ಚಿಕ್ಕಮಗಳೂರು: ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳನ್ನುಪ್ರತಿನಿಧಿ ಸುವ 1 ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶಹೊರಬಿದ್ದಿದ್ದು ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ 6ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಮಂಗಳವಾರ ನಗರದ ಎಸ್‌ಟಿಜೆ ಕಾಲೇಜುಆವರಣದಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯಆರಂಭಗೊಂಡಿತು. ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿದ್ದ ಮತಪೆಟ್ಟಿಗೆಗಳನ್ನು ಅಭ್ಯರ್ಥಿಗಳು ಮತ್ತುಅಭ್ಯರ್ಥಿಗಳ ಏಜೆಂಟರುಗಳ ಎದುರು ತೆರೆಯಲಾಯಿತು.
ಮಿಕ್ಸಿಂಗ್ ಕಾರ್ಯದ ನಂತರ ಮತ ಎಣಿಕೆ ಕಾರ್ಯಆರಂಭಗೊಂಡಿತು.ಮತ ಎಣಿಕೆ ಆರಂಭವಾಗುತ್ತಿದ್ದಂತೆ ಬಿಜೆಪಿ ಮತ್ತುಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆದಿದ್ದು,ಒಂದು ಬಾರಿ ಬಿಜೆಪಿ ಅಭ್ಯರ್ಥಿ ಮೇಲುಗೈ ಸಾಧಿ ಸಿದರೆ,ಮತ್ತೂಮ್ಮೆ ಕಾಂಗ್ರೆಸ್ ಅಭ್ಯರ್ಥಿ ಮೇಲುಗೈ ಸಾ ಧಿಸಿದರು.
ಇದು ಮತ ಎಣಿಕೆ ಕೇಂದ್ರದ ಎದುರು ನೆರೆದಿದ್ದ ಪಕ್ಷದಮುಖಂಡರು ಮತ್ತು ಕಾರ್ಯಕರ್ತರಲ್ಲಿ ಭಾರೀಕುತೂಹಲ ಕೆರಳಿಸಿತ್ತು.ಮೊದಲ ಪ್ರಾಶ್ಯಸ್ತ Âದ ಮತದಲ್ಲಿ ಬಿಜೆಪಿ ಅಭ್ಯರ್ಥಿಎಂ.ಕೆ. ಪ್ರಾಣೇಶ್ 1,188 ಮತಗಳನ್ನು ಪಡೆದುಕೊಂಡರು.ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ 1,182ಮತಗಳನ್ನು ಪಡೆದು 6 ಮತಗಳ ಅಂತರದಲ್ಲಿ ಗಾಯತ್ರಿಶಾಂತೇಗೌಡ ಪರಾಭವಗೊಂಡರು.
ಮತ ಎಣಿಕೆ ಪ್ರಾರಂಭದಲ್ಲಿ ಬಿಜೆಪಿಯಎಂ.ಕೆ.ಪ್ರಾಣೇಶ್ ಅಲ್ಪಮತದ ಮುನ್ನಡೆ ಸಾ ಧಿಸಿದರೆ ಎಣಿಕೆಕಾರ್ಯ ಮುಂದುವರಿಯುತ್ತಿದ್ದಂತೆ ಎಂ.ಕೆ.ಪ್ರಾಣೇಶ್‌ಮತ್ತು ಗಾಯತ್ರಿ ಶಾಂತೇಗೌಡ ಸಮಬಲ ಸಾ ಧಿಸಿದರು.ಮತ ಎಣಿಕೆಯ ಕಡೇ ಗಳಿಗೆಯವರೆಗೂ ಎರಡುಪಕ್ಷಗಳ ಅಭ್ಯರ್ಥಿಗಳು ಪೈಪೋಟಿ ನಡೆಸಿದರು.ಮೊದಲ ಪ್ರಾಶ್ಯಸ್ತ Âದ 1,186 ನಿರ್ಣಾಯಕ ಮತಗಳಲ್ಲಿಎಂ.ಕೆ.ಪ್ರಾಣೇಶ್ 1,188 ಮತಗಳನ್ನು ಪಡೆದುಕೊಳ್ಳುವಮೂಲಕ ಗೆಲುವು ಸಾಧಿ ಸಿದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಧಿಕಾರಿ ಕೆ.ಎನ್.ರಮೇಶ್ ಎಂ.ಕೆ.ಪ್ರಾಣೇಶ್ ಅವರಿಗೆ ಪ್ರಮಾಣಪತ್ರ ನೀಡುವ ಮೂಲಕಎಂ.ಕೆ. ಪ್ರಾಣೇಶ್ ಅವರ ಗೆಲುವನ್ನು ಅ ಧಿಕೃತಗೊಳಿಸಿದರು.ಮರು ಮತ ಎಣಿಕೆಗೆ ಕಾಂಗ್ರೆಸ್ ಅಭ್ಯರ್ಥಿ ಮನವಿ:ಅಲ್ಪಮತಗಳ ಅಂತರದಲ್ಲಿ ಸೋಲು ಕಂಡ ಕಾಂಗ್ರೆಸ್‌ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಮರು ಮತ ಎಣಿಕೆಮಾಡುವಂತೆ ಜಿಲ್ಲಾ ಚುನಾವಣಾ ಧಿಕಾರಿ ಮತ್ತು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರಿಗೆ ಕಾರಣ ಸಹಿತವಾಗಿಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಚುನಾವಣಾಧಿ ಕಾರಿಪ್ರಸ್ತುತ ಸ್ಥಿತಿಗತಿ ವಿವರಣೆಯೊಂದಿಗೆ ಫಲಿತಾಂಶಘೋಷಣೆ ಕುರಿತು ಚುನಾವಣೆ ಆಯೋಗದಅನುಮತಿಗೆ ಕಳಿಸಿಕೊಟ್ಟರು. ಚುನಾವಣಾ ಆಯೋಗಪರಿಶೀಲನೆ ನಡೆಸಿ ಅಂತಿಮವಾಗಿ ಫಲಿತಾಂಶ ಘೋಷಣೆಮಾಡುವಂತೆ ಜಿಲ್ಲಾ ಚುನಾವಣಾಧಿ ಕಾರಿಗೆ ಸೂಚನೆನೀಡಿದ ಬಳಿಕ ಜಿಲ್ಲಾ ಚುನಾವಣಾಧಿ ಕಾರಿ ಫಲಿತಾಂಶಘೋಷಣೆ ಮಾಡಿದರು.