ಚಿಕ್ಕಬಳ್ಳಾಪುರ: ಹಲವು ದಿನಗಳಿಂದ ಗೌರಿಬಿದನೂರು ಹೋಗಲು ಧೈರ್ಯ ತೋರದ ಜಿಲ್ಲಾಡಳಿತ ಶನಿವಾರ ಜಿಲ್ಲೆಯ ಗೌರಿಬಿದನೂರುನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಬೆನ್ನಲೇ ಇಡೀ ಜಿಲ್ಲಾಡಳಿತ ಗೌರಿಬಿದನೂರು ಪಟ್ಟಣಕ್ಕೆ ದೌಡಾಯಿಸಿದೆ.
ಇಡೀ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಾಗಲೋಟದಂತೆ ಮುಂದುವರೆದಿದ್ದು ಆರಂಭದಲ್ಲಿ ಕೇವಲ ಮೂವರು ಇದ್ದ ಸೋಂಕಿತರ ಸಂಖ್ಯೆ ಈಗ 9ಕ್ಕೆ ಏರಿದ್ದು ಇನ್ನೂ ಹೆಚ್ಚಾಗುವ ಆತಂಕ ಮೂಡಿಸಿದೆ.
ಗೌರಿಬಿದನೂರಲ್ಲಿ ಮೆಕ್ಕಾಗೆ ಹೋಗಿ ಬಂದಿದ್ದ 32 ವರ್ಷದ ವ್ಯಕ್ತಿಯಲ್ಲಿ ಕಾಣಿಸಿಕೊಂಡು ಸೋಂಕು ಈಗಾಗಲೇ 70 ವರ್ಷದ ವೃದ್ದೆಯನ್ನು ಬಲಿ ಪಡೆದುಕೊಂಡಿದೆ.
ಡಿಸಿಎಂ ಸೂಚನೆ
ಗೌರಿಬಿದನೂರು ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ವಾದ ಬೆನ್ನಲೇ ಶನಿವಾರ ಬೆಂಗಳೂರುನಿಂದಲೇ ಡಿಸಿಎಂ ಆಗಿರು ಉಸ್ತುವಾರಿ ಸಚಿವ ಅಶ್ವತನಾರಾಯಣ್ ಜಿಲ್ಲಾಡಳಿತದೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರ ಹಿನ್ನಲೆಯಲ್ಲಿ ವಿಶೇಷವಾಗಿ ಗೌರಿಬಿದನೂರು ಬೇಟಿ ನೀಡಿ ಪರಿಸ್ಥಿತಿ ನಿಭಾಯಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಬಿ.ಫೌಜಿಯಾ ತರುನ್ನುಮ್, ಎಸ್ಪಿ ಮಿಥುನ್ ಕುಮಾರ್ ಬೇಟಿ ನೀಡಿ ಸ್ಥಳೀಯ ಆಡಳಿತದೊಂದಿಗೆ ಸಮಾಲೋಚನೆ ನಡೆಸಿದ್ದಾರೆ.