ಚಿಕ್ಕಮಗಳೂರು: ದಿ ಮೋಟಾರ್‌ನ್ಪೋರ್ಟ್ಸ್ ಕ್ಲಬ್ ಮತ್ತು ಪ್ರವಾಸೋದ್ಯಮಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದರಾಷ್ಟ್ರಮಟ್ಟದ ಟಿಎಸ್‌ಡಿ ಕಾರು ರ್ಯಾಲಿಗೆನಗರದ ಕೈಮರದ ಸಿರಿ ನೇಚರ್ ರೂಸ್ಟ್‌ನಲ್ಲಿಜಿಲ್ಲಾ ಧಿಕಾರಿ ಕೆ.ಎನ್. ರಮೇಶ್ ಚಾಲನೆ ನೀಡಿದರು.
ಶನಿವಾರ ಕಾರು ರ್ಯಾಲಿಗೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಕೋವಿಡ್‌ಬಳಿಕ ಕ್ರೀಡಾ ಚಟುವಟಿಕೆ ಆಯೋಜನೆಮಾಡಿರುವುದು ಸಂತಸ ತಂದಿದೆ. ಮುಂದಿನದಿನಗಳಲ್ಲಿ ಮತ್ತಷ್ಟು ವೈವಿಧ್ಯಮಯಕಾರ್ಯಕ್ರಮಗಳು ಆಯೋಜನೆಗೊಳ್ಳಲಿಎಂದು ಹೇಳಿದರು.
ಚಿಕ್ಕಮಗಳೂರು ದಿ ಮೋಟಾರ್‌ನ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಜಯಂತ್‌ಪೈ ಮಾತನಾಡಿ, ಈ ರ್ಯಾಲಿ ನ್ಯಾವಿಗೇಶನ್‌ಮತ್ತು ಲೆಕ್ಕಾಚಾರಿಕವಾಗಿದ್ದು ಟೈಪ್ ಸ್ಪೀಡ್‌ಡಿಸ್ಟೆನ್ಸ್ ಫಾರ್ಮೆಟ್‌ನಲ್ಲಿ ನಡೆಯಲಿದೆ.ಲೆಗ್ 1 ರಂದು 180 ಕಿ.ಮೀ. ಮತ್ತುಲೆಗ್ 260 ಕಿಮೀ. ಸೇರಿದಂತೆ ಒಟ್ಟು 240ಕಿಮೀ ರ್ಯಾಲಿ ಇದಾಗಿದ್ದು ಸಂಜೆ 7.30ಕ್ಕೆಮೂಡಿಗೆರೆಯ ಡಿ ಕಾμ ಕೋರ್ಟ್‌ತಲುಪಿ ಭೋಜನ ವಿರಾಮದ ಬಳಿಕ8:30ಕ್ಕೆ ಪುನಃ ರ್ಯಾಲಿ ಪ್ರಾರಂಭವಾಗಿ ರಾತ್ರಿ10.30ಕ್ಕೆ ಚಿಕ್ಕಮಗಳೂರು ತಲುಪಲಿದೆ ಎಂದರು.
ರ್ಯಾಲಿಯಲ್ಲಿ ಗೌಪ್ಯ ಚೆಕ್ ಪಾಯಿಂಟ್‌ಗಳನ್ನು ಅಳವಡಿಸಿದೆ. ಜತೆಗೆ ಇದರಲ್ಲಿ ಪ್ರೊಎಕ್ಸ³ರ್ಟ್ ವಿಭಾಗ, ಪ್ರೋ ಸ್ಟಾಕ್ ವಿಭಾಗ, ಕಪಲ್‌ವಿಭಾಗ, ಕಾರ್ಪೊರೇಟ್ ವಿಭಾಗ, ನಾವೀಸ್‌ವಿಭಾಗ, ಮಹಿಳಾ ವಿಭಾಗ ಸೇರಿದಂತೆಬೇರೆ ಬೇರೆ ವಿಭಾಗಗಳನ್ನು ಮಾಡಲಾಗಿದೆ.
ದಿ ರ್ಯಾಲಿ ಆಫ್ ಚಿಕ್ಕಮಗಳೂರಿನಲ್ಲಿ 40 ಸ್ಪರ್ಧಿಗಳು ಭಾಗವಹಿಸಿದ್ದಾರೆ ಎಂದು ಮಾಹಿತಿನೀಡಿದರು.ಎಸ್ಪಿ ಎಂ.ಎಚ್.ಅಕ್ಷಯ್, ಜಿಪಂ ಸಿಇಒಜಿ.ಪ್ರಭು, ಚಿಕ್ಕಮಗಳೂರು ಚಿಕ್ಕಮಗಳೂರುದಿ ಮೋಟರ್ ನ್ಪೋರ್ಟ್ಸ್ ಕ್ಲಬ್‌ನ ಉಪಾಧ್ಯಕ್ಷಫಾರೂಕ್ ಅಹಮದ್, ಜಂಟಿ ಕಾರ್ಯದರ್ಶಿಅಭಿಜಿತ್ ಪೈ, ಕಾರ್ಯಕ್ರಮ ಆಯೋಜಕದಿಲೀಪ್, ಸದಸ್ಯ ದಿವಿನ್ ಇದ್ದರು.