ಚಿಕ್ಕಮಗಳೂರು: ನಗರದ ಹೃದಯ ಭಾಗ ಜಿಲ್ಲಾ ಪೊಲೀಸ್‌ವರಿಷ್ಠಾ ಧಿಕಾರಿ ಕಚೇರಿ ಮುಂಭಾಗದಲ್ಲಿ ನಿರ್ಮಿಸಲಾಗಿರುವಪೊಲೀಸ್ ಪ್ರತಿಮೆಗೆ ಅಂದಾಜು 2 ವರ್ಷ ಕಳೆದರೂ ಇನ್ನೂಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ.ಅನುದಾನ ಬಿಡುಗಡೆಯಾಗದೆ ಕೆಲಸ ಪೂರ್ಣಗೊಂಡಿಲ್ಲ,ಹೀಗಾಗಿ ಉದ್ಘಾಟನೆಗೊಂಡಿಲ್ಲ ಎನ್ನಲಾಗುತ್ತಿದೆ.
ಈ ಹಿಂದೆ ಜಿಲ್ಲಾಪೊಲೀಸ್ ವರಿಷ್ಠಾ ಧಿಕಾರಿಯಾಗಿದ್ದ ಅಣ್ಣಾಮಲೈ ಜಿಲ್ಲಾ ಪೊಲೀಸ್‌ವರಿಷ್ಠಾ ಧಿಕಾರಿ ಕಚೇರಿ ವೃತ್ತದಲ್ಲಿದ್ದ ಮೌಂಟೇನ್ ತೆರವುಗೊಳಿಸಿಅಲ್ಲಿ, ನಕ್ಸಲ್ ಕಾರ್ಯಾಚರಣೆಯಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯೊಬ್ಬರ ಹೆಸರಿಡಲು ನಿರ್ಧರಿಸಲಾಗಿತ್ತು.ಈ ಸಂಬಂಧ ಒಟ್ಟು 14 ಲಕ್ಷ ರೂ. ವೆಚ್ಚದಲ್ಲಿ ವೃತ್ತ ನಿರ್ಮಿಸಲುಅಂದಾಜು ಪಟ್ಟಿಯನ್ನು ತಯಾರಿಸಲಾಗಿತ್ತು. ಅಣ್ಣಾಮಲೈ ಇದೇ ವೇಳೆವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ನಿಯೋಜನೆಗೊಂಡ ಹರೀಶ್‌ಪಾಂಡೆ ಅವರು ವೃತ್ತ ನಿರ್ಮಾಣಕ್ಕೆ ಅನುಮೋದನೆ ನೀಡಿದರು.ಇಬ್ಬರು ಪೊಲೀಸ್ ಸಿಬ್ಬಂದಿ ಮತ್ತು ಇನ್ನಿಬ್ಬರು ಮಹಿಳಾಪೊಲೀಸ್ ಸಿಬ್ಬಂದಿ ಹೊಂದಿರುವ ಪ್ರತಿಮೆಯನ್ನು ನಿರ್ಮಿಸಲುನಿರ್ಧಾರಿಸಲಾಯಿತು.
