Advertisement
ಚಿಕ್ಕಬಳ್ಳಾಪುರ ನಗರಸಭೆಯ ವ್ಯಾಪ್ತಿಯಲ್ಲಿ 5 ಕೋಟಿ 93 ಲಕ್ಷ ವಸೂಲಿ ಮಾಡುವ ಗುರಿ ಹಾಕಿಕೊಂಡು ಈಗಾಗಲೇ 2 ಕೋಟಿ 60 ಲಕ್ಷ ರೂಗಳು ಸಂಗ್ರಹ ಮಾಡುವುದರಲ್ಲಿ ನಗರಸಭೆಯ ಪೌರಾಯುಕ್ತ ಲೋಹಿತ್ ಅವರ ನೇತೃತ್ವದ ನಗರಸಭೆಯ ಅಧಿಕಾರಿಗಳ ತಂಡ ಸಫಲವಾಗಿದೆ ನಗರದ 27ನೇ ವಾರ್ಡಿನಲ್ಲಿ ತೆರಿಗೆ ವಸೂಲಿ ಅಭಿಯಾನ ನಡೆಸಿ ಸುಮಾರು 4 ಲಕ್ಷ ರೂಗಳನ್ನು ಸಂಗ್ರಹ ಮಾಡಿದ್ದಾರೆ.
Related Articles
Advertisement
ನಗರಸಭೆಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ 4 ಕೋಟಿ 58 ಲಕ್ಷ ರೂಗಳು ವಸೂಲಿ ಮಾಡುವ ಗುರಿ ಹೊಂದಿ ಈಗಾಗಲೇ 2 ಕೋಟಿ 10 ಲಕ್ಷ ರೂಗಳು ವಸೂಲಿ ಮಾಡಲಾಗಿದೆ ಕುಡಿಯುವ ನೀರು ತೆರಿಗೆ 1 ಕೋಟಿ 31 ಲಕ್ಷ ರೂಗಳು ವಸೂಲಿ ಮಾಡುವ ಗುರಿ ಹೊಂದಿದ್ದು 50 ಲಕ್ಷ ರೂಗಳು ವಸೂಲಿಯಾಗಿದೆ ಎಂದು ಪೌರಾಯುಕ್ತರು ಉದಯವಾಣಿಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಆರ್.ಲತಾ ಅವರ ಮಾರ್ಗದರ್ಶನದಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ಕಸಕಡ್ಡಿಗಳ ವಿಲೇವಾರಿ ಮಾಡಲು ನಗರಸಭೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.ಇದರ ಜೊತೆಗೆ ನಗರವನ್ನು ಸ್ವಚ್ಛ ಮತ್ತು ಹಸಿರುಮಯ ಮಾಡಲು ಕಾರ್ಯಪ್ರವೃತರಾಗಿದ್ದಾರೆ.
ರಾಜ್ಯದಲ್ಲಿ ಚಿಕ್ಕಬಳ್ಳಾಪುರ ನಗರವನ್ನು ಮಾದರಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಸೂಚನೆ ಮೇರೆಗೆ ನಗರಸಭೆಯ ವ್ಯಾಪ್ತಿಯಲ್ಲಿ ವಾರ್ಡ್‍ಗಳ ಅಭಿವೃಧ್ಧಿಗಾಗಿ ನಾಗರಿಕ ಸಮಿತಿಗಳನ್ನು ಸಹ ರಚಿಸಿ ಅವರಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆದುಕೊಳ್ಳಲು ನಗರಸಭೆಯ ಅಧಿಕಾರಿಗಳು ಮುಂದಾಗಿದ್ದಾರೆ.