ಚಿಕ್ಕಮಗಳೂರು: ಭೂಮಿಯಮೇಲಿರುವ ನೈಸರ್ಗಿಕ ಸಂಪನ್ಮೂಲವನ್ನುಬಳಸಿಕೊಳ್ಳುವ ಹಕ್ಕು ಮಾನವನಿಗೆ ಮಾತ್ರಸೀಮಿತವಲ್ಲ. ಪ್ರತಿ ಜೀವ ಸಂಕುಲಕ್ಕೂಇದೆ ಎಂದು ವಕೀಲರ ಸಂಘದಕಾರ್ಯದರ್ಶಿ ಡಿ.ಬಿ. ಸುಜೇಂದ್ರ ಹೇಳಿದರು.
ಶ್ರೀನಿವಾಸ ನಗರದ ಚಿಂತಾಮಣಿಸಮುದಾಯ ಭವನದಲ್ಲಿ ಅರಣ್ಯಇಲಾಖೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದಕಾನೂನು ಅರಿವು ಕಾರ್ಯಕ್ರಮದಲ್ಲಿಅವರು ಉಪನ್ಯಾಸ ನೀಡಿದರು.ಕಾನೂನಿಗಿಂತ ದೊಡ್ಡವರುಯಾರೂ ಇಲ್ಲ. ಅರಣ್ಯ ಸಂರಕ್ಷಣೆಗೆಕಟಿಬದ್ಧರಾಗುವುದು ಪ್ರತಿಯೊಬ್ಬನಾಗರಿಕನ ಕರ್ತವ್ಯವಾಗಿದೆ.
ಕಾಡನ್ನುಉಳಿಸಿ, ಬೆಳೆಸಿ, ಸಂರಕ್ಷಿಸಲು ಎಲ್ಲರಸಹಕಾರ ಅಗತ್ಯ ಎಂದರು.ಭಾರತ ಸರ್ಕಾರ 1981ರಲ್ಲಿ ಅರಣ್ಯಸಂರಕ್ಷಣಕಾಯ್ದೆಯನ್ನುಜಾರಿಗೆತಂದಿದ್ದು,ಸಂವಿ ಧಾನಾತ್ಮಕವಾಗಿ ಅರಣ್ಯವನ್ನುಉಳಿಸಿ, ಬೆಳಸಬೇಕೆಂಬುದು, ವನ್ಯಜೀವಿ,ನೈಸರ್ಗಿಕ ಸಂಪನ್ಮೂಲ, ಗಿಡ-ಮರಗಳರಕ್ಷಣೆ ಮಾಡಲುಈಅರಣ್ಯಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ.ಪ್ರತಿ ರಾಜ್ಯದಲ್ಲೂ ಅರಣ್ಯ ಕಾಯ್ದೆಗಳನ್ನುÃೂಪಿÓ ಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸದಸ್ಯಕಾರ್ಯದರ್ಶಿಹಾಗೂ ಸಿವಿಲ್ ನ್ಯಾಯಾಧೀಶ ಎ.ಎಸ್.ಸೋಮು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ಬಾಯಿ ಇತರರುಇದ್ದರು.