್ಲಿ ಭಾಗಿಯಾಗಿದ್ದರು.

ನಾನು ಕ್ರಿಕೆಟ್‌ ಆರಂಭಿಸಿದ್ದು, ನನ್ನ ಹೆಮ್ಮೆಯ ದೇಶಭಾರತದಲ್ಲೇ, ನನ್ನ ದೇಶದ ಪರ ಆಡುವ ಆಸೆಯಿತ್ತು.ಆದರೆ ಇಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ. ಹಾಗಾಗಿಅಮೆರಿಕಗೆ ಹೋಗಬೇಕಾಗಿ ಬಂತು ಎಂದು ನೋಸ್ತುಶ್‌ನೋವಿನಿಂದ ಹೇಳುತ್ತಾರೆ.ನಾನು ಕ್ರಿಕೆಟನ್ನು ತುಂಬಾ ಪ್ರೀತಿಸುತ್ತೇನೆ. ಆಟವನ್ನುಎಂಜಾಯ್‌ ಮಾಡುತ್ತೇನೆ. ಈ ಹಿಂದೆ ಕ್ಲಬ್‌ ಪರಆಡುವಾಗ ಮಯಾಂಕ್‌ ಅಗರ್ವಾಲ್‌, ಕರುಣ್‌ನಾಯರ್‌, ಶ್ರೇಯಸ್‌ ಅಯ್ಯರ್‌ ಜತೆಆಡಿದ್ದೇನೆ. ಮುಂದಿನ ಜೂನ್‌ ತಿಂಗಳಲ್ಲಿವರ್ಲ್ಡ್ಕಪ್‌ ಕ್ವಾಲಿಫೈಯರ್‌ ಮ್ಯಾಚ್‌ ಇದೆ.2023ರಲ್ಲಿ ವರ್ಲ್ಡ್ಕಪ್‌ ಮ್ಯಾಚ್‌ ಚಿನ್ನಸ್ವಾಮಿಸ್ಟೇಡಿಯಂನಲ್ಲಿ ಆಡುವಾಸೆಯಿದೆ ಎಂದುನೋಸ್ತುಶ್‌ ಹೇಳುತ್ತಾರೆ.

Advertisement

ನೋಸ್ತುಶ್‌ ಉತ್ತಮ ಬ್ಯಾಟ್ಸ್‌ಮನ್‌ ಮತ್ತುಎಡಗೈ ಸ್ಪಿನ್‌ ಬೌಲರ್‌ ಆಗಿದ್ದು, ಅಮೆರಿಕ ತಂಡವನ್ನುಪ್ರತಿನಿ ಧಿಸುತ್ತಿದ್ದಾರೆ. ಕಾಫಿ ನಾಡಿನ ಯುವಕನೊಬ್ಬಅಮೆರಿಕ ಕ್ರಿಕೆಟ್‌ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡುಕಾμನಾಡಿಗೆ ಕೀರ್ತಿ ತಂದಿದ್ದು ಸಂತೋಷ ಪಡುವಂತಹವಿಷಯವಾದರೂ ನಮ್ಮ ದೇಶದಲ್ಲಿ ಅರಳಬೇಕಾದಪ್ರತಿಭೆಯೊಂದು ಅವಕಾಶ ಸಿಗದೆ ಬೇರೆ ದೇಶದಲ್ಲಿಅರಳುತ್ತಿರುವುದು ಮಾತ್ರ ನೋವಿನ ಸಂಗತಿ.

ಸಂದೀಪ ಜಿ.ಎನ್‌.ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next