ಚಿಕ್ಕಬಳ್ಳಾಪುರ: ತಾಲೂಕಿನಲ್ಲಿ ವಿವಿಧ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ನಿರೀಕ್ಷೆಯಂತೆ ಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದರು.
ಚಿಕ್ಕಬಳ್ಳಾಪುರ ವಿಧಾನಸಭಾದ ಕುಪ್ಪಹಳ್ಳಿ,ದೊಡ್ಡಮರಳಿ, ಅಜ್ಜವಾರ, ಮುದ್ದೇನಹಳ್ಳಿ ಹಾಗೂ ಮಂಚೇನಹಳ್ಳಿ ಹೋಬಳಿ ಶಾಂಪುರ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಮುದ್ದೇನಹಳ್ಳಿ: ಅಧ್ಯಕ್ಷರಾಗಿ ಮುನಿನಾರಾಯಣಪ್ಪ ಪ್ರತಿಸ್ಪರ್ಧಿ ರಾಜಣ್ಣ ವಿರುದ್ಧ 8 ಮತ ಅಂತರದಿಂದ ಹಾಗೂ ಉಪಾಧ್ಯಕ್ಷರಾಗಿ ನಂದಿನಿ ರಮೇಶ್ ಅವರು10 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಉಳಿದ ಗ್ರಾಪಂಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ :ಬೋನಿನಲ್ಲಿ ಸೆರೆ: 25 ಕೋತಿಗಳ ಸಾವು
ಕುಪ್ಪಹಳ್ಳಿ: ಅಧ್ಯಕ್ಷರಾಗಿ ಕುಡುವತಿ ನಾರಾಯಣಸ್ವಾಮಿ,ಉಪಾಧ್ಯಕ್ಷರಾಗಿ ನಂದಿನಿ ದೇವರಾಜ್, ದೊಡ್ಡಮರಳಿ ಗ್ರಾಪಂ ಅಧ್ಯಕ್ಷ ಬೀಡಗಾನಹಳ್ಳಿ ಮಂಜುನಾಥ್, ಉಪಾಧ್ಯಕ್ಷರಾಗಿ ನಾಗವೇಣಿ ಶಿವಕುಮಾರ್, ಅಜ್ಜವಾರ ಅಧ್ಯಕ್ಷ ನಾಯನಹಳ್ಳಿ ಲಕ್ಷ್ಮಮ್ಮ ಹನುಮಂತಪ್ಪ, ಶಾಂಪುರ ಅಧ್ಯಕ್ಷ ಸಾದೇನಹಳ್ಳಿ ಮಂಜುನಾಥರೆಡ್ಡಿ,ಉಪಾಧ್ಯಕ್ಷರಾಗಿ ಜಿ.ರವಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಭಿನಂದನೆ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಈ ಗೆಲುವು ನಾಂದಿಯಾಗಲಿದೆ ಎಂದು ತಿಳಿಸಿದ್ದಾರೆ.