Advertisement

ಸಿ.ಟಿ. ರವಿ ಕುರುಬ ಸಮಾಜ ವಿರೋಧಿಯಲ್ಲ

03:24 PM Nov 11, 2021 | Team Udayavani |

ಚಿಕ್ಕಮಗಳೂರು: ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮತ್ತುತಮ್ಮ ರಾಜಕೀಯ ಲಾಭ ಪಡೆಯಲು ಸಿ.ಟಿ. ರವಿಅವರನ್ನು ಕುರುಬ ಸಮಾಜದ ವಿರೋ ಧಿ ಎಂದುಬಿಂಬಿಸಲು ಪ್ರಯತ್ನ ಕಾಂಗ್ರೆಸ್‌ ಮುಖಂಡರುಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಶಿಕ್ಷಣ ಪ್ರಕೋಷ್ಠಸಂಚಾಲಕ ಎಚ್‌.ಎಸ್‌. ಪುಟ್ಟೇಗೌಡ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕಾಂಗ್ರೆಸ್‌ ಮುಖಂಡರು ಕುರುಬರ ಸಂಘದಹೆಸರಿನಡಿ ಶಾಸಕ ವಿರುದ್ಧ ಪ್ರತಿಭಟನೆಮಾಡಿರುವುದು ಹಾಸ್ಯಾಸ್ಪದ. ಶಾಸಕ ಸಿ.ಟಿ.ರವಿಅವರು ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದರೆಹೊರತು ಕುರುಬ ಸಮುದಾಯವನ್ನಲ್ಲ,ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿನರೇಂದ್ರ ಮೋದಿಯವರನ್ನು ಹೆಬ್ಬೆಟ್ಟು ಎಂದು ಸಂಬೋಧಿಸಬಹುದೆ. ಮುಖ್ಯಮಂತ್ರಿ ಬೊಮ್ಮಾಯಿಅವರನ್ನು ಏಕ ವಚನದಲ್ಲಿ ಕರೆದಿರುವುದು ಎಷ್ಟುಸರಿ ಎಂದರು.

ಕಾಂಗ್ರೆಸ್‌ ಮುಖಂಡರು ಜಾತಿ ರಾಜಕಾರಣಮಾಡಲು ಮತ್ತು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲುಶಾಸಕ ಸಿ.ಟಿ.ರವಿ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಆರೋಪ ಮಾಡಿದವರುಬಿಜೆಪಿ ಪಕ್ಷದಲ್ಲಿದ್ದಾಗ ಜಿಲ್ಲಾ ಪಂಚಾಯತ್‌ ಅಧ್ಯಕ್ಷರಾಗಿರಲಿಲ್ಲವೇ, ರಾಜ್ಯ ತೆಂಗುನಾರುಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರಲಿಲ್ಲವೇ ಬೀರೂರು ವಿಧಾನಸಭೆ ಚುನಾವಣೆಗೆ ಕ್ಷೇತ್ರ ದಿಂದಟಿಕೆಟ್‌ ಪಡೆದಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು,ಪಕ್ಷದಲ್ಲಿದ್ದಾಗ ಎಲ್ಲಾ ಅ ಧಿಕಾರವನ್ನು ಪಡೆದುಈಗ ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ದಿವೇಣುಗೋಪಾಲಮಾತನಾಡಿ, ಕೊರೊನಾ ಸಂಕಷ್ಟದ ನಡುವೆಯೂದೇಶದಲ್ಲಿ ತೈಲಬೆಲೆ ಇಳಿಕೆಮಾಡಿರುವುದುಸ್ವಾಗತಾರ್ಹ. ತೈಲಬೆಲೆ ಏರಿಕೆ ಯಾಗಿದ್ದಾಗಪ್ರತಿಭಟಿಸಿದ ಕಾಂಗ್ರೆಸ್‌ ಈಗ ತಮ್ಮದೇ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತೈಲಬೆಲೆ ಇಳಿಕೆಮಾಡಲಿ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮಸಂಚಾಲಕ ಸುಧೀ ರ್‌, ಮುಖಂಡರಾದ ಜಯಣ್ಣ,ರಾಜು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next