Advertisement

ಚಿಕ್ಕಬಳ್ಳಾಪುರ: ಡಿವೈಎಸ್ಪಿ ರವಿಶಂಕರ್‌ಗೆ ರಾಷ್ಟ್ರಪತಿ ಪದಕ

11:57 AM Jan 09, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಪೊಲೀಸ್‌ ಇಲಾಖೆಯಲ್ಲಿ ನಿಷ್ಠೆ, ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ರುವ ಸೇವೆ ಗುರುತಿಸಿ ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಕೆ.ರವಿಶಂಕರ್‌ ಅವರು 2019ನೇ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

Advertisement

ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಾಜುಭಾಯಿ ವಾಲಾ ಅವರು ಡಿವೈಎಸ್ಪಿ ಕೆ.ರವಿಶಂಕರ್‌ ಅವರಿಗೆ ಪೊಲೀಸ್‌ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪ್ರದಾನ ಮಾಡಿದರು.

ಅಪರಾಧ ಚಟುವಟಿಕೆಗೆ ಬ್ರೇಕ್‌: 1994ರಲ್ಲಿ ಪಿಎಸ್‌ಐ ಆಗಿ ಪೊಲೀಸ್‌ ಇಲಾಖೆಗೆ ಸೇರಿದ ರವಿಶಂಕರ್‌ ಅವರು ಕೊಡಗು, ರಾಮನಗರ ಜಿಲ್ಲೆ, ರಾಜ್ಯ ಗುಪ್ತವಾರ್ತೆ, ಬೆಂಗಳೂರು ನಗರ ಮತ್ತು ಕರ್ನಾಟಕ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಇಲಾಖೆಯಲ್ಲಿ ಆರಕ್ಷಕ ಉಪ ನಿರೀಕ್ಷಕರಾಗಿದ್ದ ಸಂದರ್ಭದಲ್ಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ಜೊತೆಗೆ ಮುಂಜಾಗ್ರತ ಕ್ರಮ ಕೈಗೊಂಡಿದ್ದರಿಂದ ಇವರ ಸೇವೆ ಪರಿಗಣಿಸಲಾಗಿದೆ.

ಇದನ್ನೂ ಓದಿ:ಈ ವರ್ಷವೂ ಬಜೆಟ್ ನಲ್ಲಿ 40- 50 ಸಾವಿರ ಕೋಟಿ ಖೋತಾ : ಸಿಎಂ ಯಡಿಯೂರಪ್ಪ

ಸಾಧನೆಗಳು: ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಡಿವೈಎಸ್ಪಿ ಕೆ.ರವಿಶಂಕರ್‌ ಅವರು ತಮ್ಮ ಅವಧಿಯಲ್ಲಿ ಬಿಡದಿಯಲ್ಲಿ ರೆಸಾರ್ಟ್‌ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ಮಾಹಿತಿ ಅರಿತು ಮೇಲೆ ದಾಳಿ ನಡೆಸಿ ಕೆಲವರನ್ನು
ಬಂಧಿಸಿದ್ದರು. ಕೇರಳ ರಾಜ್ಯಕ್ಕೆ ಖೋಟಾ ನೋಟು ಸರಬರಾಜು ಮಾಡುತ್ತಿದ್ದ ವಾಹನ ನಿಲ್ಲಿಸಿ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದರು.

Advertisement

2004-05ನೇ ಸಾಲಿನಲ್ಲಿ ಕಾಡುಗಳ್ಳ ವೀರಪ್ಪನ್‌ ವಿರುದ್ಧ ಎಸ್‌ಟಿಎಫ್‌ ಕಾರ್ಯಚರಣೆಯಲ್ಲಿ ತಮಿಳುನಾಡು ರಾಜ್ಯದೊಂದಿಗೆ ಲಯಿಸನ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

14 ಬಾಂಗ್ಲಾದೇಶಿಗರ ರಕ್ಷಣೆ
ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಹಲವು ಟ್ರ್ಯಾಪ್‌ ಮತ್ತು ದಾಳಿಗಳನ್ನು ನಡೆಸಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಮಾನವ ಕಳ್ಳ ಸಾಗಾಣಿಕೆ ನಡೆಸುತ್ತಿದ್ದ ಗುಂಪನ್ನು ಪತ್ತೆಹಚ್ಚಿ 12 ಆರೋಪಿಗಳನ್ನು ಸೆರೆಹಿಡಿದು ಅವರಿಂದ 14 ಬಾಂಗ್ಲಾದೇಶಿಗರನ್ನು ರಕ್ಷಣೆ ಮಾಡಿದ್ದರು. ಇಲಾಖೆಯಲ್ಲಿ ಇವರ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿಗಳ ಸೇವಾ ಪದಕ ನೀಡಿ ಗೌರವಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next