ಸಂಚಾರ ನಿಯಂತ್ರಣ ವಿಭಾಗದಲ್ಲಿ ಸೇವೆಸಲ್ಲಿಸುತ್ತಿರುವ ಮತ್ತು ಓಬವ್ವ ಪಡೆ ಸಿಬ್ಬಂದಿ ಪ್ರತಿಮೆ ಹಾಗೂ ಸಶಸ್ತ್ರಮೀಸಲು ಪಡೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರುಗೌರವ ರಕ್ಷೆ ನೀಡುವ ಭಂಗಿಯಲ್ಲಿ ಪ್ರತಿಮೆ ನಿರ್ಮಿಸಲುನಿರ್ಧರಿಸಲಾಯಿತು.ಈ ವೃತ್ತದಲ್ಲಿ ಜಿಲ್ಲಾ ಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿಕಚೇರಿ, ಮುಂದೆ ಜಿಲ್ಲಾ ನ್ಯಾಯಾಲಯ ಇರುವ ಹಿನ್ನೆಲೆಯಲ್ಲಿ ಗೌರವರಕ್ಷೆ ನೀಡುವ ಭಂಗಿಯಲ್ಲಿ ಪ್ರತಿಮೆ ನಿರ್ಮಿಸಲು ಚಿಂತನೆ ನಡೆಸಿದ್ದುಮೂರು ರಸ್ತೆಗಳು ಸಂಧಿಸುವ ವೃತ್ತದಲ್ಲಿ 24 ಅಡಿ ಎತ್ತರದ, 26ಅಡಿ ವೃತ್ತಾಕಾರದ ಪ್ರತಿಮೆ ನಿರ್ಮಾಣಕ್ಕೆ ಇಲಾಖೆ ಮುಂದಾಯಿತು.ನಗರಸಭೆ ವತಿಯಿಂದ 12 ಲಕ್ಷ ರೂ. ನೀಡಲಾಯಿತು.ಸದ್ಯ ಪ್ರತಿಮೆ ನಿರ್ಮಾಣವಾಗಿದ್ದು, 12 ಲಕ್ಷ ರೂ.ಬಿಡುಗಡೆಯಾಗಿದೆ.
ನಿರ್ಮಿತಿ ಕೇಂದ್ರದ 2 ಲಕ್ಷ ರೂ. ತೆರಿಗೆ ಕಳೆದುಉಳಿದ 10 ಲಕ್ಷ ರೂ. ವೆಚ್ಚದಲ್ಲಿ ಗುತ್ತಿಗೆದಾರನಿಗೆ ನೀಡಲಾಗಿದೆ.ಉಳಿದ ಹಣ ಬಿಡುಗಡೆಯಾಗದಿರುವುದರಿಂದ ಬಣ್ಣ ಮತ್ತುಲೈಟಿಂಗ್ ಅಳವಡಿಸುವುದು ಬಾಕಿ ಉಳಿದಿದೆ.ಅಂದಾಜು 2 ವರ್ಷವಾದರೂ ವೃತ್ತದಲ್ಲಿ ಪ್ರತಿಮೆ ನಿರ್ಮಾಣಕಾರ್ಯ ಪೂರ್ಣಗೊಂಡಿಲ್ಲ, ಸರಿಯಾದ ನಿರ್ವಹಣೆಯಿಲ್ಲದೆಪ್ರತಿಮೆಗಳು ಕಳೆಗುಂದುತ್ತಿವೆ. ಹುಲ್ಲು ಬೆಳೆಯುತ್ತಿದೆ. ವೃತ್ತದ ಕೆಲಸಮುಗಿದಿದ್ದು ಸದ್ಯದಲ್ಲೇ ಉದ್ಘಾಟನೆಗೊಳ್ಳುತ್ತದೆ ಎನ್ನುವಷ್ಟರಲ್ಲಿ ವಿವಿಧಸಂಘ- ಸಂಸ್ಥೆಗಳ ಮುಖಂಡರು ಭಗತ್ ಸಿಂಗ್, ಡಾ| ಬಿ.ಆರ್.ಅಂಬೇಡ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿಯಾಗಿ ಸೇವೆ ಸಲ್ಲಿಸಿಅಕಾಲಿಕ ನಿಧನರಾದ ಮಧುಕರ್ ಶೆಟ್ಟಿ ಹೆಸರಿಡಲು ಒತ್ತಾಯಿಸಿಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಈ ಮನವಿಗಳನ್ನು ಸ್ವೀಕರಿಸಿರುವ ಅಧಿ ಕಾರಿಗಳು ವೃತ್ತಕ್ಕೆ ಯಾರಹೆಸರನ್ನಿಡಬೇಕೆಂಬ ಗೊಂದಲದಲ್ಲಿದ್ದು, ಅದೇನೆ ಇರಲಿ ಅನುದಾನಬಿಡುಗಡೆಯಾಗುವುದು ಯಾವಾಗ? ಕೆಲಸ ಪೂರ್ಣಗೊಂಡುಉದ್ಘಾಟನೆಗೊಳ್ಳುವುದು ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿದ್ದು,ಶೀಘ್ರವೇ ಕೆಲಸ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾÃