Advertisement

ಸವಾಲುಗಳನ್ನುಸಮರ್ಥವಾಗಿ ಎದುರಿಸಿ: ಡಿಸಿ ರಮೇಶ್‌

06:29 PM Dec 07, 2021 | Team Udayavani |

ಚಿಕ್ಕಮಗಳೂರು: ಮಹಿಳಾ ಪೊಲೀಸ್‌ ಸಿಬ್ಬಂದಿಗೆ ತಮ್ಮವೃತ್ತಿ ಜೀವನದಲ್ಲಿ ಅನೇಕ ಸವಾಲುಗಳಿವೆ. ಅವುಗಳನ್ನುಸಮರ್ಥವಾಗಿ ಎದುರಿಸಿ ಕರ್ತವ್ಯ ನಿರ್ವಹಿಸಿದಾಗವೃತ್ತಿ ಬದುಕು ಸಾರ್ಥಕತೆ ಪಡೆದುಕೊಳ್ಳುತ್ತದೆಎಂದು ಜಿಲ್ಲಾ ಧಿಕಾರಿ ಕೆ.ಎನ್‌. ರಮೇಶ್‌ ಪೊಲೀಸ್‌ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ಸೋಮವಾರ ನಗರದ ರಾಮನಹಳ್ಳಿಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತುಮೈದಾನದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದಆಯೋಜಿಸಿದ್ದ 14ನೇ ತಂಡದ 5ನೇ ಮಹಿಳಾಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅನೇಕ ಕನಸುಗಳನ್ನು ಹೊತ್ತುಕೊಂಡು ಅತ್ಯಂತಶ್ರಮಪಟ್ಟು ಈ ವೃತ್ತಿಜೀವನಕ್ಕೆ ಕಾಲಿಟ್ಟಿದ್ದೀರಿ.

ನಿಮ್ಮ ಮೇಲೆ ನಿಮ್ಮ ಕುಟುಂಬ ಹಿತೈಷಿಗಳುನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ನಿರೀಕ್ಷೆಯಂತೆನಡೆದುಕೊಂಡು ಪೊಲೀಸ್‌ ಇಲಾಖೆ ಮತ್ತು ನಿಮ್ಮಕುಟುಂಬಕ್ಕೆ ಗೌರವ ತರಬೇಕು ಎಂದರು.ಎಸ್ಪಿ ಎಂ.ಎಚ್‌. ಅಕ್ಷಯ್‌ ಮಾತನಾಡಿ,ತರಬೇತಿಯ ನಂತರ ನೀವು ಈ ಸಮಾಜದಲ್ಲಿವೃತ್ತಿಜೀವನವನ್ನು ಪ್ರಾರಂಭಿಸುತ್ತೀರಿ. ಅಲ್ಲೀಸೂಕ್ಷ್ಮಮತಿಗಳಾಗಿ ಮತು ಕಾಳಜಿಯಿಂದ ಕರ್ತವ್ಯನಿರ್ವಹಿಸಬೇಕು. ಇಂದು ತಂತ್ರಜ್ಞಾನ ಬೆಳೆದಿದೆ.

ಜನರು ಸೂಕ್ಷ್ಮವಾಗಿ ನಮ್ಮನ್ನು ಗಮನಿಸುತ್ತಾರೆ.ಹಾಗಾಗಿ ಅತ್ಯಂತ ಶ್ರದ್ಧೆ ಮತ್ತು ನಿಷ್ಟೆಯಿಂದ ಕರ್ತವ್ಯನಿರ್ವಹಿಸಬೇಕು ಎಂದರು.ಕಾರ್ಯಕ್ರಮಕ್ಕೂ ಮುನ್ನಾ ಪ್ರಶಿಕ್ಷಣಾರ್ಥಿಗಳಿಂದಪಥಸಂಚಲ ನಡೆಯಿತು. ಭದ್ರಾ ಮೀಸಲುಅರಣ್ಯ ಉಪ ಸಂರಕ್ಷಣಾ ಧಿಕಾರಿ ಪ್ರಭಾಕರ, ಎಡಿಪಿರಾಘವೇಂದ್ರ ರಾಯ್ಕರ್‌, ಪೊಲೀಸ್‌ ತರಬೇತಿಶಾಲೆಯ ಪ್ರಾಂಶುಪಾಲೆ ಶೃತಿ, ಜಿಲ್ಲಾ ಕಾರಾಗೃಹ ಅಧಿàಕ್ಷಕ ರಾಕೇಶ್‌ ಕಾಂಬಳೆ, ಜಿಲ್ಲಾ ವಕೀಲರ ಸಂಘದಅಧ್ಯಕ್ಷ ವಿ.ಟಿ. ಥಾಮಸ್‌, ಕೃಷಿಕ ನರೇಂದ್ರ ಪೈ, ಉಪಪ್ರಾಂಶುಪಾಲ ಪ್ರಭು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next