ಚಿಕ್ಕಮಗಳೂರು: ಕಳಸ ತಾಲೂಕು ಕಾರ್ಲೆ ಗ್ರಾಮಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ನಿತ್ಯ ನರಕವೇದನೆ ಅನುಭವಿಸುವಂತಾಗಿದೆ.ರಾಜ್ಯ ಸರ್ಕಾರ ಕಳಸ ತಾಲೂಕು ಕೇಂದ್ರವಾಗಿನಿರ್ಮಿಸಿದ್ದು, ಕಳಸದಿಂದ 20 ಕಿ.ಮೀ.ದೂರದಲ್ಲಿರುವ ಸಂಸೆ ಗ್ರಾಪಂ ವ್ಯಾಪ್ತಿಗೆ ಸೇರಿದಕಾರ್ಲೆ ಗ್ರಾಮ ಕುಗ್ರಾಮವಾಗಿದ್ದು, ಸಂಪರ್ಕಸೌಲಭ್ಯವಿಲ್ಲದೆ ಬದುಕುತ್ತಿದ್ದಾರೆ.
ಗ್ರಾಮದಲ್ಲಿ 20ಕುಟುಂಬಗಳು ವಾಸವಾಗಿದ್ದು, ಸರ್ಕಾರಿ ಕಚೇರಿ,ಆಸ್ಪತ್ರೆ, ದಿನಸಿ, ಕೃಷಿಗೆ ಅಗತ್ಯವಾದ ವಸ್ತುಗಳಖರೀದಿ, ಶಾಲಾ ಮಕ್ಕಳ ಶಿಕ್ಷಣ ಸೇರಿದಂತೆ ಎಲ್ಲಾಅಗತ್ಯತೆಗಳಿಗೆ ಕಳಸ ಪಟ್ಟಣವನ್ನೇ ಅವಲಂಬಿಸಿದ್ದಾರೆ.ಗ್ರಾಮದ ನಿವಾಸಿಗಳು, ಕೃಷಿಕರು, ಶಾಲಾ- ಕಾಲೇಜುವಿದ್ಯಾರ್ಥಿಗಳು ಕಳಸ ಪಟ್ಟಣಕ್ಕೆ ಬರಲು ಗ್ರಾಮದಸಮೀಪದಲ್ಲಿ ಹರಿಯುವ ಭದ್ರಾನದಿ ಉಪನದಿದಾಟಿ ಬರಬೇಕಿದ್ದು, ನದಿ ದಾಟಲು ಹರಸಾಹಸಪಡಬೇಕಿದೆ.
ನದಿ ದಾಟಲು ಸೇತುವೆ ಇಲ್ಲದೆ ಗ್ರಾಮಸ್ಥರುತೂಗುಸೇತುವೆಯನ್ನು ನಿರ್ಮಿಸಿಕೊಂಡಿದ್ದು, ಸ್ವಲ್ಪಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.ಶಾಲಾ- ಕಾಲೇಜು ವಿದ್ಯಾರ್ಥಿಗಳನ್ನು ಪೋಷಕರುಬೆಳಗ್ಗೆ ಮತ್ತು ಸಂಜೆ ನದಿ ದಾಟಿಸಿ ಹೋಗಬೇಕಾದಪರಿಸ್ಥಿತಿ ಇದೆ.ಈ ಸಂಬಂಧ ಗ್ರಾಮಸ್ಥರು ಜನಪ್ರತಿನಿ ಧಿಗಳಗಮನಕ್ಕೆ ತಂದಿದ್ದು, ಸರ್ಕಾರದಿಂದ ನದಿಗೆ ಸೇತುವೆ ನಿರ್ಮಿಸಲಾಗಿತ್ತು.
ಆದರೆ, 2019ರಲ್ಲಿ ಸಂಭವಿಸಿದಭಾರೀ ಅತಿವೃಷ್ಟಿಯಿಂದ ಸೇತುವೆ ನದಿನೀರಿನಲ್ಲಿಕೊಚ್ಚಿ ಹೋಗಿದೆ. ಸೇತುವೆ ಕೊಚ್ಚಿ ಹೋಗಿ 2 ವರ್ಷಕಳೆದರೂ ಸೇತುವೆ ಮರು ನಿರ್ಮಾಣ ಕಾರ್ಯನಡೆದಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.ಸೇತುವೆ ಇಲ್ಲದಿರುವುದರಿಂದ ಯಾವುದೇವಾಹನಗಳು ಗ್ರಾಮಕ್ಕೆ ಬರುತ್ತಿಲ್ಲ. ಜನರುಅನಾರೋಗ್ಯಕ್ಕೆ ತುತ್ತಾದಾಗ ಕಂಬಳಿಯಲ್ಲಿ ಕಟ್ಟಿಹೊತ್ತು ಪಟ್ಟಣಕ್ಕೆ ಹೋಗಬೇಕಾದ ಸ್ಥಿತಿ ಇದೆ.
ಅಗತ್ಯವಸ್ತುಗಳನ್ನು ತಲೆ ಮೇಲೆ ಹೊತ್ತು ಹೋಗಬೇಕಾದಪರಿಸ್ಥಿತಿ ಇದ್ದು ನಿತ್ಯ ಸಂಕಟ ಅನುಭವಿಸಬೇಕಾಗಿದೆ.ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಗಳು, ಅಧಿಕಾರಿಗಳು, ಶಾಸಕರು ಗಮನ ಹರಿಸಿ ಸುಸಜ್ಜಿತಸೇತುವೆ ನಿರ್ಮಿಸಿಕೊಡಬೇಕು. ಇಲ್ಲವಾದಲ್ಲಿ ನದಿಗೆಅಡ್ಡಲಾಗಿ ಸುಸಜ್ಜಿತ ಆಧುನಿಕ ಮಾದರಿಯ ತೂಗುಸೇತುವೆಯನ್ನಾದರೂ ನಿರ್ಮಿಸಿಕೊಡಬೇಕೆಂದುಗ್ರಾಮಸ್ಥರು ಆಗ್ರಹಿಸಿದ್ದಾರೆ.