Advertisement

ಜಾತಿ-ಧರ್ಮದ ಆಧಾರದಲ್ಲಿ ಬಿಜೆಪಿ ರಾಜಕೀಯ

03:59 PM Dec 22, 2021 | Team Udayavani |

ಚಿಕ್ಕಮಗಳೂರು: ಬಿಜೆಪಿ ಸಿದ್ಧಾಂತಗಳನ್ನು ಕೊನೆಗಾಣಿಸಬೇಕು.ಇಲ್ಲದಿದ್ದರೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ ಎಂದು ಮಾಜಿಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು.

Advertisement

ಮಂಗಳವಾರ ನಗರದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜನಪರಕಾರ್ಯ ಕ್ರಮಗಳನ್ನು ಮುಂದಿಟ್ಟುಕೊಂಡು ರಾಜಕೀಯಮಾಡುತ್ತಿಲ್ಲ. ಜಾತಿ, ಧರ್ಮದ ಮಂಕು ಬೂದಿ ಎರಚಿ ರಾಜಕೀಯಮಾಡುತ್ತಿದೆ ಎಂದು ಟೀಕಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತದಿಂದಜನರು ಬೇಸತ್ತಿದ್ದಾರೆ. ಯುವಜನತೆಗೆ ಉದ್ಯೋಗ ಸಿಗುತ್ತಿಲ್ಲ.ಬಡವರಿಗೆ ಮನೆ ಸಿಗುತ್ತಿಲ್ಲ. ಗ್ರಾಮ ಪಂಚಾಯತಿ ಮತ್ತುನಗರಸಭೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಮಹಾತ್ಮ ಗಾಂಧಿರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಣ ಬಿಡುಗಡೆಯಾಗುತ್ತಿಲ್ಲ ಎಂದು ದೂರಿದರು.

ಜನರು ನಿತ್ಯ ಅನುಭವಿಸುತ್ತಿರುವಸಂಕಟಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಥಳೀಯಶಾಸಕ ಸಿ.ಟಿ.ರವಿ ಸೇರಿದಂತೆ ಬಿಜೆಪಿವರ ರ್ಯಾರು ಮಾತನಾಡುವುದಿಲ್ಲ.ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ವಿಷಬೀಜ ಬಿತ್ತುತ್ತಿದ್ದುಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದರು.

ದತ್ತಪೀಠ ವಿವಾದ ಇಲ್ಲದಿದ್ದರೆ ಚಿಕ್ಕಮಗಳೂರಿನಲ್ಲಿ ಬಿಜೆಪಿಇರುತ್ತಿರಲಿಲ್ಲ. ಸಿ.ಟಿ. ರವಿ ಶಾಸಕರಾಗುತ್ತಿರಲಿಲ್ಲ. ಈದ್ಗಾ ಮೈದಾನದವಿವಾದ ಇಲ್ಲದಿದ್ದರೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ಇರುತ್ತಿರಲಿಲ್ಲ. ಜಾತಿ, ಧರ್ಮದ ಹೆಸರು ಬಿಟ್ಟು ಜನಪರ ಕಾರ್ಯಕ್ರಮದ ಆಧಾರದ ಮೇಲೆ ಚುನಾವಣೆ ಎದುರಿಸಿದ್ದಾದರೆ ಬಿಜೆಪಿಗೆಒಂದು ಮತವೂ ಬರುತ್ತಿರಲಿಲ್ಲ ಎಂದು ಟೀಕಿಸಿದರು.

Advertisement

ಮಾಜಿ ಸಚಿವಅಭಯಚಂದ್ರ ಜೈನ್‌, ಎಐಸಿಸಿ ಮುಖಂಡ ಐವನ್‌ ಡಿಸೋಜ,ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್‌, ಜಿಲ್ಲಾ ಕಾಂಗ್ರೆಸ್‌ಅಧ್ಯಕ್ಷ ಡಾ|ಕೆ.ಪಿ.ಅಂಶುಮಂತ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next