ಚಿಂತಾಮಣಿ: ಅವಳಿ ಜಿಲ್ಲೆಯಲ್ಲಿ ಅಂತರ್ಜಲಬಳಕೆ ಕಡಿಮೆ ಮಾಡಿ, ಮೇಲ್ಮೈ ನೀರು ಹೆಚ್ಚುಉಪಯೋಗಿಸಿಕೊಂಡು ಬೆಳೆ ಬೆಳೆಯಬೇಕು ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ಸಂತೆಕಲ್ಲಹಳ್ಳಿ, ತಳಗವಾರಗ್ರಾಪಂ ವ್ಯಾಪ್ತಿಯಲ್ಲಿ ಅಟಲ್ ಭೂಜಲಯೋಜನೆಗೆ ಚಾಲನೆ ನೀಡಿ ಮಾತನಾಡಿ,ಕಡಿಮೆ ನೀರಲ್ಲಿ ಹೆಚ್ಚು ಇಳುವರಿ ನೀಡುವ ಬೆಳೆಬೆಳೆಯಲು ಹೆಚ್ಚು ಒತ್ತು ನೀಡಬೇಕು. ಆದಷ್ಟುಮಳೆಯಾಧಾರಿತ ಬೆಳೆಗೆ ಆದ್ಯತೆ ನೀಡಬೇಕುಎಂದು ಸಲಹೆ ನೀಡಿದರು.
ಮಾರ್ಗದರ್ಶನದಂತೆ ನಡೆಯಿರಿ: ಅಟಲಭೂಜಲ ಯೋಜನೆ ಮುಖ್ಯ ಉದ್ದೇಶ ಅಂತರ್ಜಲ ಅಭಿವೃದ್ಧಿ.ಈಯೋಜನೆಯ ಮಾರ್ಗದರ್ಶನದಂತೆ ಕೃಷಿ ಪ¨ತಿ ಅ œ ಳವಡಿಕೆಮಾಡಿಕೊಂಡು ಸಂಸ್ಥೆಯ ಸೂಚನೆಯಂತೆನೀರನ್ನು ಬಳಕೆ ಮಾಡಿಕೊಂಡು, ಉತ್ತಮ ಬೆಳೆಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಆಗಬೇಕುಎಂದು ವಿವರಿಸಿದರು.ಇನ್ನು ಕೃಷಿಯನ್ನಷ್ಟೇ ನಂಬದೇ ಹೈನುಗಾರಿಕೆಯಲ್ಲಿ ತೊಡಗಿ ಮೇಕೆ, ಕುರಿ ಹಾಗೂ ಹಸುಸಾಕಾಣಿಕೆ ಮಾಡಿ ಆರ್ಥಿಕ ಅಭಿವೃದ್ಧಿ ಆಗಬೇಕು. ಇದರಿಂದ ನೀರಿನ ಬಳಕೆಯೂಕಡಿಮೆಯಾಗುತ್ತೆ, ಅಂತರ್ಜಲವೂ ವೃದ್ಧಿಆಗುತ್ತದೆ ಎಂದು ಹೇಳಿದರು.
ಅಂತರ್ಜಲ ಅಭಿವೃದ್ಧಿಗೆ ಸಹಕಾರ: ಇಒಮಂಜುನಾಥ ಮಾತನಾಡಿ, ಅಂತರ್ಜಲಹೆಚ್ಚಿಸಬೇಕಾದರೆ ಮಳೆ ಸುರಿಯಬೇಕು. ಅದಕ್ಕೆಸಸಿ ನೆಟ್ಟು ಮಣ್ಣು ಸವಕಳಿ ತಡೆದು, ನೀರುನಿಲ್ಲುವಂತೆ ಮಾಡಬೇಕು. ನಂತರ ನಿಂತನೀರು ಇಂಗುವಂತೆ ಮಾಡಿದಾಗ ಅಂತರ್ಜಲವೃದ್ಧಿ ಆಗುತ್ತೆ. ಆದರಿಂದ ಪ್ರತಿಯೊಬ್ಬರುಗಿಡನೆಟ್ಟು ಪೋಷಣೆ ಮಾಡಬೇಕು ಜೊತೆಗೆನರೇಗಾ ಯೋಜನೆಯಡಿ ಇಂಗುಗುಂಡಿ,ಕೃಷಿ ಹೊಂಡ, ಕೆರೆ ಕಟ್ಟೆ ನಿರ್ಮಾಣ ಮಾಡಿಅಂತರ್ಜಲ ಅಭಿವೃದ್ಧಿಗೆ ಸಹಕರಿಸಬೇಕುಎಂದು ವಿವರಿಸಿದರು.
ಎನ್‌ಆರ್‌ಡಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟರವಣಸ್ವಾಮಿ, ಅಟಲ್ ಭೂಜಲಯೋಜನೆ ನೋಡಲ್ ಅಧಿಕಾರಿ ಹರೀಶ್‌ಕುಮಾರ್, ಕೃಷಿ ಇಲಾಖೆ ನಿರ್ದೇಶಕಅನುರೂಪಾ, ಸಹಾಯಕ ನಿರ್ದೇಶಕಶ್ರೀನಿವಾಸ್, ರೇಷ್ಮೆ ಸಹಾಯಕ ನಿರ್ದೇಶಕಆಂಜನೇಯರೆಡ್ಡಿ, ತಾಲೂಕು ಅಟಲ್ ಭೂಜಲ ತಂಡದ ಮುಖ್ಯಸ್ಥ ಎಂ.ಎನ್.ರಾಮಪ್ಪ,ಕೃಷಿಕ ಸಮಾಜದ ಅಧ್ಯಕ್ಷ ಗೋವಿಂದಪ್ಪ, ತಾಪಂಮಾಜಿ ಸದಸ್ಯ ಸಂತ್ತೆಕಲ್ಲಹಳ್ಳಿ ಎಚ್.ನಾರಾಯಣಸ್ವಾಮಿ, ಕೈವಾರ ಸುಬ್ಟಾರೆಡ್ಡಿ,ಸಂತ್ತೆಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ಶಶಿಕಲಾಚೌಡರೆಡ್ಡಿ, ತಳಗವಾರ ಗ್ರಾಪಂ ಅಧ್ಯಕ್ಷಮಂಜುನಾಥ, ಪಿಡಿಒ ಪ್ರತಿಭಾ, ತಳಗವಾರಪಿಡಿಒ ಸುಕಾಂತ್, ಸಂತ್ತೆಕಲ್ಲಹಳ್ಳಿ ಗ್ರಾಪಂಕಾರ್ಯದರ್ಶಿ ಆದಿಲಕ್ಷಿ ¾à, ಮುಖಂಡರಾದಮಹೇಶ್, ಆಟ್ಟೂರು ಗ್ರಾಪಂ ಸದಸ್ಯನರಸಿಂಹಮೂರ್ತಿ, ಪ್ರಭಾಕರ್ ಇತರರಿದ್ದರು.